ಸ್ಯಾಂಡಲ್‌ವುಡ್ “ಫೇಸ್ ಆ್ಯಪ್’ ಕ್ರೇಜ್
Team Udayavani, Jul 22, 2019, 3:00 AM IST
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಟ್ರೆಂಡ್ ಶುರು ಆಗುವುದು ಈಗಂತೂ ಮಾಮೂಲಿ. ಸದ್ಯ, ಈಗ ಟ್ರೆಂಡ್ ಆಗಿರುವುದೆಂದರೆ, ಅದು ಫೇಸ್ ಆ್ಯಪ್. ಈ ಫೇಸ್ ಆ್ಯಪ್ ಮೂಲಕ ಜನತೆ ತಮ್ಮ ಮುಪ್ಪಿನ ಫೋಟೋ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ಬಹುತೇಕರ ಮೊಬೈಲ್ ಫೋನ್‌ಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಫೇಸ್ ಆ್ಯಪ್ ಮೋಡಿಗೆ ಎಳೆಯ ಮಕ್ಕಳು, ಜನಸಾಮಾನ್ಯರಿಂದ ಹಿಡಿದು ಸ್ಟಾರ್, ಸೆಲೆಬ್ರಿಟಿಗಳವರೆಗೆ ಬಹುತೇಕರು ಫಿದಾ ಆಗಿದ್ದಾರೆ.
ಅದರಲ್ಲೂ ಈ ಫೇಸ್ ಆ್ಯಪ್ ಎನ್ನುವ ಸೋಶಿಯಲ್ ಮೀಡಿಯಾದ ಸನ್ನಿಗೆ ಯುವಜನತೆ ಚಿತ್ರರಂಗದ ಅನೇಕ ನಟ, ನಟಿಯರು, ಸೆಲೆಬ್ರಿಟಿಗಳು ಕೊಂಚ ಹೆಚ್ಚಾಗಿಯೇ ಒಳಗಾಗಿರುವುದಂತೂ ಸುಳ್ಳಲ್ಲ. ಫೇಸ್ ಆ್ಯಪ್‌ನಲ್ಲಿ ತಾವು ಹೇಗೆ ಕಾಣುತ್ತಿದ್ದೇವೆ ಎನ್ನುವ ತಮ್ಮ ತರಹವಾರಿ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ಅಪ್‌ಲೋಡ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು, ಸೆಲೆಬ್ರಿಟಿಗಳಿಗೂ ಕೂಡ ಫೇಸ್ ಆ್ಯಪ್‌ನ ಮೋಡಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸ್ಟಾರ್ಗಳು ಈ ಫೇಸ್ ಆ್ಯಪ್‌ನಿಂದ ದೂರವಿದ್ದರೂ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಫೇಸ್ ಆ್ಯಪ್‌ನಲ್ಲಿ ಹೇಗೆ ಕಾಣುತ್ತಾರೆ ಎನ್ನುವ ಕುತೂಹಲದಿಂದ ಸ್ಟಾರ್ ಫೋಟೋಗಳನ್ನ ಫೇಸ್ ಆ್ಯಪ್‌ನಲ್ಲಿ ಬಳಸಿ ಅದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡದ ಸ್ಟಾರ್ ಕಲಾವಿದರಾದ ನಟರಾದ ಸುದೀಪ್, ದರ್ಶನ್, ಯಶ್, ಪುನೀತ್, ಜಯರಾಮ್ ಕಾರ್ತಿಕ್ (ಜೆ.ಕೆ) ನಟಿಯರಾದ ರಚಿತಾ ರಾಮ್, ಪ್ರಿಯಾಮಣಿ, ಶಾನ್ವಿ ಶ್ರೀವಾಸ್ತವ್ ಹೀಗೆ ಅನೇಕರ ಫೋಟೋಗಳು ಫೇಸ್ ಆಪ್ ಬಳಸಿ ಎಡಿಟ್ ಮಾಡಲಾಗಿದೆ.
ಒಟ್ಟಾರೆ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಹೀಗೆ ಎಲ್ಲೇ ಸ್ಟಾರ್ ಫೋಟೋ ನೋಡಿದ್ರೂ, ಈಗ ಬಹುತೇಕ ಸ್ಟಾರ್ಗೆ ವಯಸ್ಸಾಗೋಗಿರುವಂತೆ ಕಾಣುತ್ತಿದೆ. ಅದರಲ್ಲೂ ಸ್ಟಾರ್ಗಳ ವಯಸ್ಸಾಗಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದರಿಂದ ಸಹಜವಾಗಿ ಜನರಿಗೆ ಒಳ್ಳೆಯ ಮನರಂಜನೆಯಂತೂ ಸಿಗುತ್ತಿದೆ. ಇನ್ನು ತಾರೆಯರು ಕೂಡ ತಮಾಷೆಗಾಗಿ ಅಭಿಮಾನಿಗಳು ಮಾಡುವ ಫೇಸ್ ಆ್ಯಪ್ ಪೋಟ್‌ಗಳನ್ನು ದೂರದಿಂದಲೇ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.