ರಾಬರ್ಟ್ ಹಬ್ಬಕ್ಕೆ ಒಂದೇ ದಿನ ಬಾಕಿ: ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗಕ್ಕೂ ನಿರೀಕ್ಷೆ..!
Team Udayavani, Mar 10, 2021, 10:15 AM IST
ಬೆಂಗಳೂರು: ದರ್ಶನ್ ಅಭಿನಯದ “ರಾಬರ್ಟ್’ ಚಿತ್ರ ಒಂದೇ ದಿನ ಬಾಕಿ ಉಳಿದಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ. ಮೊದಲ ದಿನ ಬೆಳಗ್ಗೆ 6.30 ರಿಂದಲೇ ಪ್ರದರ್ಶನ ಆರಂಭವಾಗಲಿದೆ. ಮೊದಲ ದಿನ ಎರಡು ಸಾವಿರಕ್ಕೂ ಹೆಚ್ಚು ಶೋಗಳು ನಡೆಯಲಿದ್ದು, ಈ ಮೂಲಕ “ರಾಬರ್ಟ್’ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿದೆ.
ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ “ರಾಬರ್ಟ್’ ಹವಾ ಜೋರಾಗಿದೆ. ಅಲ್ಲಿನ ಮಾಸ್ ಫ್ಯಾನ್ಸ್ ಕೂಡಾ ದರ್ಶನ್ ಅವರ ಮಾಸ್ ಎಂಟ್ರಿಗೆ ಕಾಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಚಿತ್ರದ ಹಾಡೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ದರ್ಶನ್ ಕೂಡಾ “ರಾಬರ್ಟ್’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕಥೆ ಇರೋದಿಲ್ಲ ಎಂಬ ಮಾತಿದೆ. ಆದರೆ, “ರಾಬರ್ಟ್’ ಅದಕ್ಕಿಂತ ಭಿನ್ನ. “ರಾಬರ್ಟ್’ ಸಿನಿಮಾ ಒಂದು ಕಥೆಯ ಮೇಲೆಯೇ ನಡೆಯುತ್ತದೆ. ಹಾಗಾಗಿ, ಇಲ್ಲಿ ದರ್ಶನ್ ಅವರಿಗೆ ನಟನೆಗೆ ಹೆಚ್ಚಿನ ಜಾಗ ಸಿಕ್ಕಿದೆಯಂತೆ. “ಇದು ಎಲ್ಲಾ ವರ್ಗದರಿಗೂ ಇಷ್ಟವಾಗುವ ಸಿನಿಮಾ. ಮಾಸ್, ಫ್ಯಾಮಿಲಿ, ಫ್ರೆಂಡ್ಸ್… ಹೀಗೆ ಎಲ್ಲರೂ ಆರಾಮವಾಗಿ ಕುಳಿತು ನೋಡುವ ಸಿನಿಮಾ “ರಾಬರ್ಟ್’. ಇಲ್ಲಿ ಎಲ್ಲವೂ ಪ್ಲ್ರಾನ್ ಪ್ರಕಾರ ನಡೆದಿದೆ.
ಇದನ್ನೂ ಓದಿ: ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭ; ದೇಹಾರೋಗ್ಯದಲ್ಲಿ ಏರುಪೇರು: ಇಂದಿನ ಗ್ರಹಬಲ
ನಿರ್ಮಾಪಕರು ಯಾವುದಕ್ಕೂ ಕಾಂಪ್ರಮೈಸ್ ಆಗಿಲ್ಲ. ಒಂದು ಸೆಟ್ ಹೇಗಿರಬೇಕು, ಅದರ ಲೈಟಿಂಗ್, ಕಲರ್ ಕಾಂಬಿನೇಶನ್ ಯಾವ ರೀತಿ ಇರಬೇಕು …. ಎಲ್ಲವನ್ನು ಚೆನ್ನಾಗಿ ಮಾಡಿದ್ದಾರೆ. ಇಡೀ ತಂಡ ಪರಿಪೂರ್ಣವಾಗಿ ಈ ಸಿನಿಮಾಕ್ಕೆ ತೊಡಗಿಸಿಕೊಂಡಿರುವುದು ನಿಮಗೆ ತೆರೆಮೇಲೆ ಕಾಣುತ್ತದೆ’ ಎನ್ನುವುದು ದರ್ಶನ್ ಮಾತು. ಕಳೆದ ಒಂದು ವರ್ಷದಿಂದ ಕೊರೊನಾದಿಂದ ನಲುಗಿದ್ದ ಚಿತ್ರರಂಗಕ್ಕೆ “ರಾಬರ್ಟ್’ ಮೂಲಕ ಹೊಸ ಚೈತನ್ಯ ಸಿಗುತ್ತಿರೋದು ಸುಳ್ಳಲ್ಲ. ಸಾಕಷ್ಟು ಚಿತ್ರಮಂದಿರಗಳು “ರಾಬರ್ಟ್’ನೊಂದಿಗೆ ಮತ್ತೆ ಪ್ರದರ್ಶನ ಆರಂಭಿಸುತ್ತಿವೆ.
ಇಲ್ಲಿ ಎಲ್ಲವೂ ಪ್ಲ್ರಾನ್ ಪ್ರಕಾರ ನಡೆದಿದೆ. ನಿರ್ಮಾಪಕರು ಯಾವುದಕ್ಕೂ ಕಾಂಪ್ರಮೈಸ್ ಆಗಿಲ್ಲ. ಒಂದು ಸೆಟ್ ಹೇಗಿರಬೇಕು, ಅದರ ಲೈಟಿಂಗ್, ಕಲರ್ ಕಾಂಬಿನೇಶನ್ ಯಾವ ರೀತಿ ಇರಬೇಕು …. ಎಲ್ಲವನ್ನು ಚೆನ್ನಾಗಿ ಮಾಡಿದ್ದಾರೆ. ಇಡೀ ತಂಡ ಪರಿಪೂರ್ಣವಾಗಿ ಈ ಸಿನಿಮಾಕ್ಕೆ ತೊಡಗಿಸಿಕೊಂಡಿರುವುದು ನಿಮಗೆ ತೆರೆಮೇಲೆ ಕಾಣುತ್ತದೆ.
ದರ್ಶನ್, ನಟ
ಇದನ್ನೂ ಓದಿ: ‘ಸ್ಯಾಟಲೈಟ್ ಮ್ಯಾನ್’ ಉಡುಪಿ ರಾಮಚಂದ್ರರಾವ್ ಅವರ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.