ಸ್ಯಾಂಡಲ್ ವುಡ್; ಕಳೆದ 2 ತಿಂಗಳಲ್ಲಿ 50 ಕೋಟಿ ನಷ್ಟ!
Team Udayavani, Nov 27, 2017, 1:00 PM IST
ಕನ್ನಡ ಚಿತ್ರರಂಗದ ಪಾಲಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಅತ್ಯಂತ ದುರದೃಷ್ಟಕರ ತಿಂಗಳಾಗಿ ಪರಿಣಮಿಸಿವೆ. ಅಕ್ಟೋಬರ್ ತಿಂಗಳಲ್ಲಿ 18 ಮತ್ತು ನವೆಂಬರ್ ತಿಂಗಳಲ್ಲಿ 23 ಚಿತ್ರಗಳು ಬಿಡುಗಡೆಯಾಗಿವೆ. ಈ 41 ಚಿತ್ರಗಳಲ್ಲಿ ಯಾವೊಂದು ಚಿತ್ರ ಸಹ ಗೆದ್ದಿಲ್ಲ ಎನ್ನುವುದು ಒಂದು ಕಡೆಯಾದರೆ, ಇಷ್ಟು ಚಿತ್ರಗಳಿಂದಾಗಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ಲಾಸ್ ಆಗಿದೆ.
ಹೌದು, ಕಳೆದ ಎರಡು ತಿಂಗಳಲ್ಲಿ ಒಟ್ಟು 41 ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಮೊನ್ನೆ ಶುಕ್ರವಾರ ಬಿಡುಗಡೆಯಾದ “ಉಪ್ಪು ಹುಳಿ ಖಾರ’, “ಅತಿರಥ’, “ಮೋಂಬತ್ತಿ’ ಮತ್ತು “ಹನಿಹನಿ ಇಬ್ಬನಿ’ ಚಿತ್ರಗಳ ಕುರಿತಾಗಿ ಈಗಲೇ ತೀರ್ಪು ನೀಡುವುದು ಕಷ್ಟ. ಏಕೆಂದರೆ, ಚಿತ್ರ ಬಿಡುಗಡೆಯಾಗಿ ಕೇವಲ ಮೂರು ದಿನಗಳಾಗಿದ್ದು, ಅದರ ಗೆಲುವು-ಸೋಲು, ಲಾ¸-ನಷ್ಟದ ಕುರಿತು ಈಗಲೇ ಹೇಳುವುದು ಕಷ್ಟ. ಅದಕ್ಕೆ ಇನ್ನೊಂದಿಷ್ಟು ಸಮಯ ಬೇಕು. ಅದನ್ನು ಹೊರತುಪಡಿಸಿದರೂ, 39 ಚಿತ್ರಗಳು ಸಿಗುತ್ತವೆ.
ಈ ಪೈಕಿ ಎಲ್ಲವೂ ಲೋ ಬಜೆಟ್ ಚಿತ್ರಗಳಷ್ಟೇ ದೊಡ್ಡ ಬಜೆಟ್‌ನ ಚಿತ್ರಗಳೂ ಇವೆ. ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’, ಸತೀಶ್ ನೀನಾಸಂ ಅಭಿನಯದ “ಟೈಗರ್ ಗಲ್ಲಿ’, ಶರಣ್ ಅಭಿನಯದ “ಸತ್ಯ ಹರಿಶ್ಚಂದ್ರ’ ಚಿತ್ರಗಳನ್ನು ಹೆಸರಿಸಬಹುದು. ಇವೆಲ್ಲಾ ಕೆಲವು ಕೋಟಿ ಬಜೆಟ್‌ನ ಚಿತ್ರಗಳು. ಆದರೆ, ಬಿಡುಗಡೆಯಾದ ನಂತರ ನಿರ್ಮಾಪಕರಿಗೆ ಎಷ್ಟು ಹಣ ವಾಪಸ್ಸಾಯಿತು ಎಂದರೆ, ಉತ್ತರಿಸುವುದು ಕಷ್ಟ. ಈ ಪೈಕಿ “ಸತ್ಯ ಹರಿಶ್ಚಂದ್ರ’ ಮತ್ತು “ಟೈಗರ್ ಗಲ್ಲಿ’ ಚಿತ್ರಗಳು ಎರಡೇ ವಾರಕ್ಕೆ ಮುಖ್ಯ ಚಿತ್ರಮಂದಿರಗಳೂ ಸೇರಿದಂತೆ ಬಹುತೇಕ ಚಿತ್ರಮಂದಿರಗಳಿಂದ ನಾಪತ್ತೆಯಾಗಿದ್ದವು.
ಈಗ “ಉಪೇಂದ್ರ ಮತ್ತೆ ಬಾ’ ಸಹ ಅದೇ ಸುಳಿವು ನೀಡುತ್ತಿದೆ. ನವೆಂಬರ್ 17ರಂದಷ್ಟೇ ಬಿಡುಗಡೆಯಾದ ಚಿತ್ರವು ಈಗ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಈಗ ಎರಡನೆಯ ವಾರ ಮುಗಿಸಿ, ಮೂರನೆಯ ವಾರಕ್ಕೆ ಕಾಲಿಡುವ ಹೊತ್ತಿಗೆ ಮುಖ್ಯ ಚಿತ್ರಮಂದಿರವೇ ಮಿಸ್ ಆಗುವ ಸಾಧ್ಯತೆ ಇದೆ. ಏಕೆಂದರೆ, “ಉಪೇಂದ್ರ ಮತ್ತೆ ಬಾ’ ಪ್ರದರ್ಶನವಾಗುತ್ತಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಈ ವಾರ “ಗೌಡ್ರು ಹೋಟೆಲ್’ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಇನ್ನೆಲ್ಲಾ ಹೊಸಬರ ಅಥವಾ ಕಡಿಮೆ ಬಜೆಟ್‌ನ ಚಿತ್ರಗಳೇ. ಈ ಚಿತ್ರಗಳನ್ನು ಅತ್ತ ಜನರೂ ನೋಡಲಿಲ್ಲ, ಇತ್ತ ಚಾನಲ್ ಅಥವಾ ಇನ್ನಾವುದೋ ಮೂಲದಿಂದ ವ್ಯಾಪಾರವೂ ಆಗಿಲ್ಲ.
ಹಾಗಾಗಿ ನಿರ್ಮಾಪಕರಿಗೆ ದುಡ್ಡು ಹಾಕಿದ್ದಷ್ಟೇ ಬಂತು. ಲಾಭ ಬಿಡಿ, ಹಾಕಿದ ದುಡ್ಡು ಸಹ ಸರಿಯಾಗಿ ವಾಪಸ್ಸಾಗಲಿಲ್ಲ.
ಅಲ್ಲಿಗೆ ಈ ಎರಡೇ ತಿಂಗಳುಗಳಲ್ಲಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ನಷ್ಟವಾಗಿದೆ. ಹೀಗಿರುವಾಗಲೇ ಈ ವಾರ ಮತ್ತೆ ಆರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ್-ಮುರಳಿ ಅಭಿನಯದ “ಮಫ್ತಿ’, “ಗೌಡ್ರು ಹೋಟೆಲ್’, “ನಮ್ಮೂರಲಿ’, “ಮಂತ್ರಂ’, “ಡ್ರೀಮ್ ಗರ್ಲ್’ ಮತ್ತು “ಅರ್ಧ ತಿಕ್ಲು ಪುಕ್ಲು’ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ಚಿತ್ರಗಳ ಪೈಕಿ ಎಷ್ಟು ಕೋಟಿ ಗಳಿಸುತ್ತವೋ, ಎಷ್ಟು ಕಳೆದುಕೊಳ್ಳುತ್ತವೋ ನೋಡಬೇಕು.
ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹುಲಿರಾಯ, ಕಿಡಿ, ವೈರ, ಲಕ್ಷಿ ನಾರಾಯಣರ ಪ್ರಪಂಚವೇ ಬೇರೆ, ಏಪ್ರಿಲ್‌ನ ಹಿಮಬಿಂದು, ಗಾಯತ್ರಿ, ಕರಿಯ 2, ಕಟಕ, ಸಿತಾರ, ಆಡೂ ಆಟ ಆಡೂ, ತಿಕ್ಲ, ದಯವಿಟ್ಟು ಗಮನಿಸಿ, ಸತ್ಯ ಹರಿಶ್ಚಂದ್ರ, ಢಮ್ಕಿ ಢಮಾರ್, ಟೈಗರ್ ಗಲ್ಲಿ, ಸರ್ವಸ್ವ, ಮೋಜೋ ಮತ್ತು ಬ್ರಾಂಡ್.
ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹಾಲು ತುಪ್ಪ, ಜಾಲಿ ಬಾರು ಮತ್ತು ಪೋಲಿ ಗೆಳೆಯರು, ಮತ್ತೆ ಬಂದ ಕೌರವ, ಜಯಸೂರ್ಯ, ಬಿಕೋ, ಕಾಲೇಜ್ ಕುಮಾರ್, ನುಗ್ಗೇಕಾಯಿ, ಸೈಕೋ ಶಂಕ್ರ, ರಾಜರು, ಸಂಯುಕ್ತ 2, ಅಸೂಚ¸, ನಂ. 9 ಹಿಲ್ಟನ್ ಹೌಸ್, ಕಾವೇರಿ ತೀರದ ಚರಿತ್ರೆ, ಕೆಂಪಿರ್ವೆ, ಮಹಾನುಬಾವರು, ನನ್ ಮಗಳೇ ಹೀರೋಯಿನ್, ಪಾನಿಪುರಿ, ಉಪೇಂದ್ರ ಮತ್ತೆ ಬಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.