‘ಗಿಣಿ ಹೇಳಿದ ಕಥೆ’ಯದ್ದು ಅಪ್ಪಟ ಕನ್ನಡದ ಸೊಗಡು!
Team Udayavani, Jan 7, 2019, 2:36 PM IST
ಆಂಗ್ಲ ಪದಗಳಿಂದ ಗಿಜಿಗುಡುವ ಶೀರ್ಷಿಕೆ ಹೊತ್ತ ಒಂದಷ್ಟು ಚಿತ್ರಗಳು ವ್ಯಾಪಕವಾಗಿ ಚಾಲ್ತಿಯಲ್ಲಿರುತ್ತವೆ. ಇಂಥಾದ್ದರ ನಡುವೆ ಅಪ್ಪಟ ಕನ್ನಡತನದ ಸೊಗಡು ಹೊತ್ತ ಶೀರ್ಷಿಕೆಗಳನ್ನು ಕಂಡರೆ ನಿಜಕ್ಕೂ ತಂಗಾಳಿ ತೀಡಿದಂಥಾದ್ದೇ ಆಹ್ಲಾದ ಆವರಿಸಿಕೊಳ್ಳುತ್ತದೆ. ಅಂಥಾದ್ದೊಂದು ಭಾವ ಹುಟ್ಟುವಂತೆ ಮಾಡಿರೋ ಗಿಣಿ ಹೇಳಿದ ಕಥೆ ಈ ವಾರ ತೆರೆ ಕಾಣಲಿದೆ.
ದೇವ್ ರಂಗಭೂಮಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಇದಲ್ಲದೇ ತಾವೇ ನಾಯಕನಾಗಿಯೂ ನಟಿಸಿದ್ದಾರೆ. ಬಹುಶಃ ಇಂಥಾ ನೆಲದ ಸೊಗಡಿನ ಕಥೆಯೊಂದು ಜೀವ ಪಡೆಯಲು ಸಾಧ್ಯವಾದದ್ದು ಅವರ ರಂಗಭೂಮಿಯ ನಂಟಿನಿಂದಲೇ. ಕೇವಲ ಶೀರ್ಷಿಕೆ ಮಾತ್ರವಲ್ಲ, ಈ ಚಿತ್ರದ ಕಥೆ ಕೂಡಾ ಅಪ್ಪಟ ದೇಸೀತನವನ್ನು ಮೈ ತುಂಬಿಸಿಕೊಂಡಿದೆ. ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ನೆಲದ ನಂಟು ಮರೆಯದ ದೃಶ್ಯ ರೂಪಕಗಳು ಇತ್ತೀಚೆಗೆ ವಿರಳ. ಆದರೆ ಗಿಣಿ ಹೇಳಿದ ಕಥೆ ವರ್ಷಾರಂಭದಲ್ಲಿಯೇ ಆ ಕೊರಗು ನೀಗುವಂತೆ ಮೂಡಿ ಬಂದಿದೆಯಂತೆ.
ಹಾಗಾದರೆ, ಈ ಗಿಣಿ ಹೇಳಲಿರೋದು ಎಂಥಾ ಕಥೆ ಎಂಬ ಬಗ್ಗೆ ಪ್ರೇಕ್ಷಕರೆಲ್ಲರೂ ಕುತೂಹಲಗೊಂಡಿದ್ದಾರೆ. ಆದರೆ ಕಥೆಯ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟು ಕೊಡದೆ ಬೆರಗೊಂದು ಥೇಟರಿನವರೆಗೂ ಸಾಗಿ ಬರುವಂತೆ ಚಿತ್ರತಂಡ ನೋಡಿಕೊಂಡಿದೆ. ಒಟ್ಟಾರೆಯಾಗಿ ಈ ಸಿನಿಮಾನ ಅಸಲೀ ವಿಶೇಷತೆ ಏನೆಂಬುದು ಈ ವಾರವೇ ಜಾಹೀರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.