Sandalwood: ಗಣೇಶ ಹಬ್ಬಕ್ಕೆ ಸ್ಯಾಂಡಲ್‌ ವುಡ್‌ ಬ್ಯುಸಿ: ರಿಲೀಸ್‌ ಆಗಲಿದೆ ಟೀಸರ್‌,ಸಾಂಗ್..


Team Udayavani, Sep 12, 2023, 4:19 PM IST

Sandalwood: ಗಣೇಶ ಹಬ್ಬಕ್ಕೆ ಸ್ಯಾಂಡಲ್‌ ವುಡ್‌ ಬ್ಯುಸಿ: ರಿಲೀಸ್‌ ಆಗಲಿದೆ ಟೀಸರ್‌,ಸಾಂಗ್..

ಬೆಂಗಳೂರು: ಗಣೇಶ ಹಬ್ಬ ಹತ್ತಿರ ಬರುತ್ತಿದೆ ಪ್ರತಿ ವರ್ಷ ಗೌರಿ – ಗಣೇಶ ಹಬ್ಬದಂದು ಬಣ್ಣದ ಲೋಕದಿಂದ ವಿವಿಧ ಚಿತ್ರತಂಡಗಳು ತಮ್ಮ ಸಿನಿಮಾದ ಟೀಸರ್‌, ಪೋಸ್ಟರ್‌, ಹಾಡು.. ಹೀಗೆ ಒಂದಲ್ಲ ಒಂದು ತುಣುಕನ್ನು ರಿವೀಲ್‌ ಮಾಡುತ್ತವೆ.

ಸ್ಯಾಂಡಲ್‌ ವುಡ್‌ ನಲ್ಲಿ ಈ ವರ್ಷದೊಳಗೆ ರಿಲೀಸ್‌ ಆಗಲಿರುವ ಸಿನಿಮಾಗಳು ಈಗಾಗಲೇ ತನ್ನ ಒಂದೊಂದೇ ಝಲಕ್‌ ನಿಂದ ಹೈಪ್‌ ಕ್ರಿಯೇಟ್‌ ಮಾಡಿವೆ. ಉಪೇಂದ್ರ ಅವರ ʼಯುಐʼ, ಶಿವರಾಜ್‌ ಕುಮಾರ್‌ ಅವರ ʼಘೋಸ್ಟ್‌ʼ, ಧ್ರುವ ಸರ್ಜಾರ ಅವರ ʼಮಾರ್ಟಿನ್‌ʼ ಹೀಗೆ ಸ್ಯಾಂಡಲ್‌ ವುಡ್‌ ನಲ್ಲಿ ಮುಂದೆ ರಿಲೀಸ್‌ ಆಗಲಿರುವ ಸಿನಿಮಾಗಳು ತನ್ನ ಪೋಸ್ಟರ್‌, ಟೀಸರ್‌ ತುಣುಕಿನಿಂದ ನಿರೀಕ್ಷೆ ಹೆಚ್ಚಿಸಿದೆ.

ಉಪ್ಪಿ ಹುಟ್ಟುಹಬ್ಬ/ ಗಣೇಶ ಹಬ್ಬಕ್ಕೆ ʼಯುಐʼ ಟೀಸರ್: ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಬಹು ಸಮಯದ ಬಳಿಕ ನಿರ್ದೇಶನಕ್ಕಿಳಿದಿರುವ ʼಯುಐʼ ಸಿನಿಮಾ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ರಿಲೀಸ್‌ ಡೇಟ್‌ ಗೂ ಮುನ್ನವೇ ವಿಭಿನ್ನ ಪ್ರಚಾರದಲ್ಲಿ ಸಿನಿಮಾತಂಡ ನಿರತವಾಗಿದೆ. ಈಗಾಗಲೇ ಟೀಸರ್‌ ರಿಲೀಸ್‌ ವಿಚಾರದಲ್ಲಿ ಎರಡು ವಿಡಿಯೋಗಳನ್ನು ರಿಲೀಸ್‌ ಮಾಡಿ, ಉಪ್ಪಿ ತಲೆಗೆ ಹುಳು ಬಿಟ್ಟಿದ್ದಾರೆ. ಸೆಪ್ಟೆಂಬರ್ 18ರಂದು ಮಧ್ಯಾಹ್ನ 3 ಗಂಟೆಗೆ ಊರ್ವಶಿ ಥಿಯೇಟರ್​ನಲ್ಲಿ ಟೀಸರ್ ರಿಲೀಸ್ ಆಗಲಿದೆ ಎಂದು ಉಪ್ಪಿ ಹೇಳಿದ್ದಾರೆ. ಅಂದಹಾಗೆ ಸೆ.18 ರಂದು ರಿಯಲ್‌ ಸ್ಟಾರ್‌ ಉಪ್ಪಿ ಅವರ ಹುಟ್ಟುಹಬ್ಬವಿದೆ.

ಈ ಸಿನಿಮಾದಲ್ಲಿ ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು,ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಮುಂತಾದವರು ನಟಿಸಿದ್ದಾರೆ.

ಗಣೇಶ ಹಬ್ಬಕ್ಕೆ ʼಘೋಷ್ಟ್‌ʼ ನಿಂದ ಸಾಂಗ್‌ ಗಿಫ್ಟ್?:‌ ಶ್ರೀನಿ ನಿರ್ದೇಶನದ ʼಘೋಸ್ಟ್‌ʼ ಸಿನಿಮಾದ ಟೀಸರ್‌ ದೊಡ್ಡಮಟ್ಟದಲ್ಲಿ ಹಿಟ್‌ ಆಗಿದೆ. ʼಬಿಗ್‌ ಡ್ಯಾಡಿʼ ಆಗಿ ಶಿವರಾಜ್‌ ಕುಮಾರ್‌ ಲುಕ್‌ ಸಖತ್‌ ವೈರಲ್‌ ಆಗಿದೆ. ಗಣೇಶ ಹಬ್ಬದಂದು ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಅಪ್ಡೇಟ್‌ ನೀಡಬೇಕಿದೆ.

“ಘೋಸ್ಟ್‌’ ಸಿನಿಮಾದಲ್ಲಿ ಶಿವರಾಜಕುಮಾರ್‌ ಅವರೊಂದಿಗೆ ಅನುಪಮ್‌ ಖೇರ್‌, ಜಯರಾಂ, ಸತ್ಯಪ್ರಕಾಶ್‌, ಪ್ರಶಾಂತ್‌ ನಾರಾಯಣನ್‌, ದತ್ತಣ್ಣ, ಅಭಿಜಿತ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾ “ಘೋಸ್ಟ್‌’ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. “ಸಂದೇಶ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸಂದೇಶ್‌ ಎನ್‌. ನಿರ್ಮಿಸಿದ್ದಾರೆ. ಅಕ್ಟೋಬರ್‌ ಸಿನಿಮಾ19ರಂದು ತೆರೆಕಾಣುತ್ತಿದೆ.

ಡಿಬಾಸ್‌ ಅಭಿಮಾನಿಗಳಿಗೆ ʼಕಾಟೇರʼನಿಂದ ಟೀಸರ್‌ ಝಲಕ್? ‌

ಡಿಬಾಸ್‌ ದರ್ಶನ್‌ ಅವರ ʼಕಾಟೇರʼ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದು, 70 ರ ದಶಕದ ಕಥೆಯನ್ನು ತೆರೆ ಮೇಲೆ ತರಲು ಚಿತ್ರತಂಡ ರೆಡಿಯಾಗಿದೆ. ನೈಜ ಘಟನೆ ಸುತ್ತ ಈ ಸಿನಿಮಾ ತಯಾರಾಗಿದ್ದು ‘ರಾಬರ್ಟ್‌ʼ ಬಳಿಕ ತರುಣ್​ ಸುಧೀರ್​ ಅವರು ದರ್ಶನ್‌ ಅವರ ಸಿನಿಮಾಕ್ಕೆ ಮತ್ತೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಸಿನಿಮಾಕ್ಕೆ ರಾಕ್​ಲೈನ್​ ವೆಂಕಟೇಶ್​ ಅವರು ಬಂಡವಾಳ ಹಾಕಿದ್ದಾರೆ.

ಈ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರು ನಾಯಕಿಯಾಗಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾ ತಂಡ ಸುದ್ದಿಗೋಷ್ಟಿ ನಡೆಸಿತ್ತು. “ಸ್ಟಾರ್ ಆಗಲಿ ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು. ನನ್ನ ಸಮಯ ಒಂದ್  ಸಿನಿಮಾಗೆ 85 ದಿನ ಮಾತ್ರ. ಸಿನಿಮಾದ 90% ಕೆಲಸ ಮುಗಿದಿದೆ. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಬಾಂಧವ್ಯ ಬೆಳೆಯುತ್ತೆ. ರಚಿತಾ ರಾಮ್ ಲೆವೆಲ್‌ಗೆ ನಮ್ಮ ಸಿನಿಮಾದ ನಾಯಕಿ ಆರಾಧನ ನಿಲ್ಲುತ್ತಾರೆ. ಗ್ಲಾಮರ್ ಪಾತ್ರವನ್ನು ಯಾರಾದ್ರು ಮಾಡಬಹುದು. ಆದರೆ ಕಾಟೇರ ಪಾತ್ರ ಮಾಡೋದು ಕಷ್ಟ. ಅದನ್ನು ಆರಾಧನಾ ಮಾಡಿದ್ದಾರೆ. ಇಡೀ ಸಿನಿಮಾಗೆ ನಿಮ್ಮ ಪ್ರೋತ್ಸಾಹ ಬೆಂಬಲ ಇರಲಿ” ಎಂದು ದರ್ಶನ್ ಈ ವೇಳೆ ಹೇಳಿದ್ದಾರೆ.

ಇದೀಗ ಗಣೇಶ ಹಬ್ಬದಂದು ಸಿನಿಮಾದ ಟೀಸರ್‌ ಪ್ರೇಕ್ಷಕರ ಮುಂದೆ ಬರಲಿದೆ ಎನ್ನುವ ಸುದ್ದಿಗಳು ಸ್ಯಾಂಡಲ್‌ ವುಡ್‌ ಹರಿದಾಡುತ್ತಿದೆ. ಟೀಸರ್‌ ಇಲ್ಲದಿದ್ರು ಏನಾದರೂ ಒಂದು ತುಣುಕು ಅಥವಾ ಪೋಸ್ಟರ್‌ ಗಣೇಶ್‌ ಹಬ್ಬಕ್ಕೆ ʼಕಾಟೇರʼ ನಿಂದ ಸಿಗೋದು ಪಕ್ಕಾ ಎಂದು ಅಭಿಮಾನಿಗಳ ನಿರೀಕ್ಷೆ.

ದುನಿಯಾ ವಿಜಯ್‌ ʼಭೀಮʼರಿಲೀಸ್‌ ಡೇಟ್‌ ಅನೌನ್ಸ್?: ʼಸಲಗʼ ಸಿನಿಮಾದ ಬಳಿಕ ದುನಿಯಾ ವಿಜಯ್‌ ಅವರು ಮತ್ತೊಂದು ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳಲಿರುವ ʼಭೀಮʼ ಸಿನಿಮಾ ಒಂದೇ ಒಂದು ತುಣುಕಿನಿಂದ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಟ್ಟೇರಿದ ದಿನದಿಂದ ಸಿನಿಮಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಸಿನಿಮಾದ ಕುರಿತ ಅಪ್ಟೇಡ್‌ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇತ್ತೀಚೆಗೆ ದುನಿಯಾ ವಿಜಯ್‌ ʼಭೀಮʼ ನಿಂದ ʼಸೈಕ್‌ʼ ಅನೌನ್ಸ್‌ ಮೆಂಟ್‌ ಶೀಘ್ರದಲ್ಲಿ ಆಗಲಿದೆ ಎನ್ನುವ ಪೋಸ್ಟರ್‌ ವೊಂದನ್ನು ಹಂಚಿಕೊಂಡಿದ್ದಾರೆ.

ರಿಲೀಸ್‌ ಡೇಟ್‌ ಅನೌನ್ಸ್ ಅಥವಾ ಸಾಂಗ್‌ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದುನಿಯಾ ವಿಜಯ್‌ ನಿರ್ದೇಶನದ ಈ ಸಿನಿಮಾವನ್ನುಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವಸೇನಾ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ, ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ದುನಿಯಾ ವಿಜಯ್ ಜೊತೆ ಅಚ್ಯುತ್ ಕುಮಾರ್, ರಂಗಾಯಣ ರಘು, ಕಾಕ್ರೋಚ್ ಸುಧಿ, ಅಶ್ವಿನಿ, ಕಲ್ಯಾಣಿ ಹಾಗೂ ಪ್ರಿಯಾ ಶಠಮರ್ಷಣ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೀಪಾವಳಿ ವೇಳಗೆ ರಿಲೀಸ್‌ ಆಗುವ ಸಾಧ್ಯತೆಯಿದೆ.

 

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.