ಕೆಜಿಎಫ್2-ಬೀಸ್ಟ್ ಎಫೆಕ್ಟ್ : ಕನ್ನಡದಲ್ಲಿ ಈ ವಾರ ಮೂರೇ ಚಿತ್ರ ರಿಲೀಸ್
Team Udayavani, Apr 5, 2022, 2:43 PM IST
ಕಳೆದ ವಾರ (01) ಬರೋಬ್ಬರಿ ಆರು ಸಿನಿಮಾಗಳು ತೆರೆಕಂಡಿದ್ದವು. ಹಾಗಾದರೆ ಈ ವಾರ ಎಷ್ಟು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಕೇಳಿದರೆ ಉತ್ತರ 3 ಸಿನಿಮಾ.
ಹೌದು, ಸದ್ಯ “ತ್ರಿಕೋನ’, “ವರ್ಣ ಪಟಲ’ ಹಾಗೂ ಹೊಸಬರ “ದಂಡಿ’ ಚಿತ್ರಗಳಷ್ಟೇ ಏ.08ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿವೆ. ಮಿಕ್ಕಂತೆ ಕನ್ನಡದಿಂದ ಯಾವ ಚಿತ್ರವೂ ಅನೌನ್ಸ್ ಆಗಿಲ್ಲ. ಇದಕ್ಕೆ ಕಾರಣವೇನೆಂದು ನೀವು ಕೇಳಿದರೆ ಮುಂದಿನ ವಾರ ತೆರೆಕಾಣುತ್ತಿರುವ”ಕೆಜಿಎಫ್-2′ ಹಾಗೂ ತಮಿಳಿನ “ಬೀಸ್ಟ್’ ಚಿತ್ರ ಎನ್ನಬಹುದು.
ಈ ಎರಡು ಚಿತ್ರಗಳು ಏ.13 ಹಾಗೂ 14ರಂದು ತೆರೆಕಾಣುತ್ತಿದೆ. ಬೀಸ್ಟ್ ಏ.13ಕ್ಕೆ ತೆರೆಕಂಡರೆ, ಕೆಜಿಎಫ್ 2 ಏ.14ರಂದು ತೆರೆಗೆ ಬರುತ್ತಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರುವ ಸಿನಿಮಾ ಎಂದರೆ ಅದು ಕನ್ನಡದಿಂದ ತಯಾರಾಗಿರುವ “ಕೆಜಿಎಫ್-2′ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ 250 ಪ್ಲಸ್ ಮಿಲಿಯನ್ ವೀವ್ಸ್ ನೊಂದಿಗೆ ಮುನ್ನುಗ್ಗುತ್ತಿದೆ. ಈ ಚಿತ್ರ ಏ.14ರಂದು ತೆರೆಗೆ ಅಪ್ಪಳಿಸಲಿದೆ.
ಇದನ್ನೂ ಓದಿ: ತೂತು ಮಡಿಕೆಯಲ್ಲಿ ಸ್ವಾರ್ಥ,ದುರಾಸೆ!
ಇದರ ಜೊತೆಗೆ ತಮಿಳಿನ ವಿಜಯ್ ನಟನೆಯ “ಬೀಸ್ಟ್’ ಚಿತ್ರ ಏ.13ರಂದು ಬಿಡುಗಡೆಯಾಗಲಿದೆ. ಈ ಎರಡು ಸ್ಟಾರ್‌ಗಳ ಮಧ್ಯೆ ಹೊಸಬರು ತಮ್ಮ ಸಿನಿಮಾ ಬಿಡುಗಡೆ ಮಾಡಿದರೆ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ.
ಇದೇ ಕಾರಣದಿಂದ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರ ಸಿನಿಮಾ ತೆರೆಕಾಣುತ್ತಿಲ್ಲ. ಸರಿಯಾಗಿ ಒಂದು ವಾರವೂ ಸಿಗದಿರುವಾಗ ಯಾಕಾಗಿ ಬಿಡುಗಡೆ ಮಾಡಬೇಕೆಂಬ ಲೆಕ್ಕಾಚಾರ ಹೊಸಬರದು. ಹಾಗಾಗಿ, ಸ್ಟಾರ್‌ಗಳ ಅಬ್ಬರದಿಂದ ಹೊಸಬರು ಈ ವಾರ ದೂರವಿದ್ದಾರೆ. ಆದರೆ, ಏ. 29ರಿಂದ ಮೇ ತಿಂಗಳು ಪೂರ್ತಿ ಹೊಸಬರದ್ದೇ ಜಾತ್ರೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.