ಹೊಸಬರು ಗೆಲ್ಲಲಿ ಸಂಭ್ರಮ ಹೆಚ್ಚಲಿ.. ವಿಭಿನ್ನ ಕಂಟೆಂಟ್‌ ಗಳಲ್ಲಿ ನವ ತಂಡಗಳ ಪ್ರಯತ್ನ


Team Udayavani, Feb 17, 2023, 8:50 AM IST

ಹೊಸಬರು ಗೆಲ್ಲಲಿ ಸಂಭ್ರಮ ಹೆಚ್ಚಲಿ.. ವಿಭಿನ್ನ ಕಂಟೆಂಟ್‌ಗಳಲ್ಲಿ ನವ ತಂಡಗಳ ಪ್ರಯತ್ನ

2022ರಲ್ಲಿ 220 ಪ್ಲಸ್‌ ಸಿನಿಮಾಗಳು ತೆರೆ ಕಂಡಿದ್ದವು. ಇದರಲ್ಲಿ ಸ್ಟಾರ್‌ಗಳ ಹಾಗೂ ಚಿತ್ರರಂಗದ ಪರಿಚಯದ ಮುಖಗಳ ಸಿನಿಮಾಗಳೆಂದು ಬಿಡುಗಡೆಯಾಗಿದ್ದು 30 ರಿಂದ 40 ಚಿತ್ರಗಳು. ಉಳಿದಂತೆ ವರ್ಷಪೂರ್ತಿ ಚಿತ್ರರಂಗವನ್ನು ಚಟುವಟಿಕೆಯಲ್ಲಿಟ್ಟಿದ್ದು, ಚಿತ್ರಮಂದಿರಗಳಿಗೆ ಸಿನಿಮಾ ನೀಡಿದ್ದು ಹೊಸಬರೇ. ಆದರೆ, ಗೆಲುವಿನ ಪ್ರಮಾಣ? ಈ ವಿಚಾರ ಬಂದಾಗ ಪ್ರೇಕ್ಷಕ ಯಾಕೋ ಹೊಸಬರತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂಬ ಬೇಸರದ ಅಂಶ ಗೊತ್ತಾಗುತ್ತದೆ. ಹಾಗಂತ

ಹೊಸಬರು ಕೆಟ್ಟ ಸಿನಿಮಾ ಮಾಡುತ್ತಿದ್ದಾರಾ ಎಂದರೆ ಖಂಡಿತಾ ಇಲ್ಲ. ಸದ್ಯ ಕನ್ನಡ ಚಿತ್ರರಂಗಕ್ಕೆ ಇಂಜಿನಿಯರಿಂಗ್‌ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಮಂದಿ ಹೊಸ ಹೊಸ ಚಿಂತನೆಯೊಂದಿಗೆ ಬರುತ್ತಿದ್ದಾರೆ. ಅದೇ ಕಾರಣದಿಂದ ಇತ್ತೀಚೆಗೆ ಬರುತ್ತಿರುವ ಹೊಸಬರ ಸಿನಿಮಾಗಳು ರೆಗ್ಯುಲರ್‌ ಶೈಲಿ ಬಿಟ್ಟು, ಹೊಸತನದಿಂದ ಕೂಡಿರುತ್ತವೆ. ಆದರೆ, ಈ ಸಿನಿಮಾಗಳು ಜನರನ್ನು ಸೆಳೆಯುವಲ್ಲಿ ವಿಫ‌ಲವಾಗುತ್ತಿವೆ ಎಂಬುದು ಅನೇಕ ಹೊಸ ನಿರ್ಮಾಪಕ, ನಿರ್ದೇಶಕರಿಗೆ ಬೇಸರ ತರಿಸಿದೆ. ಇನ್ನೇನು ಬಾಯಿಮಾತಿನ ಮೂಲಕ ಸಿನಿಮಾ ತಲುಪುತ್ತಿದೆ ಎನ್ನುವಷ್ಟರಲ್ಲಿ ಆ ಸಿನಿಮಾಗಳು ಚಿತ್ರಮಂದಿರದಿಂದಲೇ ಹೊರಬಿದ್ದಿರುತ್ತವೆ.

ಹೊಸಬರ ಗೆಲುವು ಅನಿವಾರ್ಯ

ಚಿತ್ರರಂಗವೆಂದರೆ ಅಲ್ಲಿ ಸ್ಟಾರ್‌ಗಳ ಜೊತೆಗೆ ಹೊಸಬರ ಸಿನಿಮಾಗಳು ಗೆಲ್ಲುವುದು ಅನಿವಾರ್ಯ. ಒಂದರ ಹಿಂದೊಂದರಂತೆ ಹೊಸಬರ ಸಿನಿಮಾಗಳು ಸೋಲುತ್ತಾ ಹೋದರೆ, ಚಿತ್ರರಂಗಕ್ಕೆ ಹೊಸದಾಗಿ ಬರುವವರ ಆತ್ಮಸ್ಥೈರ್ಯವೇ ಕುಂದುತ್ತದೆ. ಯಾವ ಧೈರ್ಯದ ಮೇಲೆ ನಾನು ಸಿನಿಮಾಕ್ಕೆ ಬಂಡವಾಳ ಹೂಡಲಿ, ನಿರ್ದೇಶನ ಮಾಡಲಿ, ನಾಯಕನಾಗಿ ಎಂಟ್ರಿಕೊಡಲಿ ಎಂಬ ಭಯ, ಗೊಂದಲಕ್ಕೆ ಕಾರಣವಾಗುತ್ತದೆ ಚಿತ್ರರಂಗದಲ್ಲಿ ಸ್ಟಾರ್‌ ಸಿನಿಮಾಗಳ ಗೆಲುವು ಎಷ್ಟು ಮುಖ್ಯವೋ ಹೊಸಬರ ಸಿನಿಮಾಗಳ ಗೆಲುವಿನ ಅಗತ್ಯ ಅದಕ್ಕಿಂತಲೂ ಹೆಚ್ಚೇ ಇದೆ ಎಂದರೆ ತಪ್ಪಲ್ಲ. ಒಂದು ಸ್ಟಾರ್‌ ಸಿನಿಮಾದ ಗೆಲುವು ಚಿತ್ರರಂಗದ ಬಿಝಿನೆಸ್‌ ಜೊತೆಗೆ ರೆಗ್ಯುಲರ್‌ ನಿರ್ಮಾಪಕರ ಮೊಗದಲ್ಲಿ ನಗು ತರಿಸಬಹುದು.

ಹಿಟ್‌ ಆದ ಸಿನಿಮಾದ ಸ್ಟಾರ್‌ ನಟ ತನ್ನ ಸಂಭಾವನೆ ಏರಿಸಿಕೊಳ್ಳಬಹುದು, ಆತನ ಮುಂದಿನ ಸಿನಿಮಾದ ಬಜೆಟ್‌ ದೊಡ್ಡ ಮಟ್ಟದಲ್ಲಿ ಏರಿಕೆಯಾಗಬಹುದು, ಸಿನಿಮಾ ಮೇಕಿಂಗ್‌ ದಿನಗಳು ಜಾಸ್ತಿಯಾಗಬಹುದು…. ಅದೇ ಹೊಸಬರ ಸಿನಿಮಾ ಗೆದ್ದರೆ ಮತ್ತೆ 10 ಹೊಸ ತಂಡಗಳು ಹುಮ್ಮಸ್ಸಿನಿಂದ ಚಿತ್ರರಂಗಕ್ಕೆ ಬರುತ್ತವೆ. ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಸಿನಿಮಾ ಮಾಡುತ್ತಾನೆ ಎಂದರೆ ಬಹುತೇಕ ಆತ ಹೊಸಬರಿಗೆ ಪ್ರಾಮುಖ್ಯತೆ ಕೊಡುತ್ತಾನೆ. ಅಲ್ಲಿಗೆ ಸಿನಿಮಾದ ಕನಸು ಕಂಡ ಹೊಸಬರಿಗೆ ಒಂದು ಅವಕಾಶ ಸಿಗುವ ಜೊತೆಗೆ ಹೊಸ ಜನರೇಶನ್‌ ಒಂದು ಹುಟ್ಟಿಕೊಂಡಂತಾಗುತ್ತದೆ.

ಸ್ಟಾರ್‌ ಗಳ ಪ್ರೋತ್ಸಾಹಬೇಕಿದೆ

ಒಂದು ಒಳ್ಳೆಯ ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ಇವತ್ತು ಸ್ಟಾರ್‌ಗಳ ಬೆಂಬಲದ ಅಗತ್ಯವಿದೆ. ಇತ್ತೀಚೆಗೆ “ಕಡಲತೀರ’ ಚಿತ್ರದ ನಿರ್ಮಾಪಕ ಕಂ ನಾಯಕ ಪಟೇಲ್‌ ವರುಣ್‌ ರಾಜ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ನಾವು ಸಿನಿಮಾ ಚೆನ್ನಾಗಿ ಮಾಡಿದ್ದೇವೆ. ಆದರೆ, ನಮ್ಮಂತಹ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಸ್ಟಾರ್‌ಗಳ ಬೆಂಬಲ ಬೇಕಿದೆ. ಸಿನಿಮಾ ಚೆನ್ನಾಗಿದ್ದಾಗ ಆ ಕುರಿತು ಒಂದು ಟ್ವೀಟ್‌, ಒಂದು ಬೈಟ್ಸ್‌ ಸ್ಟಾರ್‌ಗಳಿಂದ ಸಿಕ್ಕರೆ ನಮ್ಮಂತಹ ಹೊಸಬರಿಗೆ ಅದು ಸಹಾಯವಾಗುತ್ತದೆ’ ಎಂದಿದ್ದರು. ಇದು ನಿಜ ಕೂಡಾ. ಸ್ಟಾರ್‌ ನಟರ ಅಭಿಮಾನಿ ವರ್ಗ ಹಾಗೂ ಅವರ ರೀಚ್‌ ದೊಡ್ಡದಿರುವುದರಿಂದ ಸ್ಟಾರ್‌ಗಳು ದೊಡ್ಡ ಮನಸ್ಸು ಮಾಡಿದರೆ, ಹೊಸಬರಿಗೆ ಆನೆಬಲ ಬಂದಂತಾಗುತ್ತದೆ.

ಸಕ್ಸಸ್‌ ರೇಟ್‌ ಗೆ ಸ್ಟಾರ್ ಜೊತೆ ಹೊಸಬರು ಮುಖ್ಯ

ಚಿತ್ರರಂಗದ ಸಕ್ಸಸ್‌ ರೇಟ್‌ ಗಮನದಲ್ಲಿಟ್ಟಾಗ ಕೇವಲ ಸ್ಟಾರ್‌ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳ ಗೆಲುವು ಕೂಡಾ ಅನಿವಾರ್ಯವಾಗುತ್ತದೆ. ವರ್ಷಕ್ಕೆ ಬಿಡುಗಡೆಯಾಗುವ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್‌ಗಳ ಸಿನಿಮಾ ಗಳೆಂದು 5-6 ಚಿತ್ರಗಳಷ್ಟೇ. ಮಿಕ್ಕಂತೆ ಹೊಸಬರದ್ದೇ ಮೆರವಣಿಗೆ. ಹೀಗಿರುವಾಗ ಹೊಸಬರ ಸಿನಿಮಾದ ಗೆಲುವು ಚಿತ್ರರಂಗದ ಸಕ್ಸಸ್‌ ರೇಟ್‌ ದೃಷ್ಟಿಯಿಂದಲೂ ಅನಿವಾರ್ಯ.  ಇವತ್ತು ಹೊಸಬರು ಜನರಿಗೆ ಸಿನಿಮಾ ತಲುಪಿಸಲು ಕಷ್ಟಪಡುತ್ತಿದ್ದಾರೆ. ಸ್ಟಾರ್‌ ಸಿನಿಮಾ ಆದರೆ ಬೇಗನೇ ಜನರಿಗೆ ತಲುಪುತ್ತದೆ. ಪ್ರಮೋಶನ್‌ಗೆ ಹೆಚ್ಚು ಕಷ್ಟಪಡಬೇಕಿಲ್ಲ. ಆದರೆ, ನಿಜಕ್ಕೂ ಇವತ್ತು ಸಿನಿಮಾ ತಲುಪಿಸಲು ಕಷ್ಟಪಡುತ್ತಿರುವವರು ಹೊಸಬರು. ಬದಲಾದ ಪ್ರಮೋಶನ್‌ ಶೈಲಿಗೆ ಹೊಂದಿಕೊಳ್ಳುವುದು ಒಂದು ಕಷ್ಟವಾದರೆ, ಎರಡು ವಾರ ಚಿತ್ರಮಂದಿರದಲ್ಲಿ ಸಿನಿಮಾ ಉಳಿಸಿಕೊಳ್ಳುವುದು ಮತ್ತೂಂದು ಸವಾಲು. ಸಿನಿಮಾ ಚೆನ್ನಾಗಿದ್ದರೂ ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ನಿಜಕ್ಕೂ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪ್ರೇಕ್ಷಕ ದೊಡ್ಡ ಮನಸ್ಸು ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಒಂದರೆರಡು ಹೊಸಬರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದರೆ ಹೊಸ ತಂಡಗಳ ಜೊತೆಗೆ ವಿತರಕರಿಗೆ, ಚಿತ್ರಮಂದಿರದವರಿಗೆ ಒಂದು ವಿಶ್ವಾಸ ಬರುತ್ತದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ

ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್‌ ಮದುವೆ ಕುರಿತು ತಾಯಿ ಮಾಲತಿ ಮಾತು

ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್‌ ಮದುವೆ ಕುರಿತು ತಾಯಿ ಮಾಲತಿ ಮಾತು

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

Divorce Case: ಯುವ ರಾಜ್‌ಕುಮಾರ್‌ ವಿಚ್ಚೇದನ ಅರ್ಜಿ ವಿಚಾರಣೆ ಆ.23ಕ್ಕೆ ಮುಂದೂಡಿಕೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.