ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೆಯಾದ ಅಟ್ಟಯ್ಯ
Team Udayavani, Feb 7, 2019, 10:07 AM IST
ಹೊಸ ಪ್ರತಿಭೆಗಳೇ ನಿರ್ಮಿಸಿರುವ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ನಡುವೆಯೇ ಚಿತ್ರ ಬೆಂಗಳೂರು ಅಂತರಾ ಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊ ಳ್ಳುವ ಅವಕಾಶವನ್ನು ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ದೇಶಕ ಲೋಕೇಂದ್ರ ಸೂರ್ಯ, ‘ಕೆಲ ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ, ಅದಕ್ಕೊಂದಷ್ಟು ಮನರಂಜನಾ ಅಂಶಗ ಳನ್ನು ಸೇರಿಸಿ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರವನ್ನು ತೆರೆಗೆ ತಂದಿದ್ದೆವು. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದು, ಚಿತ್ರವನ್ನು ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರದ ಕಥಾಹಂದರವನ್ನು ಮೆಚ್ಚಿಕೊಂಡಿರುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ಆಯ್ಕೆ ಸಮಿತಿ ನಮ್ಮ ಚಿತ್ರವನ್ನು ಈ ವರ್ಷದ ಚಿತ್ರೋತ್ಸವಕ್ಕೆ ಆಯ್ಕೆ ಮಾಡಿದೆ’ ಎಂದಿದ್ದಾರೆ.
ತನ್ನ ಹೊಲಕ್ಕೆ ಬಂದು ಆಗಾಗ್ಗೆ ತೊಂದರೆ ಕೊಡುತ್ತಿದ್ದ ಹಂದಿಗಳ ಬಗ್ಗೆ, ಹೊಲದ ಮಾಲೀಕ ಹಂದಿ ಕಾಯೋಳಿಗೆ ಸಂಸ್ಕೃತ ಪದದಲ್ಲಿ ಬೈದು ಕಳುಸಿರುತ್ತಾನೆ. ಮರು ದಿನ ಬೆಳಕಾಗುವುದರೊಳಗೆ ಹಂದಿ ಕಾಯೋಳ ಮನೆಗೆ ಬೆಂಕಿ ಬಿದ್ದು, ಹಂದಿ ಗಳು ಸುಟ್ಟು ಕರಕಲಾಗುತ್ತವೆ. ಬೆಂಕಿಯಲ್ಲಿ ತೀವ್ರವಾಗಿ ಗಾಯಗೊಂಡ ಹಂದಿಕಾ ಯೋಳು ಆಸ್ಪತ್ರೆಯಲ್ಲಿ ಸಾಯುವ ಮುನ್ನ ಪೊಲೀಸರ ಎದುರು ಅಟ್ಟಯ್ಯ ಎಂಬ ಹೆಸರನ್ನಷ್ಟೇ ಹೇಳಿ ಸಾಯುತ್ತಾಳೆ. ಮುಂದೆ ಆ ಅಟ್ಟಯ್ಯ ಯಾರು ಎಂಬುದನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವುದ ಸುತ್ತ ಚಿತ್ರದ ಕಥೆ ನಡೆಯುತ್ತದೆ.
ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಅವರೊಂದಿಗೆ ಋತು ಚೈತ್ರ, ಕೆಂಪೆಗೌಡ, ಮಹದೇವಗೌಡ, ಎಂ.ಸಿ ನಾಗರಾಜು, ಯಶವಂತ್ ಭೂಪತಿ, ಲೋಕೇಶ್‌ಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲೋಕೇಶ್ ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.