Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್!
Team Udayavani, Mar 19, 2024, 12:16 PM IST
ರವಿಚಂದ್ರನ್ ಸಿನಿಕೆರಿಯರ್‌ನ ಸೂಪರ್ ಹಿಟ್ ಸಿನಿಮಾ “ಪ್ರೇಮಲೋಕ’ದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈಗ ಇದೇ “ಪ್ರೇಮಲೋಕ’ ಸಿನಿಮಾವನ್ನು ಮತ್ತೆ ಅಭಿಮಾನಿಗಳ ಮುಂದೆ ತರುವ ತಯಾರಿಯಲ್ಲಿದ್ದಾರೆ ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್.
ಹೌದು, ರವಿಚಂದ್ರನ್ “ಪ್ರೇಮಲೋಕ-2′ ಸಿನಿಮಾಕ್ಕೆ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ “ಪ್ರೇಮಲೋಕ-2′ ಸಿನಿಮಾದ ಬಹುತೇಕ ಸ್ಕ್ರಿಪ್ಟ್ ಕೆಲಸಗಳನ್ನು ಪೂರ್ಣಗೊಳಿಸಿರುವ ರವಿಚಂದ್ರನ್, ಇದೇ ಮೇ. 30ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಕನಸಿನ ಸಿನಿಮಾದ ಮುಹೂರ್ತವನ್ನು ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, “ನನ್ನ ಹೊಸ “ಪ್ರೇಮಲೋಕ’ದಲ್ಲಿ ನಿಮಗೆ ನೋಡಲು ಹತ್ತಾರು ಹೊಸ ವಿಷಯಗಳಿರುತ್ತವೆ. ಇದು ಇಂದಿನ ಜನರೇಶನ್ ಸಿನಿಮಾ. ಪ್ರೀತಿ, ಪ್ರೇಮ ಎಂಬುದು ಕೇವಲ ಕೆಲವೇ ಭಾಷೆ, ರಾಜ್ಯಗಳು ಅಥವಾ ಕೆಲವೇ ದೇಶಗಳಿಗಷ್ಟೇ ಸೀಮಿತವಾದ ವಿಷಯವಲ್ಲ. ಅದು ಪ್ರಪಂಚದ ಎಲ್ಲ ಕಡೆಗೂ ವ್ಯಾಪಿಸಿರುತ್ತದೆ. ಹಾಗೇ “ಪ್ರೇಮಲೋಕ’ ಸಿನಿಮಾ ಕೂಡ. ಇದು ಕೇವಲ ಕನ್ನಡಕ್ಕೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೆ ಅನ್ವಯವಾಗುವಂಥ ಸಿನಿಮಾ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ, ಪ್ರತಿಯೊಂದು ಪಾತ್ರಗಳೂ ಈ ಸಿನಿಮಾಕ್ಕೆ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ.
“ಪ್ರೇಮಲೋಕ’ ಸಿನಿಮಾದಲ್ಲಿ ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಿ ಅದರಲ್ಲಿ ಸಿನಿಮಾವನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರಂತೆ ರವಿಚಂದ್ರನ್.
ಇಡೀ ಸಿನಿಮಾದ ಬಹುಭಾಗ ಸೆಟ್‌ನಲ್ಲಿಯೇ ನಡೆಯಲಿದೆಯಂತೆ. ಪ್ರತಿ ಸೆಟ್‌ಗಳನ್ನು ಕೂಡ ರವಿಚಂದ್ರನ್ ತಮ್ಮ ಕಲ್ಪನೆಯ ಪ್ರಕಾರ ವಿನ್ಯಾಸ ಮಾಡಿಸುತ್ತಿದ್ದಾರೆ. ಪ್ರತಿ ಸೆಟ್‌ನಲ್ಲಿ ಹೊಸಥರದಲ್ಲಿ “ಪ್ರೇಮಲೋಕ-2′ ಸಿನಿಮಾದ ಕಥೆ ತೆರೆದುಕೊಳ್ಳಲಿದೆ. ಈಗಾಗಲೇ ಈ ಕೆಲಸಗಳು ಕೂಡ ಆರಂಭವಾಗಿದ್ದು, ಕೆಲ ತಿಂಗಳಲ್ಲಿ “ಪ್ರೇಮಲೋಕ-2′ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣವಾಗಲಿದೆ ಎಂಬ ಮಾಹಿತಿ ನೀಡುತ್ತಾರೆ ರವಿಚಂದ್ರನ್.
“ಪ್ರೇಮಲೋಕ-2′ ಸಿನಿಮಾದಲ್ಲಿ ರವಿಚಂದ್ರನ್ ಪುತ್ರ ಮನುರಂಜನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸ್ವತಃ ರವಿಚಂದ್ರನ್ ಮತ್ತು ಅವರ ಮತ್ತೂಬ್ಬ ಪುತ್ರ ವಿಕ್ರಮ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಬೃಹತ್ ಕಲಾವಿದರ ತಾರಾಗಣವೇ ಈ ಸಿನಿಮಾದಲ್ಲಿರದೆ. ಸದ್ಯ “ಪ್ರೇಮಲೋಕ-2′ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಸಿನಿಮಾದ ಮುಹೂರ್ತದ ವೇಳೆ ಸಿನಿಮಾದ ಬಗ್ಗೆ ಇನ್ನುಳಿತ ಮಾಹಿತಿ ಗಳನ್ನು ನೀಡಲಿದ್ದೇನೆ ಎಂದಿದ್ದಾರೆ ರವಿಚಂದ್ರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.