ಮಿ ಟೂ – ಆರೋಪ-ಪ್ರತ್ಯಾರೋಪ ಜೋರು


Team Udayavani, Oct 25, 2018, 4:04 PM IST

sanjana-12.jpg

ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಬೀಸುತ್ತಿರುವ “ಮಿ ಟೂ’ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ದಿನದಿಂದ ದಿನಕ್ಕೆ ಚಿತ್ರರಂಗದ ಒಬ್ಬೊಬ್ಬರ ಹೆಸರು “ಮಿ ಟೂ’ನಲ್ಲಿ ಕೇಳಿ ಬರುತ್ತಿದ್ದರೆ, ಮತ್ತೂಂದೆಡೆ “ಮಿ ಟೂ’ ಆರೋಪದ ಪರ-ವಿರೋಧ ಮಾತುಗಳನ್ನಾಡುವವರ ಸಂಖ್ಯೆಯೂ ದೊಡ್ಡದಾಗುತ್ತ ಹೋಗುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು “ಮಿ ಟೂ’ ಪರ-ವಿರೋಧ ಚರ್ಚೆಗೆ ದೊಡ್ಡ ವೇದಿಕೆಗಳಾಗುತ್ತಿವೆ. ಬುಧವಾರ ಕೂಡಾ “ಮಿ ಟೂ’ ಕುರಿತಾದ ಸಾಕಷ್ಟು ಬೆಳವಣಿಗೆಗಳು ನಡೆದವು. ಅದರ ಒಂದು ರೌಂಡಪ್‌….

ಸಂಜನಾ ವಿರುದ್ಧ ನಿರ್ದೇಶಕರ ಸಂಘ ಗರಂ

“ಮಿ ಟೂ’ ಅಭಿಯಾನ ಜೋರಾಗುತ್ತಿದ್ದಂತೆ ನಟಿ ಸಂಜನಾ, “ಗಂಡ ಹೆಂಡತಿ’ ಚಿತ್ರದಲ್ಲಿ ಕಿಸ್ಸಿಂಗ್‌ ದೃಶ್ಯಗಳನ್ನು ನನ್ನಿಂದ ಬಲವಂತವಾಗಿ ಮಾಡಿಸಿ ಚಿತ್ರೀಕರಿಸಲಾಗಿದೆ. ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರಿಂದ ನನಗೆ ದೌರ್ಜನ್ಯವಾಗಿದೆ’ ಎಂದು ನಿರ್ದೇಶಕ ರವಿ ಶ್ರೀವತ್ಸ ವಿರುದ್ದ ಆರೋಪಿಸಿದ್ದರು. ಈ ವಿಷಯ ದೊಡ್ಡದಾಗುತ್ತಿದ್ದಂತೆ, ನಿರ್ದೇಶಕ ರವಿ ಶ್ರೀವತ್ಸ “ನಟಿ ಸಂಜನಾ ತಮ್ಮ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುತ್ತ ನನ್ನ ನಿರ್ದೇಶನದ ವೃತ್ತಿಗೆ ಮಸಿ ಬಳಿಯುತ್ತಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದರು. ಅಲ್ಲದೆ ಈ ಸಂಬಂಧ ಒಂದಷ್ಟು ದಾಖಲೆಗಳನ್ನು ಹಾಜರುಪಡಿಸಿದ್ದರು.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ನಿರ್ದೇಶಕರ ಸಂಘ, ಸಂಜನಾ ಹೇಳಿಕೆಗಳನ್ನು ತಳ್ಳಿ ಹಾಕುವ ಜೊತೆಗೆ ಆಕೆಯ ಮೇಲೆ ತನ್ನ ಸಿಟ್ಟನ್ನು ಹೊರ ಹಾಕಿದೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದ ಅಧ್ಯಕ್ಷ ಡಾ. ನಾಗೇಂದ್ರ ಪ್ರಸಾದ್‌ “ಮೇಲ್ನೋಟಕ್ಕೆ ಇದೊಂದು ಆಧಾರ ರಹಿತ ಆರೋಪ ಎಂಬಂತೆ ಕಾಣುತ್ತಿ¤ದೆ. ಈ ಆರೋಪದ ಬಗ್ಗೆ ಸೂಕ್ತ ಆಧಾರ, ಮಾಹಿತಿ ಮತ್ತು ಸಂಪೂರ್ಣ ವಿವರಣೆ ನೀಡುವಂತೆ ಸಂಘ ಸಂಜನಾ ಅವರಿಗೆ ಸೂಚಿಸಿದೆ. ಸೂಕ್ತ ಆಧಾರಗಳನ್ನು ನೀಡಲು ವಿಫ‌ಲವಾದಲ್ಲಿ  ಮಾಧ್ಯಮಗಳ ಮೂಲಕ ಎರಡು ದಿನಗಳೊಳಗಾಗಿ ಈ ಹೇಳಿಕೆಗೆ ಬಹಿರಂಗ ಕ್ಷಮೆ ಕೋರುವಂತೆ ಸೂಚಿಸಲಾಗಿದೆ. ಒಂದು ವೇಳೆ ಸಂಜನಾ ಸಂಘದ ಸೂಚನೆಗೆ ಸ್ಪಂದಿಸದಿದ್ದರೆ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

 ಇದೇ ವೇಳೆ “ಗಂಡ ಹೆಂಡತಿ’ ಚಿತ್ರದ ಚಿತ್ರೀಕರಣ, ಬಿಡುಗಡೆಯ ಸಂದರ್ಭದಲ್ಲಿ ನಟಿ ಸಂಜನಾ ನೀಡಿರುವ ಹೇಳಿಕೆಗಳು, ಸಂದರ್ಶನಗಳು ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಚಿತ್ರತಂಡ ಪ್ರದರ್ಶಿಸಿತು

ಸಂಜನಾ ನನ್ನ ವಿರುದ್ಧ ಹನ್ನೆರಡು ವರ್ಷದ ಹಿಂದಿನ ಘಟನೆಯನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಅವರ ಈ ಆರೋಪಕ್ಕೆ ನಾನು ಪ್ರತಿಕ್ರಿಯಿಸದೆ ಇರಬಹುದಿತ್ತು. ಆದರೆ, ನನ್ನ ಮೌನ ಜನರ ಮನಸ್ಸಲ್ಲಿ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ, ಆಕೆಯ ವಿರುದ್ದ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ದೂರು ನೀಡಿದ್ದೇನೆ. 24 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ, ಚಿತ್ರರಂಗದ ಪ್ರತಿ ಹೆಣ್ಣನ್ನೂ ಗೌರವಿಸುತ್ತ ಬಂದಿದ್ದೇನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಅದು ಚೆನ್ನಾಗಿ ಗೊತ್ತಿದೆ. ಯಾರೆ ಆಗಲಿ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ  ಈ ಥರ ಮಾತನಾಡಬಾರದು. ಸಂಜನಾ ಮಾಡಿರುವ ಆರೋಪಕ ನನ್ನ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ. ಈ ಆರೋಪಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ.

– ರವಿ ಶ್ರೀವತ್ಸ, “ಗಂಡ ಹೆಂಡತಿ’ ಚಿತ್ರದ ನಿರ್ದೇಶಕ

ಗಂಡ ಹೆಂಡತಿ ಚಿತ್ರದ ಬಗ್ಗೆ ಸಂಜನಾ ಮಾಡಿರುವ ಪ್ರತಿಯೊಂದು ಆರೋಪಗಳು ಕೂಡ ಆಧಾರರಹಿತ. ಸಿನಿಮಾದ ಪ್ರಮೋಷನ್‌, ರಿಲೀಸ್‌ ಎಲ್ಲಾ ಸಂದರ್ಭಗಳಲ್ಲೂ ಚಿತ್ರತಂಡದ ಸದಸ್ಯರು ನಮ್ಮ ಮನೆಯವರಂತಿದ್ದರು ಎಂದು ಹೇಳುತ್ತಿದ್ದ ಸಂಜನಾ, ಇಷ್ಟು ವರ್ಷಗಳಾದ ಮೇಲೆ ಈ ರೀತಿ ಮಾತನಾಡುತ್ತಿದ್ದಾರೆ ಅಂದ್ರೆ ಏನರ್ಥ? ಇಡೀ ಚಿತ್ರತಂಡ “ಗಂಡ ಹೆಂಡತಿ’ ಚಿತ್ರದಲ್ಲಿ ಅವರಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಂಡಿದೆ. ನಿಜ ಹೇಳಬೇಕೆಂದರೆ, ಅವರಿಂದಲೇ ನಮಗೆ ತೊಂದರೆಯಾಗಿದೆ. ಆದರೆ ಚಿತ್ರತಂಡ ಅದೆಲ್ಲವನ್ನು ಎಲ್ಲಿಯೂ ಹೇಳಿಕೊಂಡಿಲ್ಲ.

– ನಾಗೇಶ್‌, “ಗಂಡ ಹೆಂಡತಿ’ ಚಿತ್ರದ ಸಹ ನಿರ್ದೇಶಕ

“ಮಿ ಟೂ’ ಅಭಿಯಾನ ಆರಂಭವಾಗಿದ್ದರಿಂದ, “ಗಂಡ ಹೆಂಡತಿ’ ಸಿನಿಮಾದ ಹಿಂದಿನ ಕಹಿ ಘಟನೆಯನ್ನು ವಿವರಿಸಿದ್ದೇನೆ. ಅಷ್ಟಕ್ಕೂ ಆವಾಗಲೇ ಹೇಳಲು ನನಗೆ ಧೈರ್ಯವಾಗಲಿ, ಅದನ್ನು ಎದುರಿಸುವ ಶಕ್ತಿಯಾಗಲಿ ಇರಲಿಲ್ಲ. ಈಗ ಅದಕ್ಕೊಂದು ಸೂಕ್ತ ಸಮಯ, ಧೈರ್ಯ, ಶಕ್ತಿ ಎಲ್ಲ ಬಂದಿರುವುದರಿಂದ ಹೇಳಿತ್ತಿದ್ದೇನೆ. ರವಿ ಶ್ರೀವತ್ಸ ಒಬ್ಬ ಸ್ಯಾಡಿಸ್ಟ್‌ ಡೈರೆಕ್ಟರ್‌. ಕೆಲ ದಿನಗಳ ಹಿಂದೆ ನನಗೆ ಫೋನ್‌ ಮಾಡಿ ಸಾಲ ಕೊಡುವಂತೆ ಒತ್ತಾಯಿಸಿದ್ದರು. ಆದರೆ ನಾನು ಸಾಲ ಕೊಡಲಾರೆ, ಬೇಕಾದರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದಿದ್ದೆ. ಅದೇ ಸಿಟ್ಟನ್ನು ಇಟ್ಟುಕೊಂಡು ಈಗ ಬೇರೆ ಥರದ ಆರೋಪ ಮಾಡುತ್ತಿದ್ದಾರೆ.

– ಸಂಜನಾ, ನಟಿ

“ಜಿಸ್ಮ್’ ಸಿನಿಮಾ ರಿಮೇಕ್‌ ಮಾಡೋಣ ಎಂದಿದ್ದರಂತೆ ಸಂಜನಾ!

“ಗಂಡ ಹೆಂಡತಿ’ ಚಿತ್ರ ಯಶಸ್ವಿಯಾದ ನಂತರ ಅಂಥದ್ದೆ ಬ್ಜೆಕ್ಟ್ ಗಳ ಸಿನಿಮಾ ಮಾಡಲು ಆಸಕ್ತರಾಗಿದ್ದ ಸಂಜನಾ, ಹಿಂದಿಯ “ಜಿಸ್ಮ್‘ ಚಿತ್ರವನ್ನು ರಿಮೇಕ್‌ ಮಾಡಿಕೊಡುವಂತೆ ನಿರ್ದೇಶಕ ರವಿ ಶ್ರೀವತ್ಸ ಅವರನ್ನು ಕೇಳಿಕೊಂಡಿದ್ದರಂತೆ ಸಂಜನಾ. ಈ ವಿಷಯವನ್ನು ಸ್ವತಃ ನಿರ್ದೇಶಕ ರವಿ ಶ್ರೀವತ್ಸ ಅವರೆ ಬಹಿರಂಗಪಡಿಸಿದ್ದಾರೆ. ನಿರ್ದೇಶಕರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ ಶ್ರೀವತ್ಸ, “2012ರಲ್ಲಿ ಸಂಜನಾ, ಹಿಂದಿಯ “ಜಿಸ್ಮ್ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್‌ ಮಾಡಿಕೊಡಿ’ ಎಂದು ಕೇಳಿದ್ದರು. ಆದ್ರೆ ನಾನು ಅಂಥದ್ದೇ ಚಿತ್ರಗಳನ್ನು ಮತ್ತೆ ಮಾಡಲು ಇಷ್ಟವಿಲ್ಲದ ಕಾರಣ ನೋಡೋಣ ಎಂದು ಹೇಳಿದ್ದೆ’ ಎಂದಿದ್ದಾರೆ. 

ಟ್ವೀಟ್‌ನಲ್ಲಿ ಶ್ರುತಿ ಚಾಟಿ:
ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್‌ ಸರ್ಜಾ ಮತ್ತು ಶ್ರುತಿ ಹರಿಹರನ್‌ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ಜೋರಾಗುತ್ತಿರುವಂತೆ, ನಟಿ ಶ್ರುತಿ ಹರಿಹರನ್‌ ಮತ್ತೆ ಟ್ವಿಟ್ಟರ್‌ನಲ್ಲಿ ತಮ್ಮ ವಿರುದ್ದ ಮಾತನಾಡುತ್ತಿರುವವರನ್ನು ಮತ್ತೂಮ್ಮೆ ಕುಟುಕಿದ್ದಾರೆ. 

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಸುದೀರ್ಘ‌ ಪತ್ರವನ್ನು ಪೋಸ್ಟ್‌ ಮಾಡಿರುವ ಶ್ರುತಿ ಹರಿಹರನ್‌ ತಮಗೆ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ಹೇಳುವುದರ ಜೊತೆಗೆ, ತಮ್ಮ ವಿರುದ್ದ ನಿಲುವು ಪ್ರದರ್ಶಿಸಿದ್ದ ಕನ್ನಡ ಚಿತ್ರರಂಗದ ಹಲವರಿಗೆ ತಿರುಗೇಟು ನೀಡಿದ್ದಾರೆ. “ಮುನಿರತ್ನ, ಚಿನ್ನೇಗೌಡರು, ಸಾ.ರಾ ಗೋವಿಂದು, ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಿರಿಯ ವ್ಯಕ್ತಿಗಳು ಕಲಾವಿದರ ಹಕ್ಕುಗಳನ್ನು ಕಾಪಾಡಬೇಕು. ಕನ್ನಡ ಚಿತ್ರರಂಗವನ್ನು ಸುರಕ್ಷಿತವಾಗಿಡುವುದು ನಿಮ್ಮ ಜವಾಬ್ದಾರಿ. 

ಕಲಾವಿದರ ಸಮಸ್ಯೆಯನ್ನು ವಾಸ್ತವ ಮತ್ತು ತಾರ್ಕಿಕ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು. ಪುರುಷರು, ಮಹಿಳೆಯರು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಬೇಕು. ಅದನ್ನು ಬಿಟ್ಟು ತಮಗಾದ ಅನ್ಯಾಯವನ್ನು ಹೇಳಿಕೊಂಡವರ ವಿರುದ್ದ ನಿಲ್ಲುವುದು ಸರಿಯಲ್ಲ. ಸಂಗೀತಾ ಭಟ್‌, ಸಂಜನಾ, ಏಕ್ತಾ, ಹೀಗೆ ಸಾಕಷ್ಟು ಮಹಿಳೆಯರು ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಆದರೆ ವಾಣಿಜ್ಯ ಮಂಡಳಿ ಆರೋಪ ಮಾಡಿದವರ ಚಾರಿತ್ರ್ಯವನ್ನು ಹರಣ ಮಾಡುತ್ತಿದೆ. ಯಾರು ಏನೇ ಹೇಳಿದರೂ, ನನಗೆ ಸರಿ ಅನಿಸಿದ್ದನ್ನು ನಾನು ಮಾಡಲು ಹೊರಟಿದ್ದೇನೆ. ನನ್ನ ಹೋರಾಟಕ್ಕಾಗಿ ನಾನು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ’ ಎಂದಿದ್ದಾರೆ.

ಅರ್ಜುನ್‌ ಸರ್ಜಾ ಪರ ಹರಿಪ್ರಿಯಾ ಬ್ಯಾಟಿಂಗ್‌

ನಟ ಅರ್ಜುನ್‌ ಸರ್ಜಾ ವಿರುದ್ದ ಶ್ರುತಿ ಹರಿಹರನ್‌ ಮಾಡಿರುವ “ಮಿ ಟೂ’ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಹರಿಪ್ರಿಯಾ, ಅರ್ಜುನ್‌ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್‌ ಮಾಡಿರುವ ಹರಿಪ್ರಿಯಾ, “ನಾನು ತುಂಬ ಚಿಕ್ಕ ವಯಸ್ಸಿನವಳಾಗಿದ್ದಾಗಿನಿಂದಲೂ ಅರ್ಜುನ್‌ ಸರ್‌ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಅವರು ಏನು ಎಂಬುದು ನನಗೆ ಚೆನ್ನಾಗಿ ಗೊತ್ತು ಅವರು ಈ ರೀತಿ ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.

“ನಾನು ತಮಿಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾದಾಗ ಅವರು ನನ್ನ ಜೊತೆ ಕನ್ನಡದಲ್ಲೆ ಮಾತನಾಡುತ್ತಿದ್ದರು. ಇದರಿಂದಾಗಿ ಅವರ ಜೊತೆ ಆ್ಯಕ್ಟ್ ಮಾಡಲು ತುಂಬ ಕಂಫ‌ರ್ಟ್‌ ಎನಿಸುತ್ತಿತ್ತು. ಇನ್ನು ಚಿತ್ರೀಕರಣದ ಸಮಯದಲ್ಲಿ ಅವರು ನನಗೆ ಮತ್ತು ನನ್ನ ತಾಯಿಗೆ ತುಂಬ ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ನಾವು ಮಾತ್ರವಲ್ಲದೆ ಶೂಟಿಂಗ್‌ ಸೆಟ್‌ನಲ್ಲಿ ಇರುತ್ತಿದ್ದ ಎಲ್ಲಾ ಮಹಿಳೆಯರೊಂದಿಗೂ ಅವರು ಅಷ್ಟೇ ಗೌರವ ಕೊಡುತ್ತಿದ್ದರು. ಇಂಥಹವರ ಮೇಲೆ ಈ ಥರದ ಆರೋಪ ಬಂದಿರುವುದಕ್ಕೆ ನನಗೆ ತುಂಬ ನೋವಾಗಿದೆ. ಅರ್ಜುನ್‌ ಸರ್ಜಾ ನನ್ನ ಸಪೋರ್ಟ್‌ ಇದೆ’ ಎಂದಿದ್ದಾರೆ ಹರಿಪ್ರಿಯಾ.

ಇಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ. ಮುಖಾಮುಖೀಯಾಗುತ್ತಾರಾ ಅರ್ಜುನ್‌, ಶ್ರುತಿ?

ಅರ್ಜುನ್‌ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್‌ ಮಾಡಿರುವ “ಮಿ ಟೂ’ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸಂಜೆೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆಯಲಿದೆ.  ಸಭೆಗೆ ಹಾಜರಾಗುವಂತೆ ನಟ ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌ ಮತ್ತು  ಸಂಬಂಧಿಸಿದವರಿಗೆ ಈಗಾಗಲೇ ಪತ್ರದ ಮೂಲಕ ತಿಳಿಸಲಾಗಿದೆ.

ಸಂಧಾನ ಸಭೆಯ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ, “ಹಿರಿಯ ಕಲಾವಿದ ಅರ್ಜುನ್‌ ಸರ್ಜಾ ಅವರ ಮೇಲೆ ಕೇಳಿ ಬಂದಿರುವ ಆರೋಪ ಇಡೀ ಕನ್ನಡ ಚಿತ್ರರಂಗಕ್ಕೇ ಒಂದು ಕಪ್ಪು ಚುಕ್ಕೆ. ಇದನ್ನು ಆದಷ್ಟು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸ್ಪಂದಿಸಿ, ಪರಿಹರಿಸಲು ವಾಣಿಜ್ಯ ಮಂಡಳಿ ಇದೆ. ಈ ಪ್ರಕರಣ ಕೂಡ ಸುಖಾಂತ್ಯವಾಗುವ ವಿಶ್ವಾಸವಿದೆ’ ಎಂದಿದ್ದಾರೆ. 

ಬೆಳವಣಿಗೆ ನೋವು ತಂದಿದೆ

ಕನ್ನಡ ಚಿತ್ರರಂಗದಲ್ಲಿನ ಸದ್ಯದ ಬೆಳವಣಿಗೆ ನೋವು ತಂದಿದೆ. ಹಾಗಂತ ನಾನಿಲ್ಲಿ ಯಾರನ್ನೂ ದೂರುವುದಿಲ್ಲ. ಎಲ್ಲರೂ ಅವರವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಸದ್ಯ ವಿಚಾರ ಮಂಡಳಿಯಲ್ಲಿದ್ದು, ಅಲ್ಲಿ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ.

– ಶಿವರಾಜಕುಮಾರ್‌, ನಟ

ಟಾಪ್ ನ್ಯೂಸ್

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.