ಕುತೂಹಲ ಹುಟ್ಟಿಸಿದೆ ‘ಫೋರ್ ವಾಲ್ಸ್ -ಟೂ ನೈಟೀಸ್’ ಪೋಸ್ಟರ್
ಈ ಸಿನಿಮಾದಲ್ಲಿರೋದು ಅಪ್ಪಟ ತಂದೆ ಮಕ್ಕಳ ನಡುವಿನ ಬಾಂಧವ್ಯದ ಸ್ಟೋರಿ
Team Udayavani, Jan 4, 2020, 2:54 PM IST
ಬೆಂಗಳೂರು: ಫೋರ್ ವಾಲ್ಸ್ – ಟೂ ನೈಟೀಸ್ ಟೈಟಲ್ ಒಂಥರ ಡಿಫ್ರೆಂಟ್ ಆಗಿದೆ. ಟೈಟಲ್ ನೋಡಿದಾಕ್ಷಣ ಕಥೆಯನ್ನ ಅಂದಾಜು ಮಾಡೋದಕ್ಕೆ ಸ್ವಲ್ಪ ಗೊಂದಲ ಉಂಟಾಗಬಹುದು. ಆದ್ರೆ ಈ ಸಿನಿಮಾದಲ್ಲಿರೋದು ಅಪ್ಪಟ ತಂದೆ ಮಕ್ಕಳ ನಡುವಿನ ಬಾಂಧವ್ಯದ ಸ್ಟೋರಿ. ಈಗಾಗಲೇ ಸಾಕಷ್ಟು ಸಿನಿಮಾಗಳು ಡಿಫ್ರೆಂಟ್ ಟೈಟಲ್ ನಲ್ಲಿ ಗಮನ ಸೆಳೆದಿವೆ. ಅದೇ ರೀತಿ ಸದ್ಯ ತನ್ನ ಟೈಟಲ್ ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ ‘ಫೋರ್ ವಾಲ್ಸ್ – ಟೂ ನೈಟೀಸ್’.
ನಿರ್ದೇಶಕ ಎಸ್. ಎಸ್. ಸಜ್ಜನ್ ಈಗಾಗಲೇ ಎಲ್ಲರಿಗೂ ಗೊತ್ತಿರುವ, ಪ್ರತಿಭಾವಂತ, ಭರವಸೆಯ ಡೈರೆಕ್ಟರ್. ಇವರ ಮೂಲ ಹೆಸರು ಸಂಗಮೇಶ್ ಎಸ್. ಸಜ್ಜನ್. ಆದ್ರೆ ಇಂಡಸ್ಟ್ರಿಯಲ್ಲಿ ಎಸ್. ಎಸ್ ಸಜ್ಜನ್ ಎಂದೇ ಮನೆ ಮಾತಾಗಿದ್ದಾರೆ. ‘ಮಂತ್ರಂ’ ಎಂಬ ಸಾಮಾಜಿಕ ಕಳಕಳಿ ಇರುವ ಮೊದಲ ಸಿನಿಮಾದಲ್ಲೇ ಗೆದ್ದವರು ಎಸ್ ಎಸ್ ಸಜ್ಜನ್. ಇದೀಗ ಎರಡನೇ ಸಿನಿಮಾ ‘ಫೋರ್ ವಾಲ್ಸ್ – ಟೂ ನೈಟೀಸ್’ ಗೆ ಕೈ ಹಾಕಿದ್ದಾರೆ. ಉತ್ತರ ಕರ್ನಾಟಕದ ಕಲಾರಾಧಕರ ಕುಟುಂಬದಿಂದ ಬಂದಿರುವ ಎಸ್.ಎಸ್ ಸಜ್ಜನ್ ಎರಡೂವರೆ ವರ್ಷದಿಂದ ಮಾಧ್ಯಮ ಲೋಕದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.
ಸಿನಿಮಾ ಎಂಬುದೇ ಹಾಗೇ. ಬೇಗ ಸೆಳೆದು ಬಿಡುತ್ತೆ. ‘ಫೋರ್ ವಾಲ್ಸ್ – ಟೂ ನೈಟೀಸ್’ ಸಿನಿಮಾದ ನಿರ್ಮಾಪಕ ಟಿ. ವಿಶ್ವನಾಥ್ ನಾಯಕ್ ಗೆ ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಸಾಕಷ್ಟು ಆಸಕ್ತಿ. ಈ ಕ್ಷೇತ್ರದಲ್ಲೇ ಏನಾದ್ರೂ ಮಾಡ್ಬೇಕು ಹಂಬಲ ಅನ್ನೋ ಛಲದಿಂದ ‘ಫೋರ್ ವಾಲ್ಸ್ – ಟೂ ನೈಟೀಸ್’ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದಕ್ಕೂ ಮುನ್ನ ಒಂದೆರಡು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಸ್ವತಂತ್ರ ನಿರ್ಮಾಪಕರಾಗಿದ್ದಾರೆ.
ಯಾವುದೇ ಅಶ್ಲೀಲ ದೃಶ್ಯವಾಗಲೀ, ಪದ ಬಳಕೆಯಾಗಲಿ ಇಲ್ಲದಿರುವ ಒಂದು ಸುಂದರ ಕಥೆಯನ್ನೊಳಗೊಂಡ ಸಿನಿಮಾ ಇದಾಗಿದೆ. ಕುಟುಂಬದೊಂದಿಗೆ ಕುಳಿತು ನೋಡಬಹುದಾದ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ. ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್ ಗೆ ನೀನಾಸಂ ಸತೀಶ್ ಸಾಥ್ ನೀಡಿದ್ದಾರೆ. ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಆರಂಭವಾಗಲಿದೆ.
ಅಚ್ಯುತ್ ಕುಮಾರ್,ದತ್ತಣ್ಣ, ಸುಜಯ್ ಶಾಸ್ತ್ರಿ, ಡಾಣಣ ಪವಿತ್ರಾ, ಭಾಸ್ಕರ್ ನೀನಾಸಂ, ರಘು ರಾಮಕೊಪ್ಪ, ಡಾಣಣ ಜಾನ್ಹವಿ ಜ್ಯೋತಿ, ಶಂಕರ್ ಮೂರ್ತಿ (ಕಿರಿಕ್ ಪಾರ್ಟಿ), ವಿಕಾಸ್, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ರುದ್ರಮ್ಮದೇವಿ, ಗರುಡವೇಗ, ಮುಂತಾದ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಆಂಧ್ರಪ್ರದೇಶದ ವಿಡಿಆರ್ ಈ ಸಿನಿಮಾಗೂ ಕ್ಯಾಮೆರಾ ಹಿಡಿದಿದ್ದಾರೆ. ಆನಂದ ರಾಜಾ ವಿಕ್ರಮ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನವಿದ್ದು, ತಾಂತ್ರಿಕ ವರ್ಗದಲ್ಲಿ ನುರಿತ ತಂಡ ಕೆಲಸ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.