ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

Team Udayavani, Jan 15, 2022, 9:04 AM IST

ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ: ಸೆಟ್ಟೇರಿದವು ಹಲವು ಚಿತ್ರಗಳು

ಒಮಿಕ್ರಾನ್‌ ಆತಂಕದಿಂದ ನಡುವೆಯೇ ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ಯಾಂಡಲ್‌ವುಡ್‌ ಸಡಗರಿಂದ ಸಂಭ್ರಮಿಸಿದೆ. ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಕೋವಿಡ್‌ ಆತಂಕ, ಸ್ಯಾಂಡಲ್‌ವುಡ್‌ನ‌ ಅದ್ಧೂರಿ ಸಂಕ್ರಾಂತಿ ಸಂಭ್ರಮಕ್ಕೆ ಬ್ರೇಕ್‌ ಹಾಕಿದ್ದರಿಂದ ಬಹುತೇಕ ಸ್ಟಾರ್, ಕಲಾವಿದರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರು ಸರಳವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ವಾಡಿಕೆಯಂತೆ ಈ ಬಾರಿಯೂ ಸಂಕ್ರಾಂತಿ ಹಬ್ಬಕ್ಕೆ ಒಂದಷ್ಟು ಹೊಸ ಸಿನಿಮಾಗಳು ಸರಳವಾಗಿ ಸೆಟ್ಟೇರಿದರೆ, ಇನ್ನೊಒಂದಷ್ಟು ಸಿನಿಮಾಗಳು ತಮ್ಮ ಟೈಟಲ್‌, ಫ‌ಸ್ಟ್ ಲುಕ್‌ ಪೋಸ್ಟರ್‌, ಟೀಸರ್‌-ಟ್ರೇಲರ್‌, ಸಾಂಗ್ಸ್‌ ಬಿಡುಗಡೆ ಮಾಡಿವೆ. ಈ ಸಂಕ್ರಾಂತಿ ಹಬ್ಬಕ್ಕೆ ಅಪ್‌ಡೇಟ್‌ ನೀಡಿದ ಒಂದಷ್ಟು ಹೊಸ ಸಿನಿಮಾಗಳು ಇಲ್ಲಿವೆ…

ಉತ್ತರ ಪ್ರದೇಶದಲ್ಲಿ ಭೈರವ ಸೆಟ್ಟೇರಿದ

“ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದ ಖ್ಯಾತಿಯ ಸನತ್‌ ಮತ್ತು “ಒಂದು ಮೊಟ್ಟೆ ಖ್ಯಾತಿಯ’ ಶೈಲಶ್ರೀ ಮುಲ್ಕಿ ಜೋಡಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ “ಬೈರವ’ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸೆಟ್ಟೇರಿದೆ. ಉತ್ತರ ಪ್ರದೇಶದ ಗೋವಿಂದಪುರದ ಹನುಮಂತನ ಸನ್ನಿಧಿಯಲ್ಲಿ “ಭೈರವ’ ಚಿತ್ರದ ಮುಹೂರ್ತ ನೆರವೇರಿದೆ. ರಾಮತೇಜ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ ಕ್ಲಾಪ್‌ ಮಾಡಿದರೆ, ವೈಭವ್‌ ಬಜಾಜ್‌ ಹಾಗೂ ಹನಿ ಚೌಧರಿ (ವಿಸಿಕಾ ಫಿಲಂ ಸಂಸ್ಥೆ) ಕ್ಯಾಮೆರಾ ಆನ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಮಾಡಿದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡ ಡಾ. ಮಂಜು ಶಿವಾಜ್‌, ವಕೀಲ ರಾಜಕುಮಾರ ಗುಪ್ತ, ಡಾ. ಸಂಜೀವ ಚೌಧರಿ ಸೇರಿದಂತೆ ಅನೇಕರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದಲ್ಲಿ ಉಮೇಶ ಸಕ್ಕರೆನಾಡು ಖಳನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಸಂದೀಪ್‌ ಫ್ರೆಡ್ರಿಕ್‌ ಛಾಯಾಗ್ರಹಣವಿದೆ.

ವಾಮನ ಅವತಾರದಲ್ಲಿ ಧನ್ವೀರ್‌

“ಬಜಾರ್‌’ ಮತ್ತು “ಬೈ ಟು ಲವ್‌’ ಸಿನಿಮಾಗಳ ಬಳಿಕ ಇತ್ತೀಚೆಗಷ್ಟೇ ನಟ ಧನ್ವೀರ್‌ ತಮ್ಮ ಮೂರನೇ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈಗ ಧನ್ವೀರ್‌ ಅಭಿನಯಿಸುತ್ತಿರುವ ಈ ಸಿನಿಮಾಕ್ಕೆ ಚಿತ್ರತಂಡ “ವಾಮನ’ ಎಂದು ಹೆಸರಿಟ್ಟಿದೆ. ಇದೇ ಸಂಕ್ರಾಂತಿಯಂದು ಈ ಸಿನಿಮಾದ ಟೈಟಲ್‌ ಅನೌನ್ಸ್‌ ಆಗಿದ್ದು, ಜೊತೆಗೆ ಚಿತ್ರತಂಡ “ವಾಮನ’ನ ಫ‌ಸ್ಟ್‌ಲುಕ್‌ ಪೋಸ್ಟರ್‌ ಮತ್ತು  ಟೈಟಲ್‌ ಮೋಶನ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. ಮೇಲ್ನೋಟಕ್ಕೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಮಾಫಿಯಾ ಕಥಾಹಂದರದ ಸಿನಿಮಾದಂತೆ ಕಾಣುವ “ವಾಮನ’ನ ಚಿತ್ರದ ಪೋಸ್ಟರ್‌ನಲ್ಲಿ ನಟ ಧನ್ವೀರ್‌ ಕೈಯಲ್ಲಿ ಚಾಕು ಹಿಡಿದು ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಕನ್ನಡ ಮತ್ತು ತೆಲುಗಿನ ಹಲವು ಚಿತ್ರಗಳಿಗೆ ಸ್ಕ್ರಿಪ್ಟ್ರೈ ಟರ್‌ ಆಗಿ ಕೆಲಸ ಮಾಡಿದ ಅನುಭವವಿರುವ ಶಂಕರ್‌ ರಾಮನ್‌ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. “ಈಕ್ವಿನಾಕ್ಸ್‌ ಗ್ಲೋಬಲ್‌ ಎಂಟರ್ಟೆನ್ಮೆಂಟ್ಸ್‌ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಚೇತನ್‌ ಕುಮಾರ್‌ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸದ್ಯ ಟೈಟಲ್‌ ಪೋಸ್ಟರ್‌ನಲ್ಲಿ “ವಾಮನ’ನನ್ನು ಪರಿಚಯಿಸಿರುವ ಚಿತ್ರತಂಡ 2-3 ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡುವ ಯೋಚನೆಯಲ್ಲಿದೆ.

ಹೊಯ್ಸಳನಾಗಲು ಧನಂಜಯ್‌ ರೆಡಿ

ಸದ್ಯ “ಬಡವ ರಾಸ್ಕಲ್‌’ ಸಿನಿಮಾದ ಸಕ್ಸಸ್‌ ಖುಷಿಯಲ್ಲಿರುವ ನಟ ಡಾಲಿ ಧನಂಜಯ್‌ ಅವರ ಹೊಸಚಿತ್ರ ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅನೌನ್ಸ್‌ ಆಗಿದೆ. ಅಂದಹಾಗೆ, ಇದು ಧನಂಜಯ್‌ ಅಭಿನಯಿಸುತ್ತಿರುವ 25ನೇ ಚಿತ್ರವಾಗಿದ್ದು, ಈ ಹೊಸಚಿತ್ರಕ್ಕೆ “ಹೊಯ್ಸಳ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಧನಂಜಯ್‌ ಮತ್ತೂಮ್ಮೆ ಖಾಕಿ ತೊಡಲಿದ್ದು, ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದ ದಿಟ್ಟ ಪೊಲೀಸ್‌ ಅಧಿಕಾರಿಯ ಸುತ್ತ ಚಿತ್ರ ನಡೆಯಲಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಸುತ್ತಮುತ್ತ ನಡೆಯಲಿದೆ. ಈ ಚಿತ್ರಕ್ಕೆ ಎಸ್‌ .ಎಸ್‌ .ತಮನ್‌ ಸಂಗೀತ, ದೀಪು ಎಸ್‌. ಕುಮಾರ್‌ ಸಂಕಲನ, ಮಾಸ್ತಿ ಸಂಭಾಷಣೆ ಇದೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಬೆಡಗಿ Vainidhi Jagdish ಟ್ರೆಂಡಿ ಲುಕ್ಸ್

ಹಿಂದೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಗೀತಾ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ವಿಜಯ್‌ ಕಿರಗಂದೂರು ಅರ್ಪಿಸುತ್ತಿರುವ ಈ ಚಿತ್ರವನ್ನು ಕಾರ್ತಿಕ್‌ ಮತ್ತು ಯೋಗಿ ಜಿ. ರಾಜ್‌ ನಿರ್ಮಿಸುತ್ತಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಇತರ ಕಲಾವಿದರು ಮತ್ತುತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಹೊರಬಂತು ಬನಾರಸ್‌ ಹೊಸ ಪೋಸ್ಟರ್‌

ರಾಜಕಾರಣಿ ಜಮೀರ್‌ ಅಹಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ “ಬನಾರಸ್‌’ ಚಿತ್ರದ ಮತ್ತೂಂದು ಹೊಸ ಪೋಸ್ಟರ್‌ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. “ಬನಾರಸ್‌’ ಚಿತ್ರದಲ್ಲಿ ಝೈದ್‌ ಖಾನ್‌ಗೆ ಸೋನಾಲ್‌ ಮಾಂಟೆರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ನ್ಯಾಷನಲ್‌ ಖಾನ್ಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ತಿಲಕ್‌ ರಾಜ್‌ ಬಲ್ಲಾಳ್‌ ಬಹುಭಾಷೆಗಳಲ್ಲಿ ನಿರ್ಮಿಸುತ್ತಿರುವ “ಬನಾರಸ್‌’ ಚಿತ್ರಕ್ಕೆ ಜಯತೀರ್ಥ ನಿರ್ದೇಶನವಿದೆ. “ಬನಾರಸ್‌’ ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಅದ್ವೆçತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಈ ಚಿತ್ರದ ಸಂಕಲನವಿದೆ. ಸದ್ಯ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ “ಬನಾರಸ್‌’ ಹೊಸ ಪೋಸ್ಟರ್‌ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಸಿನಿಪ್ರಿಯರಿಗೆ ಹಬ್ಬದ ಶುಭಾಶಯ ಹೇಳಿದೆ.

ಇದಲ್ಲದೆ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ವೇದಿಕಾ ಅಭಿನಯದ “ಹೋಮ್‌ ಮಿನಿಸ್ಟರ್‌’ ಚಿತ್ರದ ಪೋಸ್ಟರ್‌, ನಿರಂಜನ್‌ ಸುಧೀಂದ್ರ ಅಭಿನಯದ “ನಮ್ಮ ಹುಡುಗರು’ ಚಿತ್ರದ ಪೋಸ್ಟರ್‌, ಸೇರಿದಂತೆ ಹಲವು ಹೊಸ ಚಿತ್ರಗಳ ಟೈಟಲ್‌, ಫಸ್ಟ್ ಲುಕ್‌ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು, ಸಂಕ್ರಾಂತಿಯ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿ ಸ್ಯಾಂಡಲ್‌ವುಡ್‌ ಮಂದಿಯ ಸಂಭ್ರಮ ಇನ್ನಷ್ಟು ಹೆಚ್ಚಿಸಿದೆ

ಟಾಪ್ ನ್ಯೂಸ್

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.