Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ
Team Udayavani, Nov 8, 2024, 10:06 AM IST
“ಸಂತೋಷ ಸಂಗೀತ’ ಹೀಗೊಂದು ಸಿನಿಮಾ ಇಂದು ತೆರೆಕಾಣುತ್ತಿದೆ. ಸಿದ್ದು ತಮ್ಮ ಮೊದಲ ಚಿತ್ರವನ್ನು ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ. ಈ ಚಿತ್ರ ಹಾಸ್ಯ, ದುರಂತ, ಪ್ರೀತಿ, ಸಾಹಸ ಹೊಂದಿರುವ ಸಂಪೂರ್ಣ ಮನರಂಜನಾ ಕಥೆಯಿಂದ ಕಟ್ಟಿಕೊಂಡಿದೆ. ಪ್ರೀತಿ ಮತ್ತು ಜೀವನದಲ್ಲಿ ಅನೇಕ ತಿರುವು-ಮರಳು ಕಾಣುವ ಕಥೆ, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.
ಚಿತ್ರದ ಟ್ರೇಲರ್ ಈಗಾಗಲೇ ಜನರಿಂದ ಮೆಚ್ಚುಗೆ ಪಡೆದಿದೆ. “ಸಂತೋಷ ಸಂಗೀತ’ ಸಿನಿಮಾ ಎಲ್ಲ ಭಾವನೆಗಳನ್ನು ಒಳಗೊಂಡಿರುವ ವಿಶಿಷ್ಟ ಕಥಾಹಂದರ, ಇದು ಕಾಲೇಜು ಜೀವನ, ವೃತ್ತಿಪರ ಬದುಕು, ನೀತಿ, ಪ್ರೀತಿ, ಜೀವನದ ಸವಾಲು, ಹಾಸ್ಯ, ಆಕ್ಷನ್ ಎಲ್ಲದರ ಸಮ್ಮಿಲನ ಎನ್ನುವುದು ಸಿದ್ದು ಮಾತು.
ಈ ಜರ್ನಿಯಲ್ಲಿಯೇ ಪ್ರೀತಿಯೊಂದಿಗೆ ಪ್ರೊಫೆಶನಲ್ ಜೀವನದ ಸಂಧಿಗೆ ಬರುವ ಪಾತ್ರಗಳು, ಸಂಬಂಧಗಳ ಒತ್ತಡಗಳನ್ನು ಎದುರಿಸುವುದು ಮತ್ತು ನೈತಿಕ ಆಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿರುವ ಹೋರಾಟಗಳೇ ಚಿತ್ರದ ಪ್ರಮುಖ ಅಂಶಗಳು. ಹಾಸ್ಯ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರೆ, ಆಕ್ಷನ್ ಸನ್ನಿವೇಶಗಳು ಕಥೆಯನ್ನು ಸ್ಫೂರ್ತಿದಾಯಕವಾಗಿರಿಸುತ್ತದೆ. “ಸಂತೋಷ ಸಂಗೀತ’ ಎನ್ನುವುದು ಜೀವನದ ಎಲ್ಲ ಆಯಾಮಗಳನ್ನು ಸಂಭಾವಿಸುವ ಒಂದು ಮನಮುಟ್ಟುವ ಚಿತ್ರ. ಇದು ಪ್ರೇಕ್ಷಕರನ್ನು ತೀವ್ರವಾಗಿ ತಲುಪುತ್ತದೆ ಎನ್ನುವುದು ಚಿತ್ರತಂಡದ ಮಾತು.
ಅರ್ಣವ್ ವಿನ್ಯಾಸ, ರಾಣಿ ವರದ, ದೊಡ್ಡಣ್ಣ, ಅವಿನಾಶ್, ವಾಣಿ, ನಕ್ಷತ್ರ, ಲಯ ಕೋಕಿಲ, ಮಿಮಿಕ್ರಿ ಗೋಪಿ, ಲೋಕೇಶ್, ಅನೀಶ್, ಸೂರ್ಯ ಮತ್ತು ಮಡೆನೂರು ಮನು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.