ಥಿಯೇಟರ್ ಗೆ ಬಂದ ‘ಡಿಯರ್ ಸತ್ಯ’
Team Udayavani, Mar 11, 2022, 3:53 PM IST
“ಪರ್ಪಲ್‌ರಾಕ್ ಎಂಟರ್ ಟೈನರ್’ ಹಾಗೂ “ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್’ ಲಾಂಛನದಲ್ಲಿ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ಅವರು ನಿರ್ಮಿಸಿರುವ “ಡಿಯರ್ ಸತ್ಯ’ ಚಿತ್ರ ಈ ವಾರ ತೆರೆಗೆ ಬಂದಿದೆ.
ಕಳೆದ ಕೆಲ ದಿನಗಳಿಂದ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದ ಚಿತ್ರತಂಡ ಅಂತಿಮವಾಗಿ “ಡಿಯರ್ ಸತ್ಯ’ನನ್ನು ಪ್ರೇಕ್ಷಕರ ಮುಂದೆ ತಂದಿದೆ. ಇನ್ನು ಚಿತ್ರದ ಪ್ರಚಾರ ಹಂತದಲ್ಲಿ ನಟ ಶ್ರೀಮುರಳಿ ಅವರ ಕೈಯಿಂದ ಚಿತ್ರದ ಟ್ರೇಲರ್ ಹೊರಬಂದಿತ್ತು.
ಈ ವೇಳೆ ಮಾತನಾಡಿದ ಶ್ರೀಮುರಳಿ, “ಸಂತೋಷ್ ನನಗೆ ತುಂಬಾ ವರ್ಷಗಳ ಸ್ನೇಹಿತ. ಈಗ ಆರ್ಯನ್ ಸಂತೋಷ್ ಆಗಿದ್ದಾರೆ. ನಿರ್ಮಾಪಕ ಯತೀಶ್, ಗಣೇಶ್ ಪಾಪಣ್ಣ ಕೂಡ ನನಗೆ ಬಹಳ ದಿನಗಳ ಪರಿಚಯ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಉಪ್ಪಿ ಸರ್ ಹಾಡಿರುವ ಹಾಡು ನನಗಿಷ್ಟ. ಎಲ್ಲದಕ್ಕಿಂತ ನನ್ನ ಸ್ನೇಹಿತ ಸಂತೋಷ್‌ಗೆ ಈ ಚಿತ್ರ ಯಶಸ್ಸು ತಂದು ಕೊಡಲಿ’ ಎಂದು ಹಾರೈಸಿದರು.
ಇದನ್ನೂ ಓದಿ:ಕಡಲ ತಡಿಯಲ್ಲಿ ಆಪರೇಶನ್ ಡಿ ಹಾಡು..; ಮಲ್ಪೆಯಲ್ಲಿ ಸಾಗಿದ ಚಿತ್ರೀಕರಣ
“ಚೆನ್ನೈನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ರಚಿಸಲು ಸ್ಪೂರ್ತಿ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಕಥೆ ಸಿದ್ದಮಾಡಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ. ನಂತರ ಗಣೇಶ್ ಪಾಪಣ್ಣ ಅವರು ಫೋನ್ ಮಾಡಿ ಕಥೆ ಕೇಳಿದರು. ಗಣೇಶ್, ಯತೀಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಪರ್ಪಲ್ ರಾಕ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗೆಳೆಯ ಶ್ರೀಮುರಳಿ ಹಾಗೂ ನನ್ನ ಗೆಳೆತನ ದಶಕಕ್ಕೂ ಮೀರಿದ್ದು. ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ನಾನು ಆಬಾರಿ’ ಎಂಬುದು ಚಿತ್ರದ ಬಗ್ಗೆ ನಾಯಕ ಆರ್ಯನ್ ಸಂತೋಷ್ ಮಾತು.
ಚಿತ್ರದ ನಿರ್ದೇಶಕ ಶಿವಗಣೇಶ್, ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರದ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. “ಡಿಯರ್ ಸತ್ಯ’ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದ್ದು, ವಿನೋದ್ ಭಾರತಿ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.