ಕೋವಿಡ್ 19 ಮಾಯವಾದರೆ ವಜ್ರಹೊಳಪು!
Team Udayavani, Mar 27, 2020, 1:09 PM IST
ಕನ್ನಡದಲ್ಲಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ “ವಜ್ರಗಳು’ ಆಧರಿಸಿದ “ಸಾರಾ ವಜ್ರ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇನ್ನೇನು ಬಿಡುಗಡೆಗೆ ತಯಾರಿ ನಡೆಸುತ್ತಿದೆ.
ಈ ಹಿಂದೆ”1098ಸೇವ್ ಚೈಲ್ಡ್‌ವುಡ್’ ಚಿತ್ರವನ್ನು ನಿರ್ದೇಶಿಸಿದ್ದ ಅರ್ನಾ ಸಾಧ್ಯ (ಶ್ವೇತಾಶೆಟ್ಟಿ) ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ಅನುಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಇದೊಂದು ಬ್ಯಾರಿ ಸಮುದಾಯದ ಕಥೆ. ಒಂದುಹೆಣ್ಣಿನ ಮೇಲಿನ ಚಿತ್ರಿತವಾಗಿರುವ ಈ ಚಿತ್ರದಲ್ಲಿ ಈಗಿನ ವ್ಯವಸ್ಥೆ, ಎಮೋಷನಲ್, ನೋವು-ನಲಿವುಇತ್ಯಾದಿ ವಿಷಯಗಳು ತುಂಬಿಕೊಂಡಿವೆ. ಕಲಾತ್ಮಕ ಅಂಶಗಳ ಜೊತೆಯಲ್ಲಿ ಕಮರ್ಷಿಯಲ್ ವಿಷಯಕೂಡ ಇಲ್ಲಿ ಮೇಳೈಸಿದೆ.
ರೆಹಮಾನ್ ಇಲ್ಲೊಂದು ವಿಶೇಷ ಪಾತ್ರಮಾಡಿದ್ದಾರೆ.ಉಳಿದಂತೆ ರಮೇಶ್‌ಭಟ್, ಸುಧಾ ಬೆಳವಾಡಿ, ಸುಹಾನ, ಪ್ರದೀಪ್ ಪೂಜಾರಿ, ವಿಭಾಸ್, ಅಂಕಿತ, ಸಾಯಿತೋಶಿತ್, ಆಯುಶ್ ಶೆಟ್ಟಿ ಇತರರು ಅಭಿನಯಿಸಿದ್ದಾರೆ. ಸದ್ಯಕ್ಕೆ “ಸಾರಾ ವಜ್ರ’ದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೂಡ ಮುಗಿಸಿರುವ ಚಿತ್ರತಂಡ ಬಿಡುಗಡೆ ಕೆಲಸಗಳಿಗೆ ಮುಂದಾಗಿದೆ. ಇನ್ನು, ಚಿತ್ರಕ್ಕೆ ವಿ.ಮನೋಹರ್ ಅವರು ಸಂಗೀತ ನೀಡಿದ್ದು, ಚಿತ್ರದಲ್ಲಿ ಏಳುಹಾಡುಗಳಿವೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ನರೇಂದ್ರ ಬಾಬು ಚಿತ್ರಕಥೆ ಹಾಗು ಸಂಭಾಷಣೆ ಬರೆದಿದ್ದಾರೆ.
ಚಿತ್ರವನ್ನು ಸಂಭ್ರಮ ಡ್ರೀಮ್ ಹೌಸ್ ಬ್ಯಾನರ್ ಮೂಲಕ ದೇವೇಂದ್ರರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಪರಮೇಶ್ ಚಿತ್ರದ ಛಾಯಾಗ್ರಹಣ ಮಾಡಿದರೆ, ಅಕ್ಷಯ್ ಪಿ.ರಾವ್ ಸಂಕಲನ ಮಾಡಿದ್ದಾರೆ.
ಕೋವಿಡ್ 19 ಸಮಸ್ಯೆಯಿಂದಾಗಿ ಚಿತ್ರರಂಗ ಸ್ಥಗಿತಗೊಂಡಿದೆ. ಹಾಗೆಯೇ, ಚಿತ್ರರಂಗದ ಇತರೆ ಚಟುವಟಿಕೆಗಳು ನಿಂತಿವೆ. ಕೋವಿಡ್ 19 ಭೀತಿ ಕಡಿಮೆಯಾದ ಬಳಿಕ “ಸಾರಾ ವಜ್ರ ‘ಚಿತ್ರದಕೆಲಸಗಳನ್ನು ಪೂರೈಸಿ, ಪ್ರೇಕ್ಷಕರಮುಂದೆ ಸಿನಮಾ ತರಲು ನಿರ್ದೇಶಕ ಯೋಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.