![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 28, 2021, 3:20 PM IST
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರು ಅಭಿನಯಿಸುತ್ತಿರುವ ‘ಜೇಮ್ಸ್’ ಸಿನಿಮಾ ಬಿಡುಗಡೆಯ ಮುನ್ನವೆ ಭಾರೀ ಗಳಿಕೆಯ ಸೂಚನೆ ನೀಡಿದೆ.
ಹೌದು, ಚೇತನ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಜೇಮ್ಸ್ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಭಾರೀ ಹವಾ ಸೃಷ‍್ಟಿಸಿದೆ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಈ ಚಿತ್ರದ ಮೇಲೆ ಕನ್ನಡದ ಸಿನಿ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಮಾತಿನ ಮನೆಗೆ ಹೋಗಲು ಸಿದ್ಧವಾಗಿರುವ ಈ ಚಿತ್ರದ ಸ್ಯಾಟ್ ಲೈಟ್ ರೈಟ್ಸ್ ಇದೀಗ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಮೂಲಗಳ ಪ್ರಕಾರ 15 ಕೋಟಿ ರೂ.ಗೆ ಹಕ್ಕುಗಳು ಮಾರಾಟವಾಗಿವೆಯಂತೆ. ಅದೇ ರೀತಿ ಹಿಂದಿ ಸೇರಿದಂತೆ ಬೇರೆ ಭಾಷೆಗೆ ಡಬ್ಬಿಂಗ್ ಹಕ್ಕುಗಳ ಮಾರಾಟದ ಮಾತುಕತೆ ನಡೆದಿದೆಯಂತೆ.
ಪಕ್ಕಾ ಆ್ಯಕ್ಷನ್ ಕಥಾ ಹಂದರದ ಈ ಚಿತ್ರವನ್ನು ಚೇತನ ಕುಮಾರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದೆ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚೇತನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೆಕಾ ಶ್ರೀಕಾಂತ್, ಆದಿತ್ಯಾ ಮೆನೆನ್ ಅನು ಪ್ರಭಾಕರ್ , ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗ ಜೇಮ್ಸ್ ಚಿತ್ರದಲ್ಲಿದೆ.
ಇನ್ನು ಪುನೀತ್ ರಾಜಕುಮಾರ್ ಅವರು ಯುವರತ್ನದ ಬಳಿಕ ಜೇಮ್ಸ್ ಚಿತ್ರದಲ್ಲಿ ಬ್ಯುಝಿಯಾದರು. ಇದರ ಜೊತೆಗೆ ಲೂಸಿಯಾ ಪವನ್ ನಿರ್ದೇಶನದ ‘ದ್ವಿತ್ವ’ , ದಿನಕರ ತುಗೂದೀಪ್ ನಿರ್ದೇಶನದಲ್ಲಿ ಇನ್ನೂ ಹೆಸರಿಡದ ಸಿನಿಮಾ ಹಾಗೂ ರಾಜಕುಮಾರ ಮತ್ತು ಯುವರತ್ನ ಖ್ಯಾತಿಯ ನಿರ್ದೇಶಕ ಸಂತೋಷ ಆನಂದರಾಮ್ ಅವರ ಜೊತೆ ಮೂರನೇ ಬಾರಿಗೆ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಪುನೀತ್.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.