Sathish Ninasam: ಬರಲಿದೆ ಅಯೋಗ್ಯ-2
Team Udayavani, Dec 4, 2024, 11:11 AM IST
ಅಯೋಗ್ಯ- ನೀನಾಸಂ ಸತೀಶ್‌ಗೆ ಒಂದು ಬ್ರೇಕ್ ಕೊಟ್ಟ ಸಿನಿಮಾ. ಸತೀಶ್ ಹಾಗೂ ರಚಿತಾ ರಾಮ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರ ಕೂಡಾ ಹಿಟ್‌ಲಿಸ್ಟ್ ಸೇರಿತ್ತು. ಈಗ ಮತ್ತೆ ಈ ಜೋಡಿ ಮೋಡಿ ಮಾಡಲು ಮುಂದಾಗಿದ್ದಾರೆ. ಅದು “ಅಯೋಗ್ಯ-2′ ಮೂಲಕ.
ಹೌದು, ಹಿಟ್ ಸಿನಿಮಾವೊಂದರ ಮುಂದುವರೆದ ಭಾಗ ಮಾಡುವ ಯೋಚನೆ ಸಿನಿಮಾ ಮಂದಿಯ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಅದರಂತೆ ಈಗ “ಅಯೋಗ್ಯ-2′ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.
“ಅಯೋಗ್ಯ’ ಸಿನಿಮಾ ನಿರ್ದೇಶನ ಮಾಡಿದ್ದ ಮಹೇಶ್ ಕುಮಾರ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತಿದ್ದಾರೆ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಎಂ.ಮುನೇಗೌಡ ವಹಿಸಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಡಿ.11ರಂದು ನಡೆಯಲಿದೆ. ಈ ಮೂಲಕ ಮತ್ತೂಮ್ಮೆ ಸಿದ್ದೇಗೌಡ-ನಂದಿನಿ ಜೋಡಿ ಮಾಡಿ ಮಾಡಲಿದ್ದಾರೆ. ಅಯೋಗ್ಯ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರು ಈ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ರಚಿತಾ ರಾಮ್, ಸತೀಶ್ ನೀನಾಸಂ, ರವಿಶಂಕರ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mugila Mallige: ನವತಂಡದ ಮುಡಿಗೆ ಮುಗಿಲ ಮಲ್ಲಿಗೆ
17 ವರ್ಷಗಳ ಹಿಂದೆ ತೆರೆ ಕಾಣಬೇಕಿದ್ದ ಉಪ್ಪಿ – ರಮ್ಯಾ ಅಭಿನಯದ ಸಿನಿಮಾ ಶೀಘ್ರದಲ್ಲೇ ರಿಲೀಸ್
Renukaswamy Case: ಪವಿತ್ರಾ ಗೌಡ ಜಾಮೀನಿಗೆ ವಾದ ಮಂಡನೆ.. ವಿಚಾರಣೆ ಮುಂದೂಡಿದ ಹೈಕೋರ್ಟ್
Max Movie: ಅಮ್ಮನ ಆಸೆ ಈಡೇರಲಿಲ್ಲ ಎಂದ ಕಿಚ್ಚ ಸುದೀಪ
Rishab Shetty: ʼಛತ್ರಪತಿ ಶಿವಾಜಿʼಯಾದ ರಿಷಬ್; ಐತಿಹಾಸಿಕ ಸಿನಿಮಾದಲ್ಲಿ ಡಿವೈನ್ ಸ್ಟಾರ್
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.