ಸಾಹೇಬ್ರು ಹಿಂಗೌವ್ರೆ ನೋಡಿ!
Team Udayavani, Mar 22, 2017, 11:45 AM IST
ರವಿಚಂದ್ರನ್ ಪುತ್ರ ಮನೋರಂಜನ್ “ಸಾಹೇಬ’ ಚಿತ್ರದಲ್ಲಿ ನಟಿಸುತ್ತಿರೋದು ಎಲ್ಲರಿಗೂ ಗೊತ್ತು. ಆದರೆ, ಅವರ ಗೆಟಪ್ ಏನು, ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನೋದು ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ಈಗ “ಸಾಹೇಬ’ ಚಿತ್ರದ ಕೆಲ ಫೋಟೋಗಳು “ಉದಯವಾಣಿ’ಗೆ ಲಭ್ಯವಾಗಿವೆ.
ಈ ಫೋಟೋಗಳನ್ನು ಗಮನಿಸಿದರೆ, ಮನೋರಂಜನ್ ದನ, ಹಸು, ಕುರಿಗಳನ್ನು ಕಾಯುತ್ತಿರುವಂತಿದೆಯಲ್ಲಾ? ಅನ್ನೋದೇನು ಕಾಯುತ್ತಿದ್ದಾರೆ ಎಂಬುದಕ್ಕೆ ಈ ಫೋಟೋಗಳಿಗಿಂತ ಸಾಕ್ಷಿ ಬೇಕಾ? ಇರಲಿ, ಇದು ಸಿನಿಮಾರಂಗ. ಹಾಗಾಗಿ, ಇಲ್ಲಿ ನಟ ಯಾವ ಪಾತ್ರವೇ ಇರಲಿ. ಅದನ್ನು ಕಣ್ಣಿಗೊತ್ತಿ ಮಾಡಲೇಬೇಕು.
ಅಂದಹಾಗೆ, ಈ ದೃಶ್ಯ ಒಂದು ಸಂದರ್ಭದಲ್ಲಿ ಬರುವಂಥದ್ದಂತೆ. ಮೊದಲ ಸಿನಿಮಾದಲ್ಲೇ ಮನೋರಂಜನ್ ತುಂಬ ಪ್ರೀತಿಯಿಂದ ಒಂದು ಸನ್ನಿವೇಶದಲ್ಲಿ ಬರುವ ಈ ಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಅವರಲ್ಲಿರುವ ಆಳವಾದ ಸಿನಿಮಾ ಪ್ರೀತಿ ತೋರುತ್ತದೆ. ಸದ್ಯಕ್ಕೆ ಈ ಫೋಟೋ ನೋಡಿ, ಪಾತ್ರ ಏನಿರಬಹುದು ಎಂದು ಊಹಿಸುತ್ತಿರಿ.
ಇಷ್ಟರಲ್ಲೇ ಸಿನಿಮಾ ಕೂಡ ತೆರೆಗೆ ಬರಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ನಿಮ್ಮ ಆ ಊಹೆ ನಿಜವಾಗಿರಲೂಬಹುದೇನೋ? ರವಿಚಂದ್ರನ್ ಅವರ ಪುತ್ರ ಮನೋರಂಜನ್ “ಸಾಹೇಬ’ ಎಂಬ ಚಿತ್ರಕ್ಕೆ ಹೀರೋ ಅಂತ ಯಾವಾಗ ಅನೌನ್ಸ್ ಮಾಡಲಾಯಿತೋ, ಆಗಿನಿಂದಲೇ “ಸಾಹೇಬ’ನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಹೆಚ್ಚಾಗಿವೆ.
ಆ ನಿರೀಕ್ಷೆಯನ್ನು ನಮಗೆ ಸಿಕ್ಕಿರುವ ಫೋಟೋಗಳು ಹೆಚ್ಚಿಸಿವೆ. ಭರತ್ “ಸಾಹೇಬ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜಯಣ್ಣ, ಭೋಗೇಂದ್ರ ನಿರ್ಮಾಪಕರು. ಸೀತಾರಾಮ್ ಈ ಚಿತ್ರದ ಛಾಯಾಗ್ರಾಯಕರು ಮಾರ್ಚ್ 24 ರಂದು ಬಿಡುಗಡೆಯಾಗುತ್ತಿರುವ “ರಾಜಕುಮಾರ’ ಚಿತ್ರದ ಜತೆಯಲ್ಲಿ “ಸಾಹೇಬ’ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.