ಡಿಜಿಟಲ್ ದುನಿಯಾದಲ್ಲಿ ಮಕ್ಕಳ ಕಥೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’
Team Udayavani, May 6, 2022, 4:25 PM IST
ತಂತ್ರಜ್ಞಾನ ಬೆಳೆದು ಅಂಗೈಯಲ್ಲೇ ಎಲ್ಲವೂ ಅನ್ನುವಂತಾಗಿದೆ. ಇನ್ನು ಮೊಬೈಲ್ ಎಂಬ ಮಾಯೆ ಎಲ್ಲರನ್ನು ಆವರಿಸಿದೆ. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಮೊಬೈಲ್ ಗೀಳು ಬಿಟ್ಟಿದ್ದಲ್ಲ. ಇಂತಹ ತಂತ್ರಜ್ಞಾನದ ಅತಿರೇಕ ಮಕ್ಕಳಲ್ಲಿ ಹೇಗೆ ಪ್ರಭಾವ ಬೀರಿದೆ ಎಂಬ ವಿಷಯವನ್ನು ಹೊತ್ತು ಒಂದು ಸಿನಿಮಾ ತಯಾರಾಗಿದೆ.
“ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಹೀಗೊಂದು ವಿಭಿನ್ನ ಟೈಟಲ್‌ನ ಚಿತ್ರವನ್ನು ನಿರ್ದೇಶಕ ಮಧು ಚಂದ್ರ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ನಟ, ನಿರೂಪಕ ಸೃಜನ್ ಲೋಕೇಶ್ ಹಾಗೂ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಏ.13 ರಂದು ಚಿತ್ರ ರಿಲೀಸ್ ಆಗಲಿದೆ. ಇದರ ಭಾಗವಾಗಿ ಇತ್ತೀಚೆಗೆ ಚಿತ್ರ ತಂಡ ತನ್ನ ಟ್ರೇಲರ್ ಬಿಡುಗಡೆಗೊಳಿಸಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮ್ಮ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ಕುರಿತಾಗಿ ಮಾತನಾಡುವ ನಿರ್ದೇಶಕ “ಇಂದಿನ ಮಕ್ಕಳು ಡಿಜಿಟಲ್ ದುನಿಯಾದಲ್ಲಿ ಮೊಬೈಲ್‌ಗೆ ತುಂಬಾ ಅಡಿಕ್ಟ್ ಆಗಿದ್ದಾರೆ. ಪಾಲಕರು ತಮ್ಮ ಕೆಲಸದ ಒತ್ತಡದಲ್ಲಿ ಮಕ್ಕಳ ಕುರಿತು ಗಮನಹರಿಸಬೇಕಾದ ಕೆಲ ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇಂತಹ ಮಕ್ಕಳು ಮತ್ತು ಅವರ ಪಾಲಕರನ್ನು ನನ್ನ ನಿತ್ಯದ ಬದುಕಿನಲ್ಲಿ ಗಮನಿಸಿದ್ದೆ. ಈ ಸಂಗತಿಯನ್ನು ತೆರೆ ಮೇಲೆ ತರುವ ನಿಟ್ಟಿಲ್ಲಿ ಕಥೆ ಹೆಣೆದು ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಪ್ರಸ್ತುತವಾಗಿ ಸಮಾಜ ದಲ್ಲಿ ನಡೆಯುತ್ತಿರುವ ಒಂದು ಸಾಮಾನ್ಯ ವಿಷಯವಾಗಿದೆ. ಆದರೂ ಗಂಭಿರ ಸಂಗತಿಯೂ ಹೌದು. ವಿಷಯ ವಸ್ತುವನ್ನು ಒಂದು ಮನೋರಂಜನಾನ್ಮತಕ ದೃಷ್ಟಿಯಲ್ಲಿ ಕಾಮಿಡಿ ಹಾಗೂ ಡ್ರಾಮಾ ಶೈಲಿಯಲ್ಲಿ ತೋರ್ಪಡಿಸುವ ಪ್ರಯತ್ನ ನಮ್ಮದಾಗಿದೆ’ ಎಂಬುದು ಮಧುಚಂದ್ರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.