ಓಲ್ಡ್ ಮಾಂಕ್‌ನಲ್ಲಿ ಕಲಾ ತಪಸ್ವಿ ರಾಜೇಶ್
Team Udayavani, Dec 28, 2020, 6:00 PM IST
ಹಿರಿಯ ನಟ ರಾಜೇಶ್ ದೊಡ್ಡ ಗ್ಯಾಪ್‌ನ ನಂತರ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅದು “ಓಲ್ಡ್ ಮಾಂಕ್’ ಚಿತ್ರದಲ್ಲಿ.
ಶ್ರೀನಿವಾಸ್ ನಿರ್ದೇಶಿಸಿ, ನಾಯಕರಾಗಿ ನಟಿಸುತ್ತಿರುವ “ಓಲ್ಡ್ ಮಾಂಕ್’ ಚಿತ್ರದಲ್ಲಿ ಹಿರಿಯ ನಟ ರಾಜೇಶ್ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರ ಭಾಗದಚಿತ್ರೀಕರಣ ಜನವರಿ 15ರಿಂದ ಆರಂಭವಾಗಲಿದೆ. ಇನ್ನು “ಓಲ್ಡ್ ಮಾಂಕ್’ ಚಿತ್ರದಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಎಸ್. ನಾರಾಯಣ್, ಸಿಹಿಕಹಿ ಚಂದ್ರು, ಆರ್. ಟಿ ರಮಾ, ಡಿಂಗ್ರಿ ನಾಗರಾಜ್,ಬೆಂಗಳೂರು ನಾಗರಾಜ್, ಅರುಣಾ ಬಾಲರಾಜ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ “ಓಲ್ಡ್ ಮಾಂಕ್’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ : ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಗೆ ಮಾತೃ ವಿಯೋಗ
ಮಗನ ಚಿತ್ರದಲ್ಲಿ ಅಪ್ಪನ ನಟನೆ :
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ “ನವಮಿ 9.9.1999′ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ನಾರಾಯಣ್ ಪುತ್ರ ಪವನ್ ನಿರ್ದೇಶಿಸುತ್ತಿದ್ದಾರೆ. ಎಸ್.ನಾರಾಯಣ್ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಫೈಟ್ ಹಾಗೂಹಾಡುಗಳ ಚಿತ್ರೀಕರಣ ಬಾಕಿಯಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ.ಲಾಕ್‌ಡೌನ್ ದಿನಗಳಲ್ಲಿ ಕಥೆ ಬರೆದಿದ್ದು, ಪವನ್ ಎಸ್.ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
Royal movie: ರಾಯಲ್ ಚಿತ್ರ ವೀಕ್ಷಿಸಿದ ದರ್ಶನ್ ಆ್ಯಂಡ್ ಫ್ಯಾಮಿಲಿ