ಸೆನ್ಸಾರ್ ಮುಂದೆ “ಎಂಎಲ್‌ಎ’
Team Udayavani, Jun 5, 2018, 10:59 AM IST
ವೆಂಕಟೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ “ಎಂಎಲ್‌ಎ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಶೀಘ್ರದಲ್ಲೇ ಚಿತ್ರ ರಾಜಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಪಿ.ಆರ್.ಕೆ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿವೆ. ವೆಂಕಿ ಪೆಲುಗುಳ ಈ ಚಿತ್ರದ ಸಹ ನಿರ್ಮಾಪಕರು.
ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಪ್ರಥಮ್ ಅಭಿನಯಿಸಿದ್ದಾರೆ. ಸೋನಾಲ್ ಮೊಂತೆರೊ ಈ ಚಿತ್ರದ ನಾಯಕಿ. “ಸ್ಪರ್ಶ’ ರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಂ ಸುಬ್ರಮಣ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಅವರ ಛಾಯಾಗ್ರಹಣವಿದೆ. ಕೆ.ಆರ್.ಲಿಂಗರಾಜು ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.