“ರಣಾಂಗಣ’ದಲ್ಲಿ ಶಾನ್ವಿ ಹೋರಾಟ
ಕಿರುತೆರೆ ನಾಯಕನ ಜೊತೆ ಶ್ರೀವಾಸ್ತವ್ ಹೊಸ ಚಿತ್ರ
Team Udayavani, Aug 20, 2019, 3:05 AM IST
ನಟಿ ಶಾನ್ವಿ ಶ್ರೀವಾಸ್ತವ್ ಕನ್ನಡದಲ್ಲಿ ಬೇಡಿಕೆ ನಟಿ ಎನಿಸಿಕೊಂಡಿರುವುದು ಗೊತ್ತೇ ಇದೆ. ಬಹುತೇಕ ಸ್ಟಾರ್ ನಟರ ಜೊತೆಯಲ್ಲಿ ನಟಿಸಿರುವ ಶಾನ್ವಿ ಅಭಿನಯದ ಮೂರು ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗಿವೆ. ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’, ಗಣೇಶ್ ಜೊತೆಯಲ್ಲಿ “ಗೀತಾ’ ಹಾಗು ಉಪೇಂದ್ರ ಮತ್ತು ರವಿಚಂದ್ರನ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ “ರವಿಚಂದ್ರ’ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಈಗ ಹೊಸ ಸುದ್ದಿಯೆಂದರೆ, ಅವರು ಮತ್ತೂಂದು ಹೊಸ ಚಿತ್ರವನ್ನು ಒಪ್ಪಿದ್ದಾರೆ. ಹೌದು, ಶಾನ್ವಿ ಅಭಿನಯದ ಹೊಸ ಚಿತ್ರಕ್ಕೆ “ರಣಾಂಗಣ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ರೋಹಿತ್ ರಾವ್ ನಿರ್ದೇಶಿಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಶಾನ್ವಿ ಅವರಿಗೆ ಹೀರೋ ಆಗಿ ಸ್ಕಂದ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ರಾಧಾ ರಮಣ’ ಧಾರಾವಾಹಿಯ ನಾಯಕ ಸ್ಕಂದ ಅಶೋಕ್ ಈ ಚಿತ್ರದ ಮೂಲಕ ಹಿರಿತೆರೆ ಸ್ಪರ್ಶಿಸುತ್ತಿದ್ದಾರೆ.
ಸಹಜವಾಗಿಯೇ ಸ್ಕಂದ ಅಶೋಕ್ ಅವರು, ನಾಯಕಿ ಶಾನ್ವಿ ಅವರೊಂದಿಗೆ ನಟಿಸುತ್ತಿರುವುದಕ್ಕೆ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಚಿತ್ರದ ಶೀರ್ಷಿಕೆಯೇ ಇದೊಂದು ಯುದ್ಧದ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಎಂಬುದನ್ನು ಸೂಚಿಸುತ್ತದೆ. ಚಿತ್ರದಲ್ಲಿ ನಾಯಕ ಸ್ಕಂದ ಅಶೋಕ್ ಅವರು, ಸೈನಿಕರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಸೈನಿಕ ಪಾತ್ರ ಅಂದಮೇಲೆ, ನೈಜ ಘಟನೆ ಅಂಶಗಳು ಚಿತ್ರದಲ್ಲಿರಬಹುದು ಎಂಬ ಸಣ್ಣ ಅನುಮಾನ ಬರಬಹುದು. ಆದರೆ, ಇದು ಯಾವುದೇ ವ್ಯಕ್ತಿಯ ನೈಜ ಘಟನೆಯ ಚಿತ್ರವಲ್ಲ.
ಆದರೆ, ಇತ್ತೀಚಿಗೆ ನಡೆದಂತಹ ಹಲವಾರು ಘಟನೆಗಳನ್ನು ಇಟ್ಟುಕೊಂಡು ಕಥೆ ಹೆಣೆದು, ಚಿತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಸೈನಿಕನ ಪಾತ್ರ ನಿರ್ವಹಿಸುತ್ತಿರುವುದರಿಂದ ಅವರು ಆ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸುತ್ತಿದ್ದು, ನಿತ್ಯವೂ ವರ್ಕೌಟ್ ಮಾಡುತ್ತಿದ್ದಾರೆ ಎಂಬುದು ಚಿತ್ರತಂಡದ ಮಾತು. ಅದೇನೆ ಇರಲಿ, ಶಾನ್ವಿ ಶ್ರೀವಾಸ್ತವ್ ಈಗ “ರಣಾಂಗಣ’ದಲ್ಲಿ ಹೋರಾಡಲು ಸಜ್ಜಾಗಿದ್ದಾರೆ. ಸ್ಟಾರ್, ಹೊಸಬರು ಎಂಬುದನ್ನು ಗಮನಿಸದ ಶಾನ್ವಿ, ಕಥೆ ಹಾಗೂ ಪಾತ್ರಗಳ ಕಡೆ ಹೆಚ್ಚು ಗಮನಹರಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.