ಶರಣ್ ಈಗ “ಅವತಾರ್’ ಪುರುಷ
Team Udayavani, Feb 6, 2019, 5:53 AM IST
ನಟ ಶರಣ್ ಹಾಗೂ ನಿರ್ದೇಶಕ ಸುನಿ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಬರುತ್ತಿದ್ದು, ಈ ಸಿನಿಮಾವನ್ನು ಪುಷ್ಕರ್ ನಿರ್ಮಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಸಹಜವಾಗಿಯೇ ಈ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಚಿತ್ರದ ಟೈಟಲ್ ಏನಿರಬಹುದು ಎಂಬ ಕುತೂಹಲ ಅನೇಕರಿಗಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಚಿತ್ರಕ್ಕೆ “ಅವತಾರ್ ಪುರುಷ’ ಎಂದು ಹೆಸರಿಡಲಾಗಿದೆ.
ಕನ್ನಡದಲ್ಲಿ ಅಂಬರೀಶ್ ಅವರು “ಅವತಾರ ಪುರುಷ’ ಎಂಬ ಸಿನಿಮಾ ಮಾಡಿದ್ದರು. ಹಾಗಂತ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು, ಹಾಲಿವುಡ್‌ನಲ್ಲಿ “ಅವತಾರ್’ ಸಿನಿಮಾ ಬಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ “ಅವತಾರ್’ನ ಮೇಕಪ್, ಗೆಟಪ್ ಎಲ್ಲರ ಮನಸೂರೆಗೊಂಡಿತ್ತು. ಈಗ ಶರಣ್ “ಅವತಾರ್ ಪುರುಷ’ದ ವಿಶೇಷತೆ ಏನು ಎಂದು ಕೇಳಬಹುದು.
ಹಾಲಿವುಡ್‌ನ “ಅವತಾರ್’ ಚಿತ್ರದ ಪೋಸ್ಟರ್ ಅನ್ನು ಹೋಲುವಂತೆ “ಅವತಾರ್ ಪುರುಷ’ದ ಫೋಟೋಶೂಟ್ ಮಾಡಿದ್ದು, ಚಿತ್ರತಂಡ ಫಸ್ಟ್‌ಲುಕ್ ಬಿಡುಗಡೆ ಮಾಡಿದೆ. ಚಿತ್ರದ ಟೈಟಲ್ ಫಂಟ್ ಕೂಡಾ “ಅವತಾರ್’ ಶೈಲಿಯಲ್ಲೇ ಇದೆ. ಹಾಗಂತ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಇದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುನಿ, “ಇಲ್ಲಿ ಹೀರೋ ಜೂನಿಯರ್ ಆರ್ಟಿಸ್ಟ್. ಹಾಗಾಗಿ, ತುಂಬಾ ಅವತಾರಗಳನ್ನು ತಾಳುತ್ತಾನೆ. ಒಂದು ಹಂತದಲ್ಲಿ ಆತ ನಿಜ ಜೀವನದಲ್ಲಿ ಬೇರೆ ಅವತಾರವೆತ್ತಬೇಕಾಗಿ ಬರುತ್ತದೆ. ಅದಕ್ಕೊಂದು ಕಾರಣವಿರುತ್ತದೆ. ಹಾಗಾಗಾಗಿ, ಟೈಟಲ್ ಕಥೆಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಜೊತೆಗೆ ಚಿತ್ರದಲ್ಲಿ ರಾಮಾಯಣದಲ್ಲಿ ಬರುವ ತ್ರಿಶಂಕು ಸ್ವರ್ಗ ಮತ್ತು ಮಹಾಭಾರತದ ಒಂದು ಎಳೆಯನ್ನು ಇಟ್ಟುಕೊಂಡು, ಅದನ್ನು ಇಂದಿನ ಕಾಲಮಾನಕ್ಕೆ ಅನ್ವಯಿಸಿದರೆ ಹೇಗಿರುತ್ತದೆ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರವನ್ನು ಮಾಡುತ್ತಿದ್ದೇವೆ’ ಎನ್ನುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್, “ಇದೊಂದು ಸಂಪೂರ್ಣ ಮನರಂಜನಾತ್ಮಕ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಶರಣ್ ಹಾಗೂ ಸುನಿ ಕಾಂಬಿನೇಶನ್‌ನಲ್ಲಿ ಈ ಥರದ ಚಿತ್ರವನ್ನು ಯಾವತ್ತೋ, ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಇದೊಂದು ಹೊಸಥರದ ಸಬ್ಜೆಕ್ಟ್ ಚಿತ್ರ. ನೋಡುಗರಿಗಂತೂ ಮನರಂಜನೆಗೆ ಮೋಸವಿಲ್ಲ’ ಎನ್ನುತ್ತಾರೆ. ಅಂದಹಾಗೆ, ಇಂದು ಶರಣ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ “ಅವತಾರ್ ಪುರುಷ’ ಅವರಿಗೆ ಖುಷಿ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.