ಶರಣ್‌ ಈಗ ಲೇಡೀಸ್‌ ಟೈಲರ್‌


Team Udayavani, Apr 18, 2018, 10:59 AM IST

sharan.jpg

ವಿಜಯಪ್ರಸಾದ್‌ ನಿರ್ದೇಶಿಸಬೇಕಿದ್ದ “ಲೇಡೀಸ್‌ ಟೈಲರ್‌’ ಎಂಬ ಚಿತ್ರ ನೆನಪಿದೆಯಾ?ಬಹುಶಃ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಅದು “ಲೇಡೀಸ್‌ ಟೈಲರ್‌’. ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರ್ಮೂರು ಬಾರಿ ನಾಯಕರು ಬದಲಾಗಿದ್ದರು. ಕೊನೆಗೆ ರವಿಶಂಕರ್‌ ಗೌಡ ಮತ್ತು ಶ್ರುತಿ ಹರಿಹರನ್‌ ಅಭಿನಯದಲ್ಲಿ “ಲೇಡೀಸ್‌ ಟೈಲರ್‌’ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್‌ ಗೌಡ ಬದಲು ಶರಣ್‌ ಈ ಚಿತ್ರದಲ್ಲಿ “ಲೇಡೀಸ್‌ ಟೈಲರ್‌’ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರವಿಶಂಕರ್‌ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಶರಣ್‌ ಅಭಿನಯದಲ್ಲಿ ಚಿತ್ರ ಪ್ರಾರಂಭ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಬಹುಶಃ ಒಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.

ಏಕೆಂದರೆ, ಒಂದೇ ಚಿತ್ರದಿಂದ ನಾಯಕನನ್ನು ಎರಡೆರೆಡು ಬಾರಿ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, “ಲೇಡೀಸ್‌ ಟೈಲರ್‌’ ಎಂಬ ಚಿತ್ರವಾಗುತ್ತದೆ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್‌ ಗೌಡ. ಆದರೆ, ಕೆಲವು ದಿನಗಳ ನಂತರ ರವಿಶಂಕರ್‌ ಬದಲು ಸತೀಶ್‌ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು.

ಅದಾದ ಕೆಲವು ದಿನಗಳಿಗೆ, ಸತೀಶ್‌ ಜಾಗಕ್ಕೆ ಜಗ್ಗೇಶ್‌ ಬಂದಿದ್ದಾರೆ ಎಂದು ಸುದ್ದಿಯಾಯ್ತು. ಅದಾದ ಕೆಲವು ದಿನಗಳಿಗೆ ಚಿತ್ರ ನಿಂತು ಹೋದ ಸುದ್ದಿ ಬಂತು. ಇನ್ನು “ಲೇಡೀಸ್‌ ಟೈಲರ್‌’ ಚಿತ್ರ ಆಗುವುದಿಲ್ಲ ಎಂದು ಎಲ್ಲರೂ ನಂಬಿರುವಾಗಲೇ, ಮತ್ತೆ ರವಿಶಂಕರ್‌ ಅಭಿನಯದಲ್ಲಿ ಚಿತ್ರವನ್ನು ಶುರು ಮಾಡುತ್ತಿರುವ ಸುದ್ದಿಯಾಯ್ತು. ಆ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಬರದ ಕಾರಣ, ಯಾರೂ ಆ ಚಿತ್ರದ ಬಗ್ಗೆ ಗಮನಹರಿಸುವುದಕ್ಕೆ ಹೋಗಿರಲಿಲ್ಲ.

ಹೀಗಿರುವಾಗಲೇ, ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಮತ್ತು ರವಿಶಂಕರ್‌ ಗೌಡ ಬದಲು ಶರಣ್‌ ಆ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ರವಿಶಂಕರ್‌ ಗೌಡ ಹೊರಹೋಗುತ್ತಿರುವುದಕ್ಕೆ ನಿಖರವಾದ ಕಾರಣವಿಲ್ಲದಿದ್ದರೂ, ಚಿತ್ರಕ್ಕೆ ಮೂರ್‍ನಾಲ್ಕು ಕೋಟಿ ಬಜೆಟ್‌ ಆಗುತ್ತಿರುವುದರಿಂದ, ಅವರ ಬದಲು ಸ್ವಲ್ಪ ಸ್ಟಾರ್‌ಗಿರಿ ಇರುವ ನಟರನ್ನು ಹಾಕಿಕೊಂಡರೆ ಅನುಕೂಲವಾಗುತ್ತದಂತೆ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿ ಮೂಡಿತಂತೆ.

ಅದೇ ಕಾರಣಕ್ಕೆ ರವಿಶಂಕರ್‌ ಗೌಡ ಬದಲು ಶರಣ್‌ ಚಿತ್ರಕ್ಕೆ ಎಂಟ್ರಿಯಾಗುತ್ತಿರುವ ಸುದ್ದಿ ಇದೆ. ಇನ್ನು ಚಿತ್ರ ಯಾವಾಗ ಶುರುವಾಗಲಿದೆ ಮತ್ತು ಚಿತ್ರದಲ್ಲಿ ಯಾರ್ಯಾರು ನಟಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.