ಶರಣ್‌ಗೆ ಮಂಜು ಸ್ವರಾಜ್ ಚಿತ್ರ
Team Udayavani, Nov 13, 2017, 6:00 PM IST
ಶರಣ್ ಅಭಿನಯದ ಎರಡು ಚಿತ್ರಗಳು ಚಿತ್ರೀಕರಣದಲ್ಲಿವೆ. ತಾವೇ ನಿರ್ಮಿಸಿ-ನಟಿಸಿರುತ್ತಿರುವ “ರ್‍ಯಾಂಬೋ-2′ ಚಿತ್ರೀಕರಣ ಒಂದು ಕಡೆಯಾದರೆ, ಮಲಯಾಳಂನ “ಟು ಕಂಟ್ರೀಸ್’ ಚಿತ್ರದ ರೀಮೇಕ್‌ನಲ್ಲೂ ಶರಣ್ ನಟಿಸುತ್ತಿದ್ದಾರೆ. ಈ ನಡುವೆಯೇ ಶರಣ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಈಗಷ್ಟೇ ಸ್ಕ್ರಿಪ್ಟ್ ಹಂತದಲ್ಲಿದೆ. ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ.
ಈ ಹಿಂದೆ “ರೋಸ್’, “ಮಾಸ್ ಲೀಡರ್’ ಸಿನಿಮಾಗಳನ್ನು ನಿರ್ಮಿಸಿದ್ದ ತರುಣ್ ಶಿವಪ್ಪ ಈಗ ಶರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶಿಸುತ್ತಿದ್ದಾರೆ. ಶಿವರಾಜಕುಮಾರ್ ಅವರ “ಶ್ರೀಕಂಠ’ ಚಿತ್ರದ ನಂತರ ಮಂಜು ಸ್ವರಾಜ್, ನಿರ್ದೇಶಿಸುತ್ತಿರುವ ಸಿನಿಮಾವಿದು. ಅಂದಹಾಗೆ, ಈ ಹಿಂದೆ ಮಂಜು ಸ್ವರಾಜ್, ಮಿತ್ರ ಅವರಿಗೆ “ಸಣ್ಣಕ್ಕಿ ರಾಮೇಗೌಡ’ ಎಂಬ ಸಿನಿಮಾ ಮಾಡುತ್ತಾರೆಂದು ಸುದ್ದಿಯಾಗಿತ್ತು.
ಆದರೆ, ಈಗ ಆ ಚಿತ್ರ ಮುಂದಕ್ಕೆ ಹೋಗಿದೆ. ಮಂಜು ಸ್ವರಾಜ್ ಹೇಳುವಂತೆ, “ಸದ್ಯಕ್ಕೆ ಆ ಚಿತ್ರ ಮಾಡುತ್ತಿಲ್ಲ. ಅದಕ್ಕಿಂತ ಮುಂಚಿನ ಕಮಿಟ್‌ಮೆಂಟ್ ಮುಗಿಸಿಕೊಂಡು ಆ ಸಿನಿಮಾ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ಮಂಜು ಸ್ವರಾಜ್. ಶರಣ್ ನಾಯಕರಾಗಿರುವ ಚಿತ್ರಕ್ಕೆ ತರುಣ್ ಸುಧೀರ್ ಅವರು ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಈ ಹಿಂದೆ ತರುಣ್ ಸುಧೀರ್ ಅವರ “ರ್‍ಯಾಂಬೋ’, “ವಿಕ್ಟರಿ’, “ಅಧ್ಯಕ್ಷ’ ಚಿತ್ರಗಳ ಸ್ಕ್ರಿಪ್ಟ್ನಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
“ವಿಕ್ಟರಿ’ ಹಾಗೂ “ಅಧ್ಯಕ್ಷ’ ಚಿತ್ರಗಳನ್ನು ತರುಣ್ ಸುಧೀರ್ ಸಹೋದರ ನಂದಕಿಶೋರ್ ನಿರ್ದೇಶಿಸಿದ್ದರು. ಇಬ್ಬರ ಕೈ ಚಳಕ ಫಲಿಸಿತ್ತು. ಈಗ ಮತ್ತೂಮ್ಮೆ ಶರಣ್ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಕೂತಿದ್ದಾರೆ ತರುಣ್. ಸದ್ಯ ಚಿತ್ರಕ್ಕೆ ನಾಯಕಿಯಾಗಲೀ, ಶೀರ್ಷಿಕೆಯಾಗಲೀ ಅಂತಿಮವಾಗಿಲ್ಲ. ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದು, ಚಿತ್ರ ಸಂಕ್ರಾಂತಿ ವೇಳೆಗೆ ಸೆಟ್ಟೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ