![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 15, 2019, 3:03 AM IST
ಚಿತ್ರರಂಗಕ್ಕೆ ಬರುವ ಹೊಸ ನಾಯಕ ನಟರು ತುಂಬಾ ಎಕ್ಸೆ„ಟ್ ಆಗುವ ದಿನ ಯಾವುದೆಂದರೆ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕ ಹತ್ತಿರ ಬರುವಾಗ. ಜನ ತಮ್ಮ ಸಿನಿಮಾವನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎಂಬ ಕಾತರ ಮನೆ ಮಾಡಿರುತ್ತದೆ. ಈಗ ನವನಟ ಶರತ್ ಅವರಿಗೂ ಈ ತರಹದ ಒಂದು ಅನುಭವವಾಗುತ್ತಿದೆ.
ಯಾವ ಶರತ್ ಎಂದರೆ “ಮಳೆಬಿಲ್ಲು’ ಸಿನಿಮಾ ಬಗ್ಗೆ ಹೇಳಬೇಕು. “ಮಳೆಬಿಲ್ಲು’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಚಿತ್ರ ಈ ವಾರ (ಜು.19) ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನವನಟ ಶರತ್ ನಾಯಕರಾಗಿ ನಟಿಸಿದ್ದಾರೆ. ಸೋಲೋ ಹೀರೋ ಆಗಿ ಶರತ್‌ಗೆ ಇದು ಮೊದಲ ಸಿನಿಮಾ.
ಈ ಹಿಂದೆ “ಕ’ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಮಾಡಿದ ಶರತ್, “ನಗುವ ನಯನ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. “ಮಳೆಬಿಲ್ಲು’ ಶರತ್ ಅವರ ಎರಡನೇ ಸಿನಿಮಾ. ಸ್ಕೂಲ್-ಕಾಲೇಜಿನಲ್ಲಿ ನಡೆಯುವ ಕಥೆಯಾದ್ದರಿಂದ ಶರತ್ ಇಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ಸ್ಕೂಲ್ ಹಾಗೂ ಕಾಲೇಜು ಹುಡುಗನಾಗಿ ನಟಿಸಿದ್ದಾರೆ. ಆರಂಭದಲ್ಲಿ ಸ್ಕೂಲ್ ಹುಡುಗನ ಪಾತ್ರವನ್ನು ಬೇರೆ ಹುಡುಗರಿಂದ ಮಾಡಿಸಲು ನಿರ್ದೇಶಕರು ಚಿಂತನೆ ನಡೆಸಿದ್ದರಂತೆ. ಆದರೆ, ಕೊನೆಗೆ ಶರತ್ ಅವರೇ ಈ ಪಾತ್ರಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ನಟಿಸಿದರಂತೆ. ಈ ಪಾತ್ರಕ್ಕಾಗಿ 15 ದಿನದಲ್ಲಿ ಏಳು ಕೆ.ಜಿ ತೂಕ ಇಳಿಸಿದ್ದಾಗಿ ಹೇಳುತ್ತಾರೆ.
ಕಾಲೇಜು ಗೆಟಪ್‌ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾಗಿ ಹೇಳುವ ಶರತ್‌ಗೆ ಈ ಸಿನಿಮಾ ಮೇಲೆ ವಿಶ್ವಾಸವಿದೆ. “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಟ್ರೇಲರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾವನ್ನೂ ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಶರತ್ ಮಾತು. ಚಿತ್ರವನ್ನು ನಾಗರಾಜ್ ಹಿರಿಯೂರು ನಿರ್ದೇಶಿಸಿದ್ದು, ನಿಂಗಪ್ಪ ನಿರ್ಮಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.