ನೈಜ ಘಟನೆಯ ಸುತ್ತ ‘ಶವಸಂಸ್ಕಾರ’
Team Udayavani, Sep 27, 2021, 1:32 PM IST
ನೈಜ ಘಟನೆಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಶವಸಂಸ್ಕಾರ’. ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ನಡೆದ ನೈಜ ಕತೆ ಇರುವ “ಶವಸಂಸ್ಕಾರ’ ಚಿತ್ರಕ್ಕೆ ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ.
ನಿರ್ಮಾಪಕರು ಮತ್ತು ಅರ್ಜುನ್ ಸಾಹಿತ್ಯ, ಸುಪ್ರಿತ್ ಗಾಂಧರ ಸಂಗೀತದಲ್ಲಿ “ಅಮ್ಮ ಕೊಟ್ಟ ಕೈಯ ತುತ್ತ, ಮುದ್ದಾಡುತ್ತಾ ಕೊಟ್ಟ ಮುತ್ತ, ಆಡಿಸುತ್ತಾ ಬೆಳದ ಹೊತ್ತ, ನೆನಪಿನಲಿ’ ಹೀಗೆ ಹಾಡಿನ ಸಾಲಿನಲ್ಲಿ ಈ ಹಾಡು ಮೂಡಿ ಬಂದಿದೆ. ಎಸ್.ಕೆ.ಮೋಹನ್ ಕುಮಾರ್ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ.
ಚಿಕ್ಕವನನಿದ್ದಾಗ ಅಮ್ಮನು ಹೇಳುತ್ತಿದ್ದ ಕತೆಯಲ್ಲಿ ಶವಸಂಸ್ಕಾರ ನಡೆಸುವವನಿಗೂ ಬದುಕು ಎನ್ನುವುದು ಇರುತ್ತದೆ. ಆತನ ಜೀವನದಲ್ಲಿ ಅನುಭವಿಸಿದ ಒಂದಷ್ಟು ಘಟನೆಗಳನ್ನು ಬಳಿಸಿಕೊಂಡು, ಉಳಿದುದನ್ನು ಕಮರ್ಷಿಯಲ್ ಆಗಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ:ಸ್ಟಾರ್ ಸಿನಿಮಾಗಳ ಅಬ್ಬರ ಶುರು: ಒಂದೇ ದಿನ ಎರಡು ಸ್ಟಾರ್ ಸಿನಿಮಾ; ‘ಸ್ಟಾರ್‌ವಾರ್ ಅಲ್ಲ ‘
ಚನ್ನರಾಯಪಟ್ಟಣ, ಮಂಡ್ಯ, ಚನ್ನಪಟ್ಟಣ, ಮದ್ದೂರು, ರಾಮನಗರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಂತರಾಜು ಗೌಡ ಈ ಚಿತ್ರದ ನಿರ್ದೇಶಕರು.
ಚಿತ್ರದಲ್ಲಿ ಗೋವಿಂದೇ ಗೌಡ, ಅನ್ವಿತಾ ಶೆಟ್ಟಿ, ದಿವ್ಯಶ್ರೀ, ಯತಿರಾಜ್, ರಂಗಭೂಮಿ ಪ್ರತಿಭೆಗಳಾದ ಪ್ರಜ್ವಲ್, ಅಕ್ಷಯ್, ದರ್ಶನ್, ಕಿರಣ್, ಗೌತಮ್, ಮೌಲ, ಆನಂದ್, ಅಮಿತ್, ಸುದೀಪ್, ನಾಗರತ್ನ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.