“ಆತ ಖಾಸಗಿ ಅಂಗವನ್ನು…” ಬಿಗ್ ಬಾಸ್ ಮನೆಯಲ್ಲಿ ಮೀಟೂ ಆರೋಪಿ: ಗರಂ ಆದ ನಟಿ
Team Udayavani, Oct 12, 2022, 6:55 PM IST
ಮುಂಬಯಿ: ಹಿಂದಿ ಬಿಗ್ ಬಾಸ್ ಸೀಸನ್ 16 ಆರಂಭವಾದ ದಿನಗಳಿಂದ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದೆ. ಅದರಲ್ಲಿ ಕೆಲ ಸ್ಪರ್ಧಿಗಳೂ ಟ್ರೆಂಡ್ ನಲ್ಲಿದ್ದಾರೆ.
ಈ ಹಿಂದೆ ಮೀಟೂ ಆರೋಪದಲ್ಲಿ ಹೆಸರು ಕೇಳಿ ಬಂದಿದ್ದ ಸಾಜಿದ್ ಖಾನ್ ಅವರು ಈ ಬಾರಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಇದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಇತ್ತೀಚೆಗೆ ಗಾಯಕಿ ಸೋನಾ ಮೊಹಾಪಾತ್ರ ಸರಣಿ ಟ್ವೀಟ್ ಗಳಿಂದ ಸಾಜಿದ್ ಖಾನ್ ಮೀಟೂ ಘಟನೆಗಳನ್ನು ಉಲ್ಲೇಖಿಸಿ ಖಂಡಿಸಿದ್ದರು. ಅವರು ಸ್ಪರ್ಧೆಯಲ್ಲಿರಲು ಲಾಯಕ್ಕಲ್ಲ ಎಂದು ಟವಿ ವಾಹಿನಿಯ ವಿರುದ್ದ ಹರಿಹಾಯ್ದಿದ್ದರು.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಮೀಟೂ ಆರೋಪಿ ಸಾಜಿದ್ ಖಾನ್ ಅವರು ಬಿಗ್ ಬಾಸ್ ನಲ್ಲಿರಬಾರದೆಂದು ಹೇಳಿಕೆ ನೀಡಿ, ಖಂಡಿಸಿದ್ದರು. ಇದೀಗ ಮತ್ತೊಬ್ಬ ನಟಿಯೊಬ್ಬರು ಸಾಜಿದ್ ವಿರುದ್ಧ ಗರಂ ಆಗಿ, ಹಿಂದಿನ ಕರಾಳ ಘಟನೆಯನ್ನು ವಿವರಿಸಿದ್ದಾರೆ.
ನಟಿ ಶೆರ್ಲಿನ್ ಚೋಪ್ರಾ ಟ್ವಿಟರ್ ನಲ್ಲಿ ನಿರ್ದೇಶಕ ಸಾಜಿದ್ ಖಾನ್ ಅವರ ಅಸಭ್ಯ ವರ್ತನೆ ಬಗ್ಗೆ ಬರೆದುಕೊಂಡಿದ್ದಾರೆ. ಸಾಜಿದ್ ತಮ್ಮ ಖಾಸಗಿ ಅಂಗವನ್ನು ನನ್ನ ಮೇಲಿಟ್ಟು, ಅದನ್ನು ಸ್ಕೇಲ್ ನಲ್ಲಿ ಅಳೆದು 10 ರಲ್ಲಿ ಎಷ್ಟು ರೇಟ್ ಕೊಡ್ತೀಯಾ ಎಂದು ಹೇಳಿದ್ದರು. ನಾನು ಬಿಗ್ ಬಾಸ್ ಗೆ ಎಂಟ್ರಿ ಕೊಡಬೇಕು, ಅವರಿಗೆ ರೇಟಿಂಗ್ ಕೊಡಬೇಕು. ವೀಕ್ಷಕರು ಒಬ್ಬ ಸಂತ್ರಸ್ತೆ ಕಿರುಕುಳಗಾರನನ್ನು ಹೇಗೆ ನಡೆಸಿಕೊಡುತ್ತಾಳೆ ಎನ್ನುವುದನ್ನು ಜನ ನೋಡಬೇಕೆಂದು ನಟಿ ಟ್ವೀಟ್ ಮಾಡಿದ್ದಾರೆ.
ಇದರೊಂದಿಗೆ ನಟಿ ಈ ವಿಷಯದಲ್ಲಿ ಸಲ್ಮಾನ್ ಖಾನ್ ಅವರು ಒಂದು ನಿಲುವು ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡಿದ ಬಳಿಕ, ಸಾಜಿದ್ ಅವರನ್ನು ಹೇಗೆ ನೀವು ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ್ದೀರಿ? ಸಾಜಿದ್ ಅವರ ಹೇಯ ಕೃತ್ಯದಿಂದ ನೊಂದ ಮಹಿಳೆಯರು ಬದುಕು ದುಸ್ತರವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2018 ರಲ್ಲಿ ಸಾಜಿದ್ ಖಾನ್ ವಿರುದ್ಧ ಮೀಟೂ ಆರೋಪ ಕೇಳಿ ಬಂದಿತ್ತು. ಹಲವರು ಸೆಲೆಬ್ರಿಟಿ ನಟಿಯರು ಅವರು ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.