Just Married: ಟೀಸರ್‌ನಲ್ಲಿ ʼಜಸ್ಟ್ ಮ್ಯಾರೀಡ್ʼ; ನಿರ್ಮಾಣದತ್ತ ಅಜನೀಶ್ ಲೋಕನಾಥ್
Team Udayavani, Oct 7, 2024, 4:33 PM IST
ಸಂಗೀತ ನಿರ್ದೇಶನದಲ್ಲಿ ಬಿಝಿಯಾಗಿರುವ ಅಜನೀಶ್ ಲೋಕನಾಥ್ ಈಗ ಸದ್ದಿಲ್ಲದೇ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ಇವರಿಗೆ ಸಿ.ಆರ್.ಬಾಬಿ ಅವರು ಸಾಥ್ ನೀಡುವ ಜೊತೆಗೆ ಸಿನಿಮಾದ ನಿರ್ದೇಶನದ ಹೊಣೆ ಕೂಡಾ ಹೊತ್ತಿದ್ದಾರೆ. ಆ ಚಿತ್ರಕ್ಕೆ “ಜಸ್ಟ್ ಮ್ಯಾರೀಡ್’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ನಿರ್ದೇಶಕರಾದ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಜೊತೆಯಾಗಿ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು. ಚಿತ್ರದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತಾಅಮರ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕಿ ಸಿ.ಆರ್.ಬಾಬಿ, “ಸಿನಿಮಾ ನಿರ್ದೇಶನ ನನ್ನ ಬಹು ವರ್ಷಗಳ ಕನಸು. ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಅಜನೀಶ್ ನಿರ್ಮಾಣ ಮಾಡಿದ್ದಾರೆ. ಇನ್ನು ದಕ್ಷಿಣ ಭಾರತದ ಈ ಮೂವರು ಜನಪ್ರಿಯ ನಿರ್ದೇಶಕರು ನಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಬಂದಿದೆ ಎಂದರೆ ನನ್ನ ತಂಡದ ಸಹಕಾರವೇ ಕಾರಣ ಅವರೆಲ್ಲರಗೂ ಧನ್ಯವಾದ. ಸದ್ಯದಲ್ಲೇ ಜಸ್ಟ್ ಮ್ಯಾರೀಡ್ ನಿಮ್ಮ ಮುಂದೆ ಬರಲಿದೆ’ ಎಂದರು.
“ನನ್ನ ಮೊದಲ ಗುರು ನನ್ನ ತಂದೆ ಲೋಕನಾಥ್ ಅವರು. ಚಿತ್ರರಂಗದ ನನ್ನ ಗುರುಗಳು ಎಂದರೆ ಕೆ.ಕಲ್ಯಾಣ್ ಹಾಗೂ ಸಿ.ಆರ್.ಬಾಬಿ. ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ. ಬಾಬಿ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅವರೆ ನಿರ್ದೇಶನ ಕೂಡ ಮಾಡಿದ್ದಾರೆ. ಈಗ ಟೀಸರ್ ಬಿಡುಗಡೆಯಾಗಿ, ಚಿತ್ರ ರಿಲೀಸ್ ಹಂತಕ್ಕೆ ತಲುಪಿದೆ’ ಎನ್ನುವುದು ಅಜನೀಶ್ ಲೋಕನಾಥ್ ಮಾತು.
ಚಿತ್ರದಲ್ಲಿ ಶೈನ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. “ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಸಂತೋಷವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟಿ ಅಂಕಿತಾಅಮರ್ ಅವರು ಉತ್ತಮ ಕಲಾವಿದೆ. ಅವರ ಕನ್ನಡ ಹಾಗೂ ನಟನೆ ಎರಡು ಚೆಂದ’ ಎಂದರು ಶೈನ್.
“ನಾನು ಅಜನೀಶ್ ಅವರ ಹಾಡುಗಳಿಗೆ ಅಭಿಮಾನಿ. ಒಂದು ದಿನ ಅವರೆ ಕರೆ ಮಾಡಿ, ನೀವೇ ನಮ್ಮ ಚಿತ್ರದ ನಾಯಕಿ ಎಂದರು. ಇದಕ್ಕಿಂತ ಭಾಗ್ಯ ಬೇಕೇ. ಸಿ.ಆರ್. ಬಾಬಿ ಅವರು ನಿರ್ದೇಶಕಿಯಾಗಿ ಮೊದಲ ಚಿತ್ರವನ್ನೇ ಎಲ್ಲರೂ ಮೆಚ್ಚುವ ಹಾಗೆ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸಹನ ನನ್ನ ಪಾತ್ರದ ಹೆಸರು’ ಎಂದರು ನಾಯಕಿ ಅಂಕಿತಾ ಅಮರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.