ಮಾಸ್ ಲವ್ ಸ್ಟೋರಿಯಲ್ಲಿ ಶಿವ 143
Team Udayavani, Aug 20, 2022, 3:35 PM IST
ಧೀರೇನ್ ರಾಮ್‌ಕುಮಾರ್ ನಾಯಕರಾಗಿರುವ “ಶಿವ 143′ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಪಕ್ಕಾ ಮಾಸ್ ಅಂಶಗಳೊಂದಿಗೆ ಗಮನ ಸೆಳೆಯುವ ಈ ಟ್ರೇಲರ್‌ನಲ್ಲಿ ನವನಟ ಧೀರೇನ್ ಭರವಸೆ ಮೂಡಿಸಿದ್ದಾರೆ.
ಚಿತ್ರದಲ್ಲಿ ಒಂದು ಇಂಟೆನ್ಸ್ ಲವ್‌ಸ್ಟೋರಿ ಇರುವುದು ಎದ್ದು ಕಾಣುತ್ತದೆ. ಇಡೀ ಸಿನಿಮಾ ಲವ್‌ಸ್ಟೋರಿಯ ಸುತ್ತ ನಡೆಯುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಅಂಶಗಳೊಂದಿಗೆ “ಶಿವ 143′ ಮೂಡಿಬಂದಂತಿದೆ. ಈ ಮೂಲಕ ಸದ್ಯ ಗೆಲುವಿನ ಓಟದಲ್ಲಿರುವ ಸ್ಯಾಂಡಲ್‌ವುಡ್‌ಗೆ ಈ ಚಿತ್ರವೂ ಮತ್ತೂಂದು ಗೆಲುವು ತಂದುಕೊಡುವ ನಿರೀಕ್ಷೆ ಇದೆ. ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದು, ಬೋಲ್ಡ್ ಆಗಿ ಕಾಣಿಸಿಕೊಂಡಿರೋದು ಟ್ರೇಲರ್‌ನಲ್ಲಿ ಕಾಣುತ್ತದೆ.
ಇನ್ನು, ನಾಯಕ ಧೀರೇನ್ ಕೂಡಾ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ಅವರು, “ಲಾಕ್ ಡೌನ್‌ಗೂ ಮುಂಚೆ ಪ್ರಾರಂಭವಾದ ಚಿತ್ರ ಇದು. ಎಲ್ಲಾ ಅಡೆತಡೆಗಳನ್ನು ಮೀರಿ, ನಿಯಮಗಳನ್ನು ಪಾಲಿಸಿ, ನೋಡಿಕೊಂಡು ಅಂತಿಮವಾಗಿ ಇಂದು ರಿಲೀಸ್‌ಗೆ ರೆಡಿಯಾಗಿದ್ದೇವೆ. ಈ ಚಿತ್ರದಲ್ಲಿ ಫಿಸಿಕಲ್ ನನ್ನ ಲುಕ್ ಬೇರೆ ತರಹ ಇದೆ. ಕೂದಲಿಂದ ಹಿಡಿದು ದೇಹ ಬೆಳೆಸುವುದು, ಕರಗಿಸುವುದರವರೆಗೂ ತುಂಬಾ ತಯಾರಿ ನಡೆಸಿದ್ದೇವೆ. ಆ್ಯಕ್ಷನ್, ಡಾನ್ಸ್ ಗಾಗಿ ನನ್ನ ದೇಹವನ್ನು ಫಿಟ್ ಆಗಿ ಇಡಬೇಕಿತ್ತು, ಆ ಕೆಲಸ ಮಾಡಿದ್ದೇನೆ. ಇನ್ನು ಮೊದಲ ಚಿತ್ರ ಅಂದಾಗ ವಿಭಿನ್ನವಾಗಿ ಮಾಡುವ ಆಸೆ ನನಗಿತ್ತು. ಅದೇ ಸಮಯಕ್ಕೆ ಚಿತ್ರದ ಆಫರ್ ಬಂದಾಗ ತಂದೆ-ತಾಯಿ, ಶಿವು ಮಾಮ,ಅಪ್ಪು ಮಾಮ, ರಾಘು ಮಾಮ ಎಲ್ಲರ ಬಳಿ ಅಭಿಪ್ರಾಯಗಳನ್ನು ಪಡೆದೆ. ಎಲ್ಲರೂ “ನಿನಗೆ ಇಷ್ಟವಾದರೆ, ನಿನಗೆ ಪಾತ್ರ ಕಾಡಿದರೆ ಮಾತ್ರ ಮಾಡು’ ಅಂದರು. ನನಗೆ ಈ ಪಾತ್ರ ತುಂಬಾ ಸವಾಲಿನ ಹಾಗೂ ಕಾಡುವ ಪಾತ್ರ ಪಾತ್ರ ಅನಿಸಿತು. ಆದ್ದರಿಂದ ಈ ಚಿತ್ರ ಮಾಡಲೇಬೇಕು ಎಂದು ನಿರ್ಧರಿಸಿದೆ. ಹಾಗೇ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿ ಎರಡು ಇದೆ. ಅದನ್ನು ನಿಭಾಯಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದೇನೆ’ ಎನ್ನುತ್ತಾರೆ.
ಈ ಚಿತ್ರವನ್ನು ಅನಿಲ್ ನಿರ್ದೇಶನ ಮಾಡಿದ್ದು, ಜಯಣ್ಣ ಕಂಬೈನ್ಸ್‌ನಡಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಿಸಿದ್ದಾರೆ. ಚಿತ್ರ ಆ.26ರಂದು ತೆರೆಕಾಣುತ್ತಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.