Shiva Rajkumar: ಇದ್ದಹಾಗೆ ಇರುತ್ತೇನೆ, ಜನರಿಗೆ ಮೋಸ ಮಾಡಲ್ಲ.. ಭಾವುಕರಾದ ಶಿವಣ್ಣ ದಂಪತಿ
Team Udayavani, Nov 11, 2024, 12:51 PM IST
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ ʼಭೈರತಿ ರಣಗಲ್ʼ (Bhairati Rangal) ರಿಲೀಸ್‌ಗೆ ರೆಡಿಯಾಗಿದೆ. ಇದೇ ನ.15 ರಂದು ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.
ಶಿವರಾಜ್ ಕುಮಾರ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಾನಾ ವಾಹಿನಿ ಹಾಗೂ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ.
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್ ಗೆ (Anushree YouTube Channel) ಅವರು ಸಂದರ್ಶನ ನೀಡಿದ್ದು, ಅವರೊಂದಿಗೆ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಭಾಗಿಯಾಗಿದ್ದಾರೆ.
ಎಲ್ಲಾ ಜನುಮದಲ್ಲಿಯೂ ನೀವೇ ನಮ್ಮ ಅಣ್ಣನಾಗಿ ಎಂದು ಬಯಸುವ ಶಕ್ತಿಧಾಮದ ಮನಸುಗಳು. ತಂದೆಯಾಗಿ ತಾಯಿಯಾಗಿ ಈ ಹೆಣ್ಣುಮಕ್ಕಳ ಬದುಕಿಗೆ ಮನೆಯಾಗಿದ್ದಾರೆ ಈ ಜೋಡಿ ಹೃದಯಗಳು ಇವರಿಗೆ ಈ ಭೈರತಿ ರಣಗಲ್ ಸದಾ ಕಾವಲಿಗ, ರಕ್ಷಕ ಎಂದು ಅನುಶ್ರೀ ಈ ಸಂದರ್ಶನದ ಪ್ರೋಮೊವನ್ನು ಹಂಚಿಕೊಂಡಿದ್ದಾರೆ.
ಈ ಪ್ರೋಮೊದಲ್ಲಿ ಶಿವಣ್ಣ ಹಲವು ವಿಚಾರಗಳನ್ನು ಮಾತನಾಡಿರುವುದನ್ನು ತೋರಿಸಲಾಗಿದೆ. ಶಕ್ತಿಧಾಮದ ಮಕ್ಕಳು ಈ ಸಂದರ್ಶನದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಶಕ್ತಿಧಾಮದ ಮಕ್ಕಳು ಶಿವರಾಜ್ ಕುಮಾರ್ ಅವರಿಗಾಗಿ ʼಅಣ್ಣ ನಿಮ್ಮ ನಗುವಿನಲ್ಲೊಂದು ಪುಟ್ಟ ಮಗುವಿದೆ.. ಎಂದು ಹಾಡಿದ್ದಾರೆ ಇದಕ್ಕೆ ಶಿವಣ್ಣ ಮಕ್ಕಳಿಗೆ ಕೈತುತ್ತು ನೀಡಿರುವುದು ಪ್ರೋಮೊದಲ್ಲಿ ತೋರಿಸಲಾಗಿದೆ.
View this post on Instagram
ಶಕ್ತಿಧಾಮಕ್ಕೆ ಶಕ್ತಿ ತುಂಬಿದ್ದು ನಮ್ಮ ಅಮ್ಮ ಎಂದು ಶಿವಣ್ಣ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.
ಶಿವಣ್ಣ ನಿಮಗೆ ರೊಮ್ಯಾಂಟಿಕ್ ಇರೋದು ಇಷ್ಟನಾ, ಮಾಸ್ ಆಗಿ ಇರೋದು ಇಷ್ಟನಾ ಎಂದು ಗೀತಾ ಅವರ ಬಳಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಗೀತಾ ಅವರು ಮಾಸ್ ಆಗಿ ಕಾಣೋದು ಇಷ್ಟವೆಂದಿದ್ದಾರೆ.
ಶಕ್ತಿಧಾಮದ ಮಕ್ಕಳು ಸ್ಕೂಲ್ ಅಲ್ಲಿ ಎಷ್ಟು ಸಲಿ ಒದೆ ತಿಂದಿದ್ದೀರಿ ಎಂದು ಶಿವಣ್ಣನ ಬಳಿ ಕೇಳಿದ್ದಾರೆ. ಅದಕ್ಕೆ ಶಿವಣ್ಣ ಸುಮಾರು ಸಲಿ ತಿಂದಿದ್ದೀನಿ ಎಷ್ಟು ಸಲಿ ಅಂಥ ನೆನಪಿಲ್ಲ ಎಂದು ಶಾಲಾ ದಿನಗಳ ವಿದ್ಯಾರ್ಥಿ ಜೀವನದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಯಾವುದೋ ಒಬ್ಬ ಮನುಷ್ಯ ಒಂದು ಉದ್ದೇಶಗೋಸ್ಕರ ಬದುಕಬೇಕು ಅಥವಾ ಉದ್ದೇಶಗೋಸ್ಕರ ಹೋರಾಡಬೇಕು ಎಂದಿದ್ದಾರೆ. ನಿಮ್ಮ ಮನೆ ಒಲೆ ಉರಿಯುತ್ತದೆ. ನಿಮ್ಮ ಮನೆ ಒಲೆ ಉರಿಯಲು ಇನ್ನೊಬ್ಬರ ಮನೆ ಒಲೆ ಆರಿಸೋದಾ ಎಂದು ಶಿವಣ್ಣ ಪ್ರಶ್ನಿಸಿದ್ದಾರೆ.
ಎಲ್ಲರಿಗೂ ಒಬ್ಬರೇ ತಾಯಿಯಾದ್ರೆ ನಮಗೆ 3-4 ಜನ ತಾಯಿಂದಿರಿದ್ರು. ನಾನು ಯಾವಾಗಲೂ ಇರುವಾಗೆಯೇ ಇರ್ತೇನೆ. ನಾನು ಯಾವತ್ತು ನನ್ನ ಜನರಿಗೆ ಮೋಸ ಮಾಡುವುದಿಲ್ಲವೆಂದು ಶಿವಣ್ಣ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ದಂಪತಿಗಳು ಭಾವುಕರಾಗಿರುವ ಸನ್ನಿವೇಶವನ್ನು ತೋರಿಸಲಾಗಿದೆ. ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.