Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Team Udayavani, Dec 19, 2024, 9:19 AM IST
ನಟ ಶಿವರಾಜಕುಮಾರ್ ಅವರು ಅನಾರೋಗ್ಯದ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಬುಧವಾರ ಸಂಜೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಅವರೊಂದಿಗೆ ಪತ್ನಿ ಗೀತಾ, ಮಗಳು ನಿವೇದಿತಾ ಅವರು ತೆರಳಿದ್ದಾರೆ.
ಅದಕ್ಕೂ ಮೊದಲು ಚಿತ್ರರಂಗದ ಗಣ್ಯರು ಶಿವಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಶೀಘ್ರ ಗುಣ ಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ. ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಬಿ.ಸಿ. ಪಾಟೀಲ್, ನಟ ವಿನೋದ್ ರಾಜಕುಮಾರ್, ಶಿವಣ್ಣ ಅವರಿಗೆ ಗುಣಮುಖರಾಗಿ ಬನ್ನಿ ಎಂದು ಶುಭ ಹಾರೈಸಿದ್ದಾರೆ.
ಕಿಚ್ಚನ ಭಾವುಕ ಅಪ್ಪುಗೆ
ಶಿವಣ್ಣ ಹಾಗೂ ಸುದೀಪ್ ಅವರದ್ದು ಮೊದಲಿನಿಂದಲೂ ಉತ್ತಮ ಬಾಂಧವ್ಯ. ಶಿವಣ್ಣ ಅವರ ಮನೆಗೆ ಬಂದ ಕೂಡಲೇ ಅವರನ್ನು ಕಂಡು ಸುದೀಪ್ ಬಿಗಿಯಾಗಿ ತಬ್ಬಿಕೊಂಡರು. ಇದೊಂದು ಭಾವುಕ ಅಪ್ಪುಗೆಯಾಗಿತ್ತು. ಶಿವಣ್ಣ ಬೇಗ ಚೇತರಿಸಿಕೊಂಡು ಬರಲಿ ಎಂದು ಶುಭಹಾರೈಸಿ ಅವರಿಗೆ ಧೈರ್ಯ ತುಂಬಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿ, ಇವರದ್ದು ಅಣ್ಣ-ತಮ್ಮನ ಸಂಬಂಧ ಎಂದು ಜಾಲತಾಣಗಳಲ್ಲಿ ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ.
ಅಮೆರಿಕದಲ್ಲಿ ಎಂಸಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಆಗಲಿದೆ. ಸದ್ಯ ಎಲ್ಲ ಪ್ಯಾರಾಮೀಟರ್ಸ್ ಚೆನ್ನಾಗಿದೆ. ಬಂಧುಗಳನ್ನೆಲ್ಲ ಭೇಟಿಯಾದಾಗ ಸ್ವಲ್ಪ ಭಾವುಕನಾದೆ. ವಿಶ್ವಾಸದಲ್ಲಿದ್ದೇನೆ, ಚೇತರಿಸಿಕೊಂಡು ಜ. 26ಕ್ಕೆ ಮರಳಿ ಬರುತ್ತೇನೆ ಎಂದರು ನಟ ಶಿವರಾಜಕುಮಾರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.