ಆಕಾಶ್ ಕಣ್ಣಲ್ಲಿ “ಶಿವಾಜಿ ಸುರತ್ಕಲ್-2′ ಕನಸು
Team Udayavani, Mar 5, 2020, 7:02 AM IST
ಇದೇ ಫೆ.21ರಂದು ತೆರೆಗೆ ಬಂದಿದ್ದ ನಟ ರಮೇಶ್ ಅರವಿಂದ್ ಅಭಿನಯದ “ಶಿವಾಜಿ ಸುರತ್ಕಲ್’ ಚಿತ್ರ ಈಗ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಆರಂಭದಲ್ಲಿ ಸುಮಾರು 87 ಕೇಂದ್ರಗಳಲ್ಲಿ ತೆರೆಕಂಡಿದ್ದ “ಶಿವಾಜಿ ಸುರತ್ಕಲ್’ ಮೂರನೇ ವಾರದ ಹೊತ್ತಿಗೆ ಸುಮಾರು 130 ಕೇಂದ್ರಗಳಿಗೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಪ್ರದರ್ಶನ ಕಾಣುತ್ತಿದೆ. ಈ ಬೆಳವಣಿಗೆ ಸಹಜವಾಗಿಯೇ ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ.
“ಶಿವಾಜಿ ಸುರತ್ಕಲ್’ ಯಶಸ್ವಿ ಪ್ರದರ್ಶನದ ಖುಷಿಯನ್ನು “ಉದಯವಾಣಿ’ ಜೊತೆಗೆ ಹಂಚಿಕೊಂಡ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ, “ಸುಮಾರು ಎರಡು ವರ್ಷಗಳ ಕಾಲ ಸಾಕಷ್ಟು ಶ್ರಮಪಟ್ಟು “ಶಿವಾಜಿ ಸುರತ್ಕಲ್’ ಸಿನಿಮಾವನ್ನು ಮಾಡಿದ್ದೇವು. ಬಿಡುಗಡೆಯ ನಂತರ ಸಿನಿಮಾಕ್ಕೆ ಆಡಿಯನ್ಸ್ ಕಡೆಯಿಂದ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ನಮ್ಮ ಪ್ರರಿಶ್ರಮಕ್ಕೆ ಫಲ ಸಿಗುತ್ತಿದೆ ಎಂದು ಖುಷಿಯಾಗುತ್ತದೆ.
ಇನ್ನು “ಶಿವಾಜಿ ಸುರತ್ಕಲ್’ ರಿಲೀಸ್ ಆದ ಮೊದಲ ವಾರದಿಂದ ಎರಡನೇ ವಾರಕ್ಕೆ ಮತ್ತು ಎರಡನೇ ವಾರದಿಂದ ಈಗ ಮೂರನೇ ವಾರಕ್ಕೆ ಥಿಯೇಟರ್‌ಗಳ ಸಂಖ್ಯೆಯಲ್ಲಿ ಮತ್ತು ಕಲೆಕ್ಷನ್‌ನಲ್ಲಿ ಏರಿಕೆಯಾಗುತ್ತಿದೆ. ಸಿಂಗಲ್ ಸ್ಕ್ರೀನ್, ಮಲ್ಟಿಫ್ಲೆಕ್ಸ್ ಎಲ್ಲ ಕಡೆಯೂ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ’ ಎಂಬ ಮಾಹಿತಿ ನೀಡುತ್ತಾರೆ. ಇನ್ನು ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರದ ಪಾತ್ರಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರಂತೆ.
ಈ ಬಗ್ಗೆ ಮಾತನಾಡುವ ಆಕಾಶ್ ಶ್ರೀವತ್ಸ, “ಸಿನಿಮಾ ನೋಡಿದ ಆಡಿಯನ್ಸ್ ರಮೇಶ್ ಅರವಿಂದ್ ಅವರನ್ನು ಇಲ್ಲಿಯವರೆಗೆ ಈ ಥರದ ಪಾತ್ರಗಳಲ್ಲಿ ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ರಮೇಶ್ ಅರವಿಂದ್ ಸಿನಿಮಾ ಕೆರಿಯರ್‌ನ 101ನೇ ಸಿನಿಮಾ ಇದಾಗಿದ್ದು, ಮೈಲಿಗಲ್ಲಾಗುತ್ತಿದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳನ್ನು ಕೂಡ ಜನ ಗುರುತಿಸಿ ಮಾತನಾಡುತ್ತಿದ್ದಾರೆ’ ಎನ್ನುತ್ತಾರೆ.
“ಶಿವಾಜಿ ಸುರತ್ಕಲ್’ ಸದ್ಯ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವಂತೆಯೇ, ಚಿತ್ರವನ್ನು ನೋಡಿದ ಪ್ರೇಕ್ಷಕರು “ಶಿವಾಜಿ ಸುರತ್ಕಲ್-2′ ಚಿತ್ರ ಯಾವಾಗ ಅಂಥ ಕೇಳುತ್ತಿದ್ದಾರಂತೆ. “”ಶಿವಾಜಿ ಸುರತ್ಕಲ್’ ಸಿನಿಮಾ ನೋಡಿದವರು, ಈ ಸಿನಿಮಾವನ್ನು ಇನ್ನೂ ಮುಂದುವರೆಸಬಹುದು. “ಶಿವಾಜಿ ಸುರತ್ಕಲ್-2′ ಸಿನಿಮಾ ಏನಾದ್ರೂ ಮಾಡುವ ಪ್ಲಾನ್ ಇದೆಯಾ? ಇದ್ದರೆ ಯಾವಾಗ ಮಾಡ್ತೀರಾ? ಇದೇ ಟೀಮ್ ಇರುತ್ತಾ..? ಅಂಥೆಲ್ಲ ಕೇಳುತ್ತಿದ್ದಾರೆ.
ನಿಜ ಹೇಳಬೇಕು ಅಂದ್ರೆ, “ಶಿವಾಜಿ ಸುರತ್ಕಲ್’ ಸಿನಿಮಾ ಮಾಡುವಾಗಲೇ ಇದನ್ನು ಮತ್ತೂಂದು ಭಾಗದಲ್ಲಿ ಮುಂದುವರೆಸಿಕೊಂಡು ಹೋಗ್ಬೇಕು ಅಂಥ ಯೋಚನೆಯಿತ್ತು. ಇದೇ ಟೀಮ್ ಜೊತೆಯಲ್ಲಿ ಇಟ್ಟುಕೊಂಡು, ಇನ್ನೂ ದೊಡ್ಡ ಕ್ಯಾನ್ವಾಸ್ ಮಾಡಿಕೊಂಡು “ಶಿವಾಜಿ ಸುರತ್ಕಲ್’ ಮುಂದುವರೆಸಬೇಕು ಎಂಬ ಕನಸಂತೂ ಇದೆ. ಸದ್ಯ ಈಗಾಗಲೇ “ಶಿವಾಜಿ ಸುರತ್ಕಲ್’ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದರಿಂದ, ಸದ್ಯಕ್ಕೆ ನಮ್ಮ ಗಮನ ಈ ಸಿನಿಮಾವನ್ನು ಇನ್ನಷ್ಟು ಸಕ್ಸಸ್ ಮಾಡುವುದರ ಕಡೆಗಿದೆ.
ಮುಂದೆ ನಾಯಕ ನಟ ರಮೇಶ್ ಅರವಿಂದ್, ನಿರ್ಮಾಪಕರು, ರೈಟರ್ ಹೀಗೆ ನಮ್ಮ ಟೀಮ್ ಜೊತೆ ಚರ್ಚಿಸಿ ಈ ಬಗ್ಗೆ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ಅಂದಹಾಗೆ, ಸದ್ಯ ವಿದೇಶಗಳಲ್ಲೂ ಬಿಡುಗಡೆಯಾಗಿರುವ “ಶಿವಾಜಿ ಸುರತ್ಕಲ್’ ಆಸ್ಟ್ರೇಲಿಯಾದಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆಯಂತೆ. ಇದೇ ಮಾರ್ಚ್ 7-8ಕ್ಕೆ ಲಂಡನ್, ಕೆನಡಾ, ಯು.ಎಸ್, ಸ್ವೀಡನ್ ಸುಮಾರು 25-30 ಕೇಂದ್ರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ ಎನ್ನುವ ಮಾಹಿತಿ ನೀಡಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.