ಶಿವಮಣಿ ಈಗ ಜಾಫರ್ ಪನಾಹಿ
Team Udayavani, Jan 27, 2018, 10:24 AM IST
ಇರಾನ್‌ನ ಜನಪ್ರಿಯ ನಿರ್ದೇಶಕ ಜಾಫರ್ ಪನಾಹಿ ಬಗ್ಗೆ ಗೊತ್ತಿರಬಹುದು. “ಟ್ಯಾಕ್ಸಿ’, “ಕ್ರಿಮ್ಸನ್ ಗೋಲ್ಡ್’, “ದಿ ಸರ್ಕಲ್’, “ದಿ ವೈಟ್ ಬಲೂನ್’ ಮುಂತಾದ ಅಪರೂಪದ ಮತ್ತು ಕ್ರಾಂತಿಕಾರಕ ಚಿತ್ರಗಳನ್ನು ನಿರ್ದೇಶಿಸಿದವರು ಅವರು. ಅಷ್ಟೇ ಅಲ್ಲ, ತಮ್ಮ ಕ್ರಾಂತಿಕಾರಕ ನಿಲುವುಗಳಿಂದ ಜೈಲು ಪಾಲಾದವರು. ಈಗ್ಯಾಕೆ ಅವರ ಮಾತು ಎಂದರೆ, ಇರಾನ್‌ನ ವ್ಯವಸ್ಥೆಯ ಕುರಿತು ಒಂದು ನಾಟಕ ರೂಪುಗೊಳ್ಳುತ್ತಿದ್ದು, ಆ ನಾಟಕದಲ್ಲಿ ನಟ-ನಿರ್ದೇಶಕ ಶಿವಮಣಿ, ಜಾಫರ್ ಪನಾಹಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, “ಸುಗಂಧದ ಸೀಮೆಯಾಚೆ’ ಎಂಬ ನಾಟಕ ರೂಪುಗೊಳ್ಳುತ್ತಿದ್ದು, ಇದನ್ನು “ಜಟ್ಟ’ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ತಾಲೀಮುಗಳು ಜೋರಾಗಿ ನಡೆಯಲಿದ್ದು, ಫೆಬ್ರವರಿ 10ರಂದು ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ಮೊದಲ ಪ್ರದರ್ಶನ ಕಾಣುತ್ತಿದೆ. ಆ ನಂತರ ಮುಂದಿನ ತಿಂಗಳಲ್ಲೇ ಇನ್ನಷ್ಟು ಬಾರಿ ಈ ನಾಟಕ ಪ್ರದರ್ಶನವಾಗಲಿದೆ. ಗಿರಿರಾಜ್ ಅವರು ಒಂದಿಷ್ಟು ಹೊಸ ಹುಡುಗರನ್ನಿಟ್ಟುಕೊಂಡು ಈ ನಾಟಕವನ್ನು ಮಾಡುತ್ತಿದ್ದಾರೆ.
ಅದೊಂದು ಸಮಕಾಲೀನ ನಾಟಕವಷ್ಟೇ ಅಲ್ಲ, ಅದರಲ್ಲಿ ಜಾಫರ್ ಪನಾಹಿ ಸಹ ಒಂದು ಪಾತ್ರವಾಗಿ ಬರುತ್ತಾರಂತೆ. ಆ ಪಾತ್ರವನ್ನು ಯಾರಿಂದ ಮಾಡಿಸಬಹುದು ಎಂದು ಯೋಚಿಸುತ್ತಿದ್ದಾಗ, ಹೊಳೆದಿದ್ದು ಶಿವಮಣಿ. ಇದಕ್ಕೂ ಮುನ್ನ ಗಿರಿ ಹಾಗೂ ಶಿವಮಣಿ ಇಬ್ಬರೂ “ಟೈಗರ್ ಗಲ್ಲಿ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಗಿರಿರಾಜ್ ತಂದೆಯಾಗಿ ಕಾಣಿಸಿಕೊಂಡರೆ, ಶಿವಮಣಿ ಮಗನಾಗಿ ಅಭಿನಯಿಸಿದ್ದರು. ಈಗ ಗಿರಿರಾಜ್ ನಿರ್ದೇಶನ ನಾಟಕವೊಂದರಲ್ಲಿ ಶಿವಮಣಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
“ಈ ನಾಟಕದಲ್ಲಿ ಸಮಕಾಲೀನ ವಿಷಯಗಳ ಕುರಿತಾಗಿ ಹೇಳಲಾಗುತ್ತಿದೆ. ಮತಾಂಧತೆ, ದಬ್ಟಾಳಿಕೆ ಮುಂತಾದ ಹಲವು ವಿಷಯಗಳ ಬಗ್ಗೆ ನಾಟಕವಾಗುತ್ತಿದ್ದು, ಇಲ್ಲಿ ಜಾಫರ್ ಪನಾಹಿ ಅವರ ಪಾತ್ರವನ್ನು ಮಾಡುತ್ತಿದ್ದೇನೆ. ಇದೊಂದು ಬೇರೆ ತರಹದ ಸಾಹಸ. 82-86ರವರೆಗೂ ಕೆಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಿದೆ. ಬಹಳ ವರ್ಷಗಳ ನಂತರ ಮತ್ತೆ ರಂಗಭೂಮಿಗೆ ವಾಪಸ್ಸಾಗುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಶಿವಮಣಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.