ಚಿಕಿತ್ಸೆ ಬಳಿಕ ಲಂಡನ್‌ನಿಂದ ಬೆಂಗಳೂರಿಗೆ ಬಂದ ಶಿವಣ್ಣ
ಪ್ರೀತಿಯ ಸ್ವಾಗತ ಕೋರಿದ ಅಭಿಮಾನಿಗಳು
Team Udayavani, Jul 25, 2019, 3:03 AM IST
ತೀವ್ರ ಭುಜದ ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದ್ದ ಶಿವರಾಜಕುಮಾರ್, ಮಂಗಳವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವರಾಜಕುಮಾರ್ ಬರುವ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅವರ ಅಪಾರ ಅಭಿಮಾನಿಗಳು, ಗೆಳೆಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಶೇಷ ಸ್ವಾಗತ ಕೋರಿದ್ದಾರೆ. ಭುಜದ ನೋವು ಇದ್ದ ಕಾರಣ, ಅವರು ಹೆಚ್ಚಿನ ಚಿಕಿತ್ಸೆ ಪಡೆಯಲು ಲಂಡನ್‌ಗೆ ಹೋಗಿದ್ದರು.
ಜು.10 ರಂದು ವೈದ್ಯ ಆಂಡ್ರೂ ವ್ಯಾಲೇಸ್ ಅವರು ಶಿವಣ್ಣ ಅವರಿಗೆ ಯಶಸ್ವಿಯಾಗಿ ಸರ್ಜರಿ ನಡೆಸಿದ್ದರು. ಸರ್ಜರಿ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ವೈದರು ಸ್ಪಷ್ಟಪಡಿಸಿದ್ದರು. ಸ್ವಲ್ಪ ದಿನಗಳ ಕಾಲ ಅಲ್ಲೇ ವಿಶ್ರಾಂತಿ ಪಡೆದ ಶಿವರಾಜಕುಮಾರ್, ಮಂಗಳವಾರ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಅವರ ಆಪ್ತ ಗೆಳೆಯರಾದ ನಿರ್ದೇಶಕ ರಘುರಾಮ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸೇರಿದಂತೆ ಅಭಿಮಾನಿಗಳು, ಹಿತೈಷಿಗಳು ಹಾಜರಿದ್ದು, ಸ್ವಾಗತಿಸಿದ್ದಾರೆ.
ಇನ್ನು, ಲಂಡನ್‌ನಲ್ಲಿ ಯಶಸ್ವಿ ಚಿಕಿತ್ಸೆ ಮಾಡಿ, ಪ್ರೀತಿಯ ಕಾಳಜಿ ತೋರಿದ ವೈದ್ಯ ಆಂಡ್ರೂ ವ್ಯಾಲೇಸ್ ಅವರಿಗೆ ಶಿವರಾಜಕುಮಾರ್ ಅವರು ತಮ್ಮ ಫೇಸ್‌ಬುಕ್ ಹಾಗು ಟ್ವಿಟ್ಟರ್‌ನಲ್ಲಿ ಧನ್ಯವಾದ ತಿಳಿಸಿ, “ಆಂಡ್ರೂ ವ್ಯಾಲೇಸ್ ಅವರು ಸದಾ ನಗುತ್ತಾ ಮತ್ತು ಪಾಸಿಟಿವ್ ಆಗಿಯೇ ಇರುತ್ತಾರೆ’ ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಶಿವರಾಜಕುಮಾರ್ ಅವರು ಸದ್ಯ ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕಿದೆ.
ನಂತರದ ದಿನಗಳಲ್ಲಿ ಅವರು ಮಾತಿನ ಭಾಗದ ಚಿತ್ರೀಕರಣದಲ್ಲಿ ತೊಡಗಿದರೂ, ಡ್ಯಾನ್ಸ್ ಹಾಗು ಫೈಟ್ ದೃಶ್ಯಗಳಲ್ಲಿ ತಮ್ಮ ಭುಜದ ನೋವು ಕಡಿಮೆಯಾದ ಬಳಿಕ ಆ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಶಿವರಾಜಕುಮಾರ್ ಈಗ ದ್ವಾರಕೀಶ್ ಬ್ಯಾನರ್‌ನಲ್ಲಿ “ಆಯುಷ್ಮಾನ್‌ಭವ’ ಹಾಗು ಪ್ರಮೋದ್ ಚಕ್ರವರ್ತಿ ನಿರ್ದೇಶನದ “ದ್ರೋಣ’ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಈ ಎರಡು ಚಿತ್ರಗಳ ಚಿತ್ರೀಕರಣ ಮುಗಿಯುವ ಹಂತದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.