ಚಿರಂಜೀವಿ “ಸೈರಾ’ಗೆ ಶಿವಣ್ಣ ಸಾಥ್
ಮೊದಲು ನಾವು ಭಾರತೀಯರು ....
Team Udayavani, Oct 1, 2019, 3:02 AM IST
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ “ಸೈರಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ತೆಲುಗು ಜೊತೆಗೆ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಹಾಗಾಗಿ, ಚಿತ್ರತಂಡ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು.
ಚಿರಂಜೀವಿ, ತಮನ್ನಾ, ರಾಮ್‌ಚರಣ್ ತೇಜಾ ಆಗಮಿಸಿದ್ದ ಈ ಕಾರ್ಯಕ್ರಮಕ್ಕೆ ನಟ ಶಿವರಾಜಕುಮಾರ್ ಸಾಥ್ ಕೊಟ್ಟರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜಕುಮಾರ್, “ಸೈರಾ ಸಿನಿಮಾದ ಕ್ರೇಜ್, ಜೋಶ್ ಎಷ್ಟಿದೆ ಎಂಬುದು ಇಲ್ಲಿಗೆ ಬಂದಾಗ ಗೊತ್ತಾಯಿತು. ನಾನು ಈ ಸಿನಿಮಾವನ್ನು ಫಸ್ಟ್ ಡೇ ನೋಡ್ತೀನಿ. ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲೂ ನೋಡಬಹುದು ನೀವು.
ಇವತ್ತು ತೆಲುಗು ಬೇರೆ, ತಮಿಳು ಬೇರೆಯಲ್ಲ. ಮೊದಲು ನಾವು ಭಾರತೀಯರು, ಆ ನಂತರ ಮಾತೃಭಾಷೆ’ ಎಂದ ಶಿವಣ್ಣ, ಚಿರಂಜೀವಿ ಹಾಗೂ ತಮ್ಮ ಕುಟುಂಬದ ನಡುವಿನ ಒಡನಾಟವನ್ನು ಮೆಲುಕು ಹಾಕಿದರು. “ಅಪ್ಪಾಜಿ ಯಾವತ್ತೂ ಚಿರಂಜೀವಿ ಬಗ್ಗೆ, “ನನ್ನ ಮಗ ಇದ್ದಂತೆ’ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಹಾಗಾಗಿ, ಅವರು ನನಗೆ ಅಣ್ಣನ ಸಮಾನ. ಅವರು ನನ್ನನ್ನು ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯಬೇಕಿಲ್ಲ,
ಆರ್ಡರ್ ಮಾಡಿದರೆ ಸಾಕು’ ಎನ್ನುತ್ತಾ ಚಿತ್ರ ಹಾಗೂ ಚಿರಂಜೀವಿ ಕುಟುಂಬಕ್ಕೆ ತಮ್ಮ ಬೆಂಬಲವಿದೆ ಎಂದರು. “ಸೈರಾ’ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡು ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ಚಿತ್ರವನ್ನು ರಾಮ್‌ಚರಣ್ ಸುಮಾರು 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.