ತೆರೆಗೆ ಬಂತು ಶಿವಣ್ಣನ 125ನೇ ಚಿತ್ರ ‘ವೇದ’


Team Udayavani, Dec 23, 2022, 8:56 AM IST

ತೆರೆಗೆ ಬಂತು ಶಿವಣ್ಣನ 125ನೇ ಚಿತ್ರ ‘ವೇದ’

ಶಿವರಾಜ್‌ಕುಮಾರ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 125ನೇ ಸಿನಿಮಾ “ವೇದ’ ಇಂದು ಅದ್ಧೂರಿ ಯಾಗಿ ಬಿಡುಗಡೆಯಾಗು ತ್ತಿದೆ. ಇನ್ನೊಂದು ವಿಶೇಷವೆಂದರೆ, ಶಿವರಾಜ್‌ ಕುಮಾರ್‌ ಅಭಿನಯದ ಈ ಸಿನಿಮಾವನ್ನು ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ “ಗೀತಾ ಪಿಕ್ಚರ್’ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ನಿರ್ದೇಶಕ ಎ. ಹರ್ಷ “ವೇದ’ ಸಿನಿಮಾದಲ್ಲಿ ನಾಲ್ಕನೇ ಬಾರಿಗೆ ಸೆಂಚುರಿ ಸ್ಟಾರ್‌ಗೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ವೇದ’ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಶಿವರಾಜ್‌ ಕುಮಾರ್‌ ಒಂದಷ್ಟು ವಿಷಯ ಗಳನ್ನು ಹಂಚಿಕೊಂಡಿದ್ದಾರೆ.

125ನೇ ಸಿನಿಮಾದ ಬಿಡುಗಡೆ ಸಮಯದಲ್ಲಿ ಹಿಂತಿರುಗಿ ನೋಡಿದ್ರೆ ಏನನಿಸುತ್ತದೆ?

“ಆನಂದ್‌’ ಸಿನಿಮಾದಿಂದ “ವೇದ’ ಸಿನಿಮಾದವರೆಗೆ ಸುಮಾರು 36 ವರ್ಷವಾಯ್ತು. ನನ್ನ ಪ್ರಕಾರ ಇದು “ಆನಂದ ವೇದ’ ಪ್ರಯಾಣ. ಒಮ್ಮೆ ರಿವೈಂಡ್‌ ಮಾಡಿ ನೋಡಿದ್ರೆ, ಇಷ್ಟೆಲ್ಲ ಮಾಡಿದ್ದೀವಾ? ಅಂಥ ಅನಿಸುತ್ತದೆ. ಆದರೆ, ಇದೆಲ್ಲವೂ ನನ್ನೊಬ್ಬನಿಂದ ಆದ ಕೆಲಸವಲ್ಲ. ಇದರ ಹಿಂದೆ ಅದೆಷ್ಟೋ ಜನ ಇದ್ದಾರೆ. ಅನೇಕ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮದವರು, ಅಭಿಮಾನಿಗಳು, ಫ್ಯಾಮಿಲಿಯವರು ಹೀಗೆ ಪ್ರತಿಯೊಬ್ಬರೂ ಪ್ರತಿ ಹಂತದಲ್ಲೂ ನನ್ನನ್ನು ತಿದ್ದಿ, ಇಂದು ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿ.

ಹೋಂ ಬ್ಯಾನರ್‌ ನಲ್ಲಿ 125ನೇ ಸಿನಿಮಾ ಮಾಡಬೇಕೆಂಬ ಯೋಚನೆ ಬಂದಿದ್ದು ಯಾವಾಗ?

ನಿಜ ಹೇಳಬೇಕು ಅಂದ್ರೆ, ನನ್ನ 125ನೇ ಸಿನಿಮಾವನ್ನು ಬೇರೆ ಯಾರೋ ಮಾಡಬೇಕಿತ್ತು. ಆ ಬಗ್ಗೆ ಮಾತುಕಥೆ ಕೂಡ ನಡೆದಿತ್ತು. ಆದರೆ ಅಷ್ಟರಲ್ಲಿ ಕೋವಿಡ್‌ ಬಂದಿದ್ದರಿಂದ, ಮಾಡಬೇಕಾದ ಕೆಲವು ಸಿನಿಮಾಗಳಲ್ಲಿ ಬದಲಾವಣೆಗಳಾದವು. ಕೋವಿಡ್‌ ಟೈಮಲ್ಲಿ ನಾವೇ ಏನಾದ್ರೂ ಮಾಡೋಣ ಅಂಥ ಯೋಚನೆ ಮಾಡುತ್ತಿದ್ದಾಗ “ವೇದ’ ಸಿನಿಮಾ ತೆಗೆದುಕೊಂಡೆವು. 125ನೇ ಸಿನಿಮಾ ನಾವೇ ಮಾಡ್ತೀವಿ ಅಂದಾಗ ಆ ನಿರ್ಮಾಪಕರು ಕೂಡ ಖುಷಿಯಿಂದ ಒಪ್ಪಿಕೊಂಡರು.

ನಿಮ್ಮ ಪ್ರಕಾರ “ವೇದ’ ಅಂದ್ರೆ ಏನಂಥ ಹೇಳಬಹುದು?

ನನ್ನ ಪ್ರಕಾರ, “ವೇದ’ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗುವ ಸಿನಿಮಾವಲ್ಲ. ಇದೊಂದು ಮಿಕ್ಸ್‌ ಎಮೋಶನ್ಸ್‌ ಇರುವಂಥ ಸಿನಿಮಾ. ಇಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಫ್ಯಾಮಿಲಿ, ಸೆಂಟಿಮೆಂಟ್‌, ಆ್ಯಕ್ಷನ್‌ ಎಲ್ಲವೂ ಇದೆ. ಒಬ್ಬ ಮನುಷ್ಯನ ಒಳಗಿರುವ ಎಲ್ಲ ಭಾವನೆಗಳೂ ಇಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಎಂಟರ್‌ಟೈನ್ಮೆಂಟ್‌ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮನೆಯ, ನಮ್ಮ ಊರಿನ ಹೆಣ್ಣು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ನಡೆಸಿಕೊಳ್ಳಬೇಕು ಎಂಬ ಮೆಸೇಜ್‌ ಇದೆ.

“ವೇದ’ ಸಿನಿಮಾದಲ್ಲಿ ನಿಮ್ಮ ಪಾತ್ರ, ತಯಾರಿ?

“ವೇದ’ ಒಂದು ಗ್ರಾಮೀಣ ಹಿನ್ನೆಲೆಯಲ್ಲಿ, ಜನಪದದ ಸೊಗಡಿನಲ್ಲಿ ಸಾಗುವ ಸಿನಿಮಾ. ಹಾಗಂತ ಇದು ಯಾವುದೇ ನೈಜ ಘಟನೆಯ ಸಿನಿಮಾವಲ್ಲ. 1960 ಮತ್ತು 1980ರ ದಶಕದಲ್ಲಿ ಇಡೀ ಸಿನಿಮಾದ ಕಥೆ ಸಾಗುತ್ತದೆ. ಹಾಗಾಗಿ ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದಿನ ವಾತಾವರಣವನ್ನು ಸ್ಕ್ರೀನ್‌ ಮೇಲೆ ರೀ-ಕ್ರಿಯೆಟ್‌ ಮಾಡಬೇಕಿತ್ತು. ಐವತ್ತು ವರ್ಷದ ಹಿಂದೆ ಹಳ್ಳಿಯ ವ್ಯಕ್ತಿಯೊಬ್ಬ ಹೇಗಿರುತ್ತಿದ್ದನೋ, ಹಾಗೆಯೇ ನನ್ನ ಪಾತ್ರ ಕೂಡ ಇದೆ. ಅಪ್ಪಟ ಹಳೇ ಮೈಸೂರು ಶೈಲಿಯ ಗ್ರಾಮೀಣ ಭಾಷೆ ಸಿನಿಮಾದಲ್ಲಿದೆ. ನಿರ್ದೇಶಕ ಹರ್ಷ ಮತ್ತು ಟೀಮ್‌ ಸಾಕಷ್ಟು ರಿಸರ್ಚ್‌ ಮಾಡಿ ಇಂಥದ್ದೊಂದು ಕ್ಯಾರೆಕ್ಟರ್‌ ಪ್ರಸೆಂಟ್‌ ಮಾಡದೆ.

ಅಮ್ಮನ ಸ್ಥಾನವನ್ನು ಗೀತಾ ತುಂಬಿದ್ದಾಳೆ…

ನನ್ನ ಮೊದಲ ಸಿನಿಮಾವನ್ನು ನಮ್ಮ ಅಮ್ಮ ನಿರ್ಮಾಣ ಮಾಡಿದ್ದರು. ನನ್ನನ್ನು ಒಬ್ಬ ಕಲಾವಿದನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಾನು ಮಾತ್ರವಲ್ಲ, ನನ್ನಂತಹ ನೂರಾರು ಕಲಾವಿದರು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈಗ ನಮ್ಮ ಅಮ್ಮನ ಸ್ಥಾನವನ್ನು ನನ್ನ ಪತ್ನಿ ಗೀತಾ ತುಂಬುತ್ತಿದ್ದಾಳೆ. ನಮ್ಮ ಹೋಂ ಬ್ಯಾನರ್‌ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ಸಿನಿಮಾಗಳನ್ನು ನಿರ್ಮಿಸಬೇಕು ಎಂಬ ಕನಸು ಗೀತಾಗೂ ಇದೆ. “ವೇದ’ ಸಿನಿಮಾ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾನರ್‌ನಿಂದ ಇನ್ನಷ್ಟು ಸಿನಿಮಾಗಳು ಬರುತ್ತಿರುತ್ತವೆ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.