ಶಿವರಾಜ್ ಕೆ.ಆರ್.ಪೇಟೆ ಕಾಮಿಡಿ ಕಮಾಲ್: ‘ಧಮಾಕ’ಗೆ ಮೆಚ್ಚುಗೆ
Team Udayavani, Sep 4, 2022, 3:09 PM IST
ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿರುವ “ಧಮಾಕ’ ಸಿನಿಮಾ ಸೆ.2 ರಂದು ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ.
ಔಟ್ ಅಂಡ್ ಔಟ್ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಶಿವರಾಜ್ ಕೆ.ಆರ್.ಪೇಟೆ, ನಯನಾ, ಸಿದ್ದು ಮೂಲಿಮನಿ ಸೇರಿದಂತೆ ಅನೇಕರು ನಟಿಸಿದ್ದಾರೆ. ರೆಗ್ಯುಲರ್ ಶೈಲಿ ಬಿಟ್ಟು ನಡೆಯುವ ಈ ಸಿನಿಮಾದಲ್ಲಿನ ಸಂಭಾಷಣೆ ಹಾಗೂ ಮ್ಯಾನರೀಸಂ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದ್ದು, ಫ್ಯಾಮಿಲಿ ಅಡಿಯನ್ಸ್ ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ.
ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ನಡೆಯುವ ಕಥೆ ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಸಾಗಿದ್ದು, ಇದು ಸಿನಿಮಾದ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾದ ಬಹುತೇಕ ಭಾಗ ಒಂದು ಕೋಣೆಯೊಳಗೆ ನಡೆದಿದ್ದು, ಇಲ್ಲಿ ಶಿವರಾಜ್ ಕೆ.ಆರ್.ಪೇಟೆ ಮಿಂಚಿದ್ದಾರೆ. ಮನರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂರಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಧಮಾಕ ಸಾಗಿ, ಮೆಚ್ಚುಗೆ ಪಡೆಯುತ್ತಿದೆ.
ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್ ಮುಂತಾದ ಕಲಾಬಳಗ ಚಿತ್ರದಲ್ಲಿದೆ. ಧಮಾಕ ಚಿತ್ರವನ್ನು ಎಸ್ ಆರ್. ಮೀಡಿಯಾ ಪ್ರೊಡಕ್ಷನ್ ಬ್ಯಾನರ್‌ನಡಿ ಸುನೀಲ್.ಎಸ್.ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ನಿರ್ಮಾಣ ಮಾಡಿದ್ದು, ಲಕ್ಷ್ಮೀ ರಮೇಶ್ ಈ ಚಿತ್ರದ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.