ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: ʼಟಗರುʼ2ʼ ಗೆ ರೆಡಿಯಾದ ಶಿವಣ್ಣ? ಪೋಸ್ಟರ್ ವೈರಲ್
Team Udayavani, Jul 12, 2023, 12:42 PM IST
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ರಾತ್ರಿಯಿಂದಲೇ ಅಭಿಮಾನಿಗಳು ಪಟಾಕಿ ಸಿಡಿಸಿ, ತನ್ನ ನೆಚ್ಚಿನ ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಅವರ ಹುಟ್ಟುಹಬ್ಬಕ್ಕೆ ಶ್ರೀನಿ ನಿರ್ದಶನದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಘೋಸ್ಟ್ʼ ಚಿತ್ರದ “ಬಿಗ್ ಡ್ಯಾಡಿʼ ವಿಡಿಯೋವನ್ನು ಬಿಡುಗಡೆ ಆಗಿದೆ. ಈಗಾಗಲೇ ಈ ಹಾಡು ಅಭಿಮಾನಿ ವಲಯದಲ್ಲಿ ಸಂಭ್ರಮದ ಕಿಚ್ಚು ಹೊತ್ತಿಸಿದೆ.
ಇದರೊಂದಿಗೆ ಭಾರತೀಯ ಚಿತ್ರರಂಗದ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ಕಲಾವಿದರು, ನಿರ್ದಶಕರು ಶಿವರಾಜ್ ಕುಮಾರ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಮುಂಬರುವ ಚಿತ್ರ ತಂಡದಿಂದ ಸ್ಪೆಷೆಲ್ ಪೋಸ್ಟ್ ಗಳು ರಿಲೀಸ್ ಆಗಿವೆ.
ಇದರಲ್ಲಿ 2018 ರಲ್ಲಿ ರಿಲೀಸ್ ಆದ ದುನಿಯಾ ಸೂರಿ ಅವರ ಸೂಪರ್ ಹಿಟ್ ʼಟಗರುʼ ಚಿತ್ರದ ಎರಡನೇ ಭಾಗವೆಂದು ಹೇಳಲಾಗುತ್ತಿರುವ ಪೋಸ್ಟರ್ ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಧನಂಜಯ ಅವರಿಗೆ ʼಡಾಲಿʼ ಫೇಮ್ ಕೊಟ್ಟು, ಚರಣ್ ರಾಜ್ ಅವರ ಮ್ಯೂಸಿಕ್ ನಲ್ಲಿ ಶಿವರಾಜ್ ಕುಮಾರ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದರು. ʼಟಗರುʼ ಸಿನಿಮಾಕ್ಕೆ ಆದರದೇ ಆದ ಫ್ಯಾನ್ ಬೇಸ್ ಇದೆ
ಇದೀಗ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಶುಭಾಶಯವನ್ನು ಕೋರುವ ಪೋಸ್ಟರ್ ವೊಂದು ʼಟಗರ್-2ʼ ಸಿನಿಮಾದ ಪೋಸ್ಟರ್ ಎಂದು ಗಾಂಧಿನಗರದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಪೋಸ್ಟರ್ ನಲ್ಲಿ ʼಟಗರುʼ ಹಿಡಿದು ಶಿವಣ್ಣ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೇಲೆ ಜಿ.ಮನೋಹರನ್ ಹಾಗೂ ಲಹರಿ ಫಿಲ್ಮ್ಸ್ ಸಿನಿಮಾವನ್ನು ಅರ್ಪಿಸುತ್ತಿದೆ ಎಂದು ಬರೆಯಲಾಗಿದೆ. “ಈಸ್ ಇಸ್ ಬ್ಯಾಕ್ʼ ಎಂದು ಬರೆಯಲಾಗಿದೆ.
ಈ ಪೋಸ್ಟರ್ ನ್ನು ನಿರ್ಮಾಪಕ ಶ್ರೀಕಾಂತ್ ಕೆಪಿ ಸೇರಿ ಅನೇಕರು ಹಂಚಿಕೊಂಡಿದ್ದಾರೆ. ಆದರೆ ಇದು ʼಟಗರು-2ʼ ಸಿನಿಮಾದ ಪೋಸ್ಟರ್ ವೋ ಅಥವಾ ಬೇರೆ ಸಿನಿಮಾವೋ, ನಿರ್ದೇಶಕರು ಯಾರು ಅನ್ನೋದು ಇದುವರೆಗೆ ರಿವೀಲ್ ಆಗಿಲ್ಲ.
Its celebration day everywhere in karunaadu # man with golden heart 💛 Big boss of all masses nd my inspiration one nd only @NimmaShivanna # Happy birthday 🎂 keep entertaining love uhttps://t.co/Q637hhJwrK pic.twitter.com/x3G3ZEruYZ
— Sreekanth KP (@kp_sreekanth) July 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.