ನನ್ನ ದೃಷ್ಟಿಯೇ ಅವನಿಗೆ ಆಯಿತೇನೋ ಎಂದು ಕಣ್ಣೀರು ಹಾಕಿದ ಶಿವಣ್ಣ
Team Udayavani, Nov 17, 2021, 8:06 AM IST
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಮರಣೋತ್ತರವಾಗಿ “ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ಆಯೋಜಿಸಿದ್ದ “ಪುನೀತ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ತಮ್ಮ ಪ್ರೀತಿಯ ಸಹೋದರ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಶಿವಣ್ಣನಿಗೆ ಕಷ್ಟವಾಗುತ್ತಿದೆ. ಪುನೀತ ನಮನ ಕಾರ್ಯಕ್ರಮದ ಆರಂಭದಿಂದಲೂ ಶಿವರಾಜ್‌ಕುಮಾರ್ ಮಂಕಾಗಿಯೇ ಇದ್ದರು. ಅದರಲ್ಲೂ ತಮ್ಮನ ಕುರಿತಾದ ವಿಡಿಯೋ ಪ್ರದರ್ಶನವಾಗುತ್ತಿದ್ದಂತೆ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತರು. ಆ ನಂತರ ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ಶಿವಣ್ಣನಿಗೆ ದುಃಖ ತಡೆಯಲಾಗಲಿಲ್ಲ.
ಅಳುತ್ತಲೇ ಮಾತು ಆರಂಭಿಸಿದ ಶಿವಣ್ಣ, “ಈ ಸಂದರ್ಭದಲ್ಲಿ ಮಾತನಾಡಲು ತುಂಬಾ ಕಷ್ಟವಾಗುತ್ತದೆ. ನನ್ನ ತಮ್ಮನ ಬಗ್ಗೆ ನಾನೇ ಸ್ವಲ್ಪ ಜಾಸ್ತಿ ಮಾತನಾಡಿ ಬಿಟ್ಟು, ನನ್ನ ದೃಷ್ಟಿಯೇ ಅವನಿಗೆ ಆಯಿತೇನೋ ಎಂದು ಫೀಲ್ ಆಗುತ್ತಿದೆ. ಅವನದು ಹೊಗಲುವಂತಹ ವ್ಯಕ್ತಿತ್ವ. ಚಿಕ್ಕವಯಸ್ಸಲ್ಲೇ ಸಾಕಷ್ಟು ಸಾಧನೆ ಮಾಡಿದ್ದಾನೆ, ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದ. ದೇವರು ಇಷ್ಟು ಬೇಗ ಅವನನ್ನು ಕರೆದುಕೊಂಡು ಬಿಟ್ಟ.
ಅಪ್ಪು ಇದ್ದಿದ್ದರೆ ಇವತ್ತು ನಾನು, ರಾಘು ಅತ್ತಿದ್ದನ್ನು ನೋಡಿ ತುಂಬಾ ಸಂಕಟಪಡುತ್ತಿದ್ದ. ಇವತ್ತು ನಾವು ದುಃಖ ಸಹಿಸಿಕೊಳ್ಳುತ್ತಿದ್ದೇವೆಂದರೆ ಅದಕ್ಕೆ ನೀವು ಅಭಿಮಾನಿಗಳು ಕಾರಣ. ಅಪ್ಪು ನಾವು ಸೇರಿದಾಗ ಹಾಡು ಹಾಡುತ್ತಿದ್ದೆವು. ಅವನಿಗೆ ಒಂದು ಹಿಂದಿ ಹಾಡು ಇಷ್ಟ. ಅದನ್ನು ಅಪ್ಪುವಿಗಾಗಿ ಹಾಡುತ್ತೇನೆ’ ಎಂದ ಶಿವಣ್ಣ, “ಮೇ ಶಾಯದ್ ಥೋ ನಹೀ… ‘ ಹಾಡನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.