ಶಬರಿಮಲೆಗೆ ಶಿವರಾಜಕುಮಾರ್
Team Udayavani, Mar 16, 2017, 3:23 PM IST
ನಟ ಶಿವರಾಜಕುಮಾರ್ ಬುಧವಾರ ಶಬರಿಮಲೆಗೆ ತೆರಳಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಜಕುಮಾರ್ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, ಬುಧವಾರ ಅವರ ನಿವಾಸದಲ್ಲಿ ಇರುಮುಡಿ ಪೂಜೆ ನಡೆಯಿತು.
ಗುರುಸ್ವಾಮಿ ಶಿವರಾಮ್ ಅವರ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ ಶಿವರಾಜಕುಮಾರ್ ಕುಟುಂಬ ವರ್ಗ, ಆಪ್ತರು ಹಾಗೂ ಚಿತ್ರರಂಗದ ಮಂದಿ ಭಾಗವಹಿಸಿದ್ದರು. ಶಿವರಾಜಕುಮಾರ್ ಅವರ ಜೊತೆ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ತರುಣ್ ಶಿವಪ್ಪ, ವಿನಯ್ ರಾಜಕುಮಾರ್, ವಸಿಷ್ಠ, ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಸುಮಾರು 45 ಮಂದಿಯ ತಂಡ ಶಬರಿಮಲೆಗೆ ತೆರಳುತ್ತಿದ್ದು, ಮಾರ್ಚ್ 19ಕ್ಕೆ ವಾಪಾಸ್ ಬರಲಿದ್ದಾರೆ.
“ಪ್ರತಿ ವರ್ಷವೂ ಶಬರಿಮಲೆಗೆ ಹೋಗುತ್ತೀನಿ. ಅಲ್ಲಿಗೆ ಹೋಗುವುದರಲ್ಲಿ ಏನೋ ಒಂದು ನೆಮ್ಮದಿ ಇದೆ. ನಾನು ಕೇವಲ ನನಗಾಗಿ ಏನನ್ನೂ ಬೇಡಿಕೊಳ್ಳುವುದಿಲ್ಲ. ಮಳೆ, ಬೆಳೆ ಚೆನ್ನಾಗಿ ಆಗಿ ಎಲ್ಲರೂ ಸುಖವಾಗಿರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದರು.
ಎರಡು ಹೊಸ ಸಿನಿಮಾಗಳು: ಇನ್ನು, ಶಿವರಾಜಕುಮಾರ್ ಅವರು ಎರಡು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಒಂದು ಸಿನಿಮಾವನ್ನು “ಜಟ್ಟ’ ಸಿನಿಮಾ ನಿರ್ಮಿಸಿದ ಎನ್.ಎಸ್.ರಾಜ್‌ಕುಮಾರ್ ನಿರ್ಮಿಸುತ್ತಿದ್ದು, ಅಶೋಕ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇವರು ಈ ಹಿಂದೆ ಒಂದು ತಮಿಳು ಸಿನಿಮಾ ಮಾಡಿದ್ದು, ಕನ್ನಡದಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಮತ್ತೂಂದು ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಶಿವರಾಜಕುಮಾರ್ ಅವರ “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.
ಅಶೋಕ್ ಎನ್ನುವವರು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಶಿವಣ್ಣ ನಾಲ್ಕು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು, ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರ ಆಗಸ್ rನಲ್ಲಿ ಶುರುವಾಗುವ ಸಾಧ್ಯತೆ ಇದ್ದು, “ಶಿವಪ್ಪ’ ಎಂದು ಟೈಟಲ್ ಇಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.