ಶಿವರಾಜಕುಮಾರ್ ಈಗ ದ್ರೋಣ
Team Udayavani, Jun 11, 2018, 2:11 PM IST
ಶಿವರಾಜಕುಮಾರ್ “ಹರಿಹರ’ ಎಂಬ ಸಿನಿಮಾ ಮಾಡುತ್ತಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ಆ ಟೈಟಲ್ ಅನೌನ್ಸ್ ಆದ ಕೆಲ ದಿನಗಳ ನಂತರ “ಹರಿಹರ’ ಶೀರ್ಷಿಕೆ ಬದಲಾಗುವುದು ಎಂದು ನಿರ್ದೇಶಕ ಪ್ರಮೋದ್ ಚಕ್ರವರ್ತಿ ಹೇಳಿಕೊಂಡಿದ್ದರು. ಹಾಗಾದರೆ ಶಿವಣ್ಣ ಚಿತ್ರದ ಟೈಟಲ್ ಏನಿರಬಹುದೆಂಬ ಕುತೂಹಲ ಅನೇಕರಿಗಿತ್ತು. ಈಗ ಟೈಟಲ್ ಅಂತಿಮವಾಗಿದ್ದು, “ದ್ರೋಣ’ ಎಂದು ಟೈಟಲ್ ಇಡಲಾಗಿದೆ.
ಈ ಮೂಲಕ ಶಿವಣ್ಣ “ದ್ರೋಣ’ ಆಗಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ. ರಿವೇಂಜ್, ಸೆಂಟಿಮೆಂಟ್, ಕಾಮಿಡಿ ಜೊತೆಗೆ ಮನರಂಜನೆಯೇ ಮುಖ್ಯ ಉದ್ದೇಶ ಇಲ್ಲಿರಲಿದೆ. ಶಿವಣ್ಣ ಇಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜೂನ್ 22 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಚಿತ್ರದ ಫೋಟೋಶೂಟ್ ಕೂಡಾ ನಡೆದಿದ್ದು, ಶಿವಣ್ಣ ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್ ರಾವ್, ವಿಜಯಕಿರಣ್, ರೇಖಾದಾಸ್, ಪ್ರಕಾಶ್ ಹೆಗ್ಗೊಡು, ಆನಂದ್ ಮುಂತಾದವರಿದ್ದಾರೆ. ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣ, ರಾವ್ ಕ್ರಿಶ್ ಸಂಕಲನವಿದೆ. ಈ ಚಿತ್ರ ಡಾಲ್ಫಿನ್ ಮೀಡಿಯಾ ಹೌಸ್‌ನಡಿ ನಿರ್ಮಾಣವಾಗುತ್ತಿದೆ.
ಸದ್ಯ ಶಿವರಾಜಕುಮಾರ್ “ದಿ ವಿಲನ್’ ಹಾಗೂ “ಕವಚ’ ಚಿತ್ರೀಕರಣ ಮುಗಿದಿದ್ದು, “ದ್ರೋಣ’ ಆರಂಭವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.