ವೆಬ್ ಸೀರಿಸ್ ನತ್ತ ಶಿವರಾಜ್‌ಕುಮಾರ್
Team Udayavani, May 2, 2022, 4:46 PM IST
ಸಿನಿಮಾಗಳಲ್ಲಿ ಬಿಝಿಯಾಗಿರುವ ನಟ ಶಿವರಾಜ್ ಕುಮಾರ್ ವೆಬ್ ಸೀರಿಸ್‌ನಲ್ಲಿ ನಟಿಸಲಿದ್ದಾರೆ. ಅದು ಅವರ ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ.
ಇತ್ತೀಚೆಗೆ ಈ ಕುರಿತು ಮಾತನಾಡಿರುವ ಶಿವಣ್ಣ, “ನಾನು ಒಂದು ವೆಬ್ ಸೀರಿಸ್‌ನಲ್ಲಿ ನಟಿಸಲಿದ್ದೇನೆ. ಅದು ನನ್ನ ಮಗಳ ನಿರ್ಮಾಣದಲ್ಲಿ. ಕೋವಿಡ್ ಸಮಯದಲ್ಲಿ ಮನೆಯಲಿದ್ದಾಗ ತುಂಬಾ ವೆಬ್ ಸೀರಿಸ್‌ಗಳನ್ನು ನೋಡಿದೆ. ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಈ ತರಹನೂ ಮಾಡಬಹುದಲ್ಲ ಎಂಬ ಆಲೋಚನೆ ಬರುವಂತಹ ಕಥಾಹಂದರ ನೋಡಿ ಖುಷಿಯಾಯಿತು. ಈಗ ನನಗೂ ವೆಬ್ ಸೀರಿಸ್‌ನಲ್ಲಿ ನಟಿಸುವ ಮನಸ್ಸಾಗಿದೆ. ಸಿನಿಮಾಗಳ ಬಿಡುವಿನ ವೇಳೆಯಲ್ಲಿ ವೆಬ್ ಸೀರಿಸ್ ಮಾಡಬೇಕೆಂದಿದ್ದು, ಆ ಕುರಿತು ಚರ್ಚೆಯಾಗುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ತುಳು, ಕನ್ನಡ ಬೇರೆ ಬೇರೆ ಅಲ್ಲ: ಪುನೀತ್ ಸಂಸ್ಮರಣೆಯಲ್ಲಿ ಶಿವರಾಜ್ ಕುಮಾರ್
ಸದ್ಯ ಶಿವರಾಜ್‌ಕುಮಾರ್ ನಟನೆಯ “ಬೈರಾಗಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅವರದೇ ನಿರ್ಮಾಣದ “ವೇದ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.