![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 1, 2022, 9:40 AM IST
ಕನ್ನಡ ಚಿತ್ರರಂಗದಲ್ಲಿ ಶಿವನ ಕುರಿತಾಗಿ ಎಷ್ಟು ಹಾಡುಗಳು ಬಂದು ಯಾರಾದರೂ ಕೇಳಿದರೆ ಉತ್ತರ ಹೇಳ್ಳೋದು ಸ್ವಲ್ಪ ಕಷ್ಟ. ಅಷ್ಟೊಂದು ಹಾಡುಗಳು ಹುಟ್ಟಿಕೊಂಡಿವೆ. ಆ ಹಾಡಿಗಾಗಿಯೇ ಸನ್ನಿವೇಶವನ್ನು ಸೃಷ್ಟಿಸಿ, ಚಿತ್ರೀಕರಿಸಿದ ಉದಾಹರಣೆಗಳು ಕೂಡಾ ಇವೆ. ಇಂದು ಶಿವರಾತ್ರಿ. ಇಂದು ಕೂಡಾ ಕನ್ನಡ ಚಿತ್ರರಂಗ ವಿಭಿನ್ನವಾಗಿ ಶಿವರಾತ್ರಿಯನ್ನು ಆಚರಿಸುತ್ತಿದೆ. ಅದು ತಮ್ಮ ಸಿನಿಮಾ ಪೋಸ್ಟರ್, ಟೈಟಲ್, ಹಾಡು ಲಾಂಚ್ ಮಾಡುವ ಮೂಲಕ.
ಈಗಾಗಲೇ “ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಹಾಗೂ ಪ್ರಜ್ವಲ್ ದೇವರಾಜ್ ನಟಿಸಿರುವ “ವೀರಂ’ ಚಿತ್ರದ ಶಿವನ ಕುರಿತಾದ ಹಾಡುಗಳು ಬಿಡುಗಡೆಯಾಗಿವೆ. ಇದರ ಜೊತೆಗೆ “ದುನಿಯಾ’ ವಿಜಯ್ ನಟನೆ, ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಕೂಡಾ ಇಂದು ಬಿಡುಗಡೆಯಾಗುತ್ತಿದೆ. “ಸಲಗ’ ನಂತರ ವಿಜಯ್ ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ನಿರೀಕ್ಷೆ ಹೆಚ್ಚಿದೆ.
ಪುನೀತ್ ರಾಜ್‌ಕುಮಾರ್ ನಟನೆಯ “ಜೇಮ್ಸ್’ ಚಿತ್ರ ಮಾಚ್ 17ಕ್ಕೆ ಬಿಡುಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ “ಟ್ರೇಡ್ ಮಾರ್ಕ್’ ಎಂಬ ಲಿರಿಕಲ್ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಈ ಹಾಡನ್ನು ಅದ್ಧೂರಿಯಾಗಿ ಸ್ವಾಗತಿಸಲು ಪುನೀತ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ:ಕಿರುತೆರೆಯ ಮೂಲಕ ಮನೆಮನದ ಪ್ರೀತಿ – ಪ್ರೋತ್ಸಾಹಗಳಿಸಿದ ನಟ ಕಿರಣ್ ರಾಜ್ ಸ್ಮಾರ್ಟ್ ಲುಕ್ಸ್
ಇನ್ನು, ರಮೇಶ್ ಅರವಿಂದ್ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರದ ಹೊಸ ಪೋಸ್ಟರ್ ಕೂಡಾ ಶಿವರಾತ್ರಿ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಇದಲ್ಲದೇ ಇನ್ನೊಂದಿಷ್ಟು ಹೊಸಬರ ಸಿನಿಮಾಗಳ ಫಸ್ಟ್‌ಲುಕ್, ಟೈಟಲ್‌ಗಳು ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗ ಶಿವಧ್ಯಾನ ಮಾಡಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.