ಕಡಲ ತೀರದಲ್ಲಿ ‘ಫಾರ್ Regn’ ಹಾಡಿನ ಚಿತ್ರೀಕರಣ
Team Udayavani, Dec 30, 2020, 8:00 PM IST
ಬೆಂಗಳೂರು:ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸುತ್ತಿರುವ ‘ಫಾರ್ Regn’ ಸಿನಿಮಾದ ಶೂಟಿಂಗ್ ಕರಾವಳಿ ತೀರದ ಉಡುಪಿಯಲ್ಲಿ ಪ್ರಾರಂಭಗೊಂಡಿದೆ.
ಇದೊಂದು ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣವಾಗಿದ್ದು, ಉಡುಪಿ ಸೇರಿದಂತೆ ಮಂಗಳೂರು, ಸಕಲೇಶಪುರ ಮುಂತಾದ ಕಡೆಗಳಲ್ಲಿ ಒಟ್ಟು 5 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಶ್ಯಾಡೋ, ಹರಿವಿನ ಹಾದಿ, ಎಲ್ಲೋ ಬೋರ್ಡ್ ಮುಂತಾದ ಯಶಸ್ವಿ ಕಿರು ಚಿತ್ರಗಳನ್ನು ನಿರ್ದೇಶಿಸಿರುವ ನವೀನ್ ದ್ವಾರಕನಾಥ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ನಿರ್ದೇಶಕ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅಧೀರನ ಅಭಿನಯದಲ್ಲಿ ರಾಜಿ ಇಲ್ಲ: ಸಂಜಯ್ ದತ್ತ್
ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಮೊದಲಬಾರಿ ತೆರೆ ಹಂಚಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ತಬಲ ನಾಣಿ ಸೇರಿದಂತೆ ಪ್ರಸಿದ್ಧ ತುಳು ನಟ ಅರವಿಂದ ಬೋಳಾರ್ ಕೂಡಾ ಬಣ್ಣ ಹಚ್ಚಲಿದ್ದಾರೆ.
ಕಾಮಿಡಿ ರೊಮ್ಯಾಂಟಿಕ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಸುಧಾರಾಣಿ, ಸುಧಾ ಬೆಳುವಾಡಿ ಮತ್ತಿತರರು ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ನವೀನ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಹರೀಶ್ ಆರ್ ಸಂಗೀತದ ಮೋಡಿ ಈ ಸಿನಿಮಾದಲ್ಲಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.