ನೀರಿನ ಮಿತ ಬಳಕೆ ಕುರಿತ ಕಿರುಚಿತ್ರ ವಾರಿ
Team Udayavani, May 8, 2017, 11:54 AM IST
ಈಗಾಗಲೇ ಹಲವು ಸಮಸ್ಯೆಗಳ ಕುರಿತು ಕಿರುಚಿತ್ರ, ಸಿನಿಮಾ ಮೂಡಿ ಬಂದಿವೆ. ಈಗ ಆ ಸಾಲಿಗೆ ಮೈಸೂರು ಹುಡುಗರೆಲ್ಲ ಸೇರಿ “ವಾರಿ’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಪ್ರಮುಖ್ ಏಂಜೆಲೋ ಹೊಸಬರ ಯೋಚನೆ ಮೆಚ್ಚಿಕೊಂಡು ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಈಗ ನೀರಿನ ಮಿತ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು, “ವಾರಿ’ ಹೆಸರಿನ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ರಾಜು ವೈವಿಧ್ಯ ಈ ಕಿರುಚಿತ್ರದ ನಿರ್ದೇಶಕರು.
ಪ್ರಸ್ತುತ ದಿನಗಳಲ್ಲಿ ನೀರು ಅತ್ಯಗತ್ಯವಾಗಿದ್ದು, ಯಥೇತ್ಛವಾಗಿ ನೀರು ಬಳಸಿದರೆ, ಮುಂದೊಂದು ದಿನ ನೀರಿಗಾಗಿ ಪರಿತಪಿಸಬೇಕಾಗುತ್ತೆ ಎಂಬ ವಿಷಯ ಇಟ್ಟುಕೊಂಡು ಒಂದು ಕಿರುಚಿತ್ರ ನಿರ್ದೇಶಿಸಿರುವ ರಾಜು ವೈವಿಧ್ಯ, ಆ ಕಿರುಚಿತ್ರದಲ್ಲಿ ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ನೀರಿನ ಅವಶ್ಯಕತೆ ಬಗ್ಗೆ ತಿಳಿಸಬೇಕು ಎಂಬ ಸಣ್ಣ ಸಂದೇಶ ಸಾರಿದ್ದಾರೆ. ಅಂದಹಾಗೆ, ಈ “ವಾರಿ’ ಎಂಬ ಕಿರುಚಿತ್ರದಲ್ಲಿ ಪ್ರಧಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಉಳಿದಂತೆ ರಾಜು ವೈವಿಧ್ಯ, ಸ್ನೇಹಜೀವಿ ಪುಟ್ಟು ಇತರರು ಕಾಣಿಸಿಕೊಂಡಿದ್ದಾರೆ. ಹದಿನೈದು ನಿಮಿಷಗಳ ಈ ಕಿರುಚಿತ್ರ, ಮೈಸೂರಿನಲ್ಲಿ ಏಪ್ರಿಲ್ 14 ರಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಂಬೇಡ್ಕರ್ ದಿನಾಚರಣೆ ಅಂಗವಾಗಿ ನಡೆದ “ಭಾರತದ ಪ್ರಸ್ತುತ ಸಮಸ್ಯೆಗಳು’ ಎಂಬ ಚಿಂತನಾ ಸಭೆಯಲ್ಲಿ “ವಾರಿ’ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿದೆ. ನಿರಂಜನ್ ಕ್ಯಾಮೆರಾ ಹಿಡಿದರೆ, ಸಾಯಿಕಿರಣ್ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.