ರಿಲೇ ಓಟದಲ್ಲಿ ಶ್ರೀಕಿ ಸ್ಪರ್ಧೆ!
Team Udayavani, Oct 2, 2017, 12:11 PM IST
ಕನ್ನಡದಲ್ಲಿ ಕ್ರೀಡೆಗೆ ಸಂಬಂಧಿಸಿದ ಹಲವು ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ರಿಲೇ’ ಎಂಬ ಹೊಸ ಚಿತ್ರವೂ ಸೇರ್ಪಡೆಯಾಗಿದೆ. ಈ ಚಿತ್ರದ ಮೂಲಕ ಶ್ರೀಕಿ ಪುನಃ ಎಂಟ್ರಿಯಾಗಿದ್ದಾರೆ. “ಗೋವಾ’ ಚಿತ್ರದ ಬಳಿಕ ಶ್ರೀಕಿ ಎಲ್ಲೂ ಸುದ್ದಿಯಾಗಲಿಲ್ಲ. ಆ ಬಳಿಕ ಮದುವೆ ಇತ್ಯಾದಿ ಕೆಲಸಗಳಿಂದ ಬಿಜಿಯಾಗುವ ಮೂಲಕ ಸುದ್ದಿಯಾಗಿದ್ದರಷ್ಟೇ. ಈಗ “ರಿಲೇ’ ಆಡೋಕೆ ಹೊರಟಿದ್ದಾರೆ.
ಈ ಸಿನಿಮಾ ಮೂಲಕ ಪ್ರಕಾಶ್ ಹೆಬ್ಟಾಳ ನಿರ್ದೇಶಕರಾಗಿದ್ದಾರೆ. ದಯಾಳ್ ಅವರ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು, ಕ್ರೀಡೆ ಕುರಿತ ಕಥೆ ಹೆಣೆದು ನಿರ್ದೇಶಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಹೆಬ್ಟಾಳ ಹೇಳುವಂತೆ, “ಇದೊಂದು ಕ್ರೀಡೆ ಕುರಿತಾದ ಚಿತ್ರ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಥ್ಲೆಟ್ ಆಗಿರುವ ನಾಯಕ, ಅಲ್ಲಿನ ಕೆಟ್ಟ ರಾಜಕೀಯ ವ್ಯವಸ್ಥೆ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟಾಗ, ಆತ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಭಾಗವಹಿಸುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆ.
ಆ ಬಳಿಕ ಮುಂದೆ ಏನು ಆಗುತ್ತೆ ಅನ್ನೋದನ್ನು ರೋಚಕವಾಗಿ ತೋರಿಸುತ್ತೇನೆ’ ಎನ್ನುತ್ತಾರೆ ನಿರ್ದೇಶಕರು. ಇದು ರಿಲೇ ಕ್ರೀಡೆ ಕುರಿತ ಚಿತ್ರವಾದ್ದರಿಂದ ಅದರ ಬಗ್ಗೆ ಸಾಕಷ್ಟು ಸಮೀಕ್ಷೆ ನಡೆಸಿ, ಎಲ್ಲವನ್ನೂ ತಿಳಿದುಕೊಂಡು, ಅದಕ್ಕೆ ತಕ್ಕಂತಹ ಕಥೆ ಹೆಣೆದು, ಪಾತ್ರಗಳನ್ನು ಪೋಣಿಸಿ ಚಿತ್ರೀಕರಿಸಿದ್ದಾರಂತೆ. ಈಗಾಗಲೇ ಬೆಂಗಳೂರು ಸುತ್ತಮುತ್ತಲ ಸ್ಥಳಗಳಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರಂತೆ.
ಉಳಿದ ಚಿತ್ರೀಕರಣವನ್ನು ದೆಹಲಿ, ಅಂಡಮಾನ್ ಹಾಗು ಕೊಲೊಂಬೋದಲ್ಲಿ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿಲ್ಲ. ಕನ್ನಡದ ಹುಡುಗಿಯೊಬ್ಬಳನ್ನು ಆಯ್ಕೆ ಮಾಡಲು ತಂಡ ನಿರ್ಧರಿಸಿದೆ. ಇಷ್ಟರಲ್ಲೇ ಆಯ್ಕೆ ನಡೆಯಲಿದೆ. ಉಳಿದಂತೆ ಚಿತ್ರದಲ್ಲಿ ಖಳನಾಯಕರಾಗಿ ರವಿಶಂಕರ್ ನಟಿಸಿದರೆ, ನಾಯಕನ ತಾಯಿಯಾಗಿ ಜೂಲಿ ಲಕ್ಷೀ ಅವರು ಆಯ್ಕೆಯಾಗಿದ್ದಾರೆ.
ಶ್ರೀಕಿ ಅವರು ಒಂದೊಳ್ಳೆಯ ಮಾಸ್ ಕಥೆ ಬಂದರೆ, ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದರಂತೆ. ಅದೇ ಸಮಯಕ್ಕೆ ಪ್ರಕಾಶ್ ಹೆಬ್ಟಾಳ ಅವರು ಈ ಕಥೆ ಹೇಳಿದ ಕೂಡಲೇ, ಶ್ರೀಕಿ ಅವರಿಗೆ ಇಷ್ಟವಾಗಿ, ಗ್ರೀನ್‌ಸಿಗ್ನಲ್ ಕೊಟ್ಟರಂತೆ. ಈ ಪಾತ್ರಕ್ಕಾಗಿ ಶ್ರೀಕಿ ಸಾಕಷ್ಟು ತಯಾರಿ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ. ಅಂದಹಾಗೆ, ಅವರು ತಮ್ಮ ದೇಹವನ್ನು ದಂಡಿಸಿ ಪಾತ್ರಕ್ಕೆ ಸಿದ್ದವಾಗಿರುವುದುಂಟಂತೆ. ಚಿತ್ರದಲ್ಲಿ ರಾಜಚರಣ್ ಎಂಬ ಇನ್ನೊಬ್ಬ ನಟನಿಗೂ ಇಲ್ಲಿ ಪ್ರಮುಖ ಪಾತ್ರವಿದೆ.
ಕೆ.ರವಿವರ್ಮ ಅವರ ಸಾಹಸವಿದೆ. ಪಾಂಡಿಕುಮಾರ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಸಂಕೇತ್ ರಾಜಪೇಟೆ ಅವರ ಸಂಕಲನವಿದೆ. ಮೋಹನ್.ಬಿ. ಕೆರೆ ಕಲಾನಿರ್ದೇಶನ ಮಾಡಿದರೆ, ಗೌತಂ ಶ್ರೀವತ್ಸ ಅವರು ಸಂಗೀತ ನೀಡಿದ್ದಾರೆ. ಇನ್ನು, ಮಂಜುನಾಥ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಅನುಭವ. ಇತ್ತೀಚೆಗೆ ಚಿತ್ರದ ಮೋಷನ್ ಪಿಕ್ಚರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.