ಇಂದು ಶ್ರೇಯಸ್ ನಟನೆಯ ‘ರಾಣ’ ಟ್ರೇಲರ್ ರಿಲೀಸ್
Team Udayavani, Oct 23, 2022, 11:21 AM IST
ಶ್ರೇಯಸ್ ನಾಯಕರಾಗಿ ನಟಿಸಿರುವ “ರಾಣ’ ಚಿತ್ರ ನ.11ರಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್‌ಲಿಸ್ಟ್ ಸೇರಿದೆ. ಈಗ ಚಿತ್ರತಂಡ ಚಿತ್ರದ ಟ್ರೇಲರ್ ರಿಲೀಸ್ ಮಾಡಲು ಮುಂದಾಗಿದ್ದು, ಇಂದು ಸಂಜೆ ಟ್ರೇಲರ್ ಬಿಡುಗಡೆಯಾಗಲಿದೆ. ಈ ಮೂಲಕ ಚಿತ್ರತಂಡ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡುತ್ತಿದೆ. ಚಿತ್ರ “ಗುಜ್ಜಲ್ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ.
ಮೂರು ವರ್ಷಗಳ ನಂತರ ಮತ್ತೆ ತೆರೆಗೆ ಬರುತ್ತಿರುವ ಶ್ರೇಯಸ್ ಚಿತ್ರಕ್ಕಾಗಿ ತಮ್ಮ ನೂರರಷ್ಟು ಶ್ರಮ ಹಾಕಿದ್ದಾರೆ. ಯಾವುದೇ ಶಾಟ್ಸ್ ಗಳನ್ನು ಮಾಡುವ ಮುನ್ನ, ತಮ್ಮ ಆಪ್ತವಲಯದಲ್ಲಿ ಸಲಹೆ ಕೂಡಾ ಪಡೆದು ಶ್ರೇಯಸ್ ಅದ್ಭುತವಾಗಿ ನಟಿಸಿದ್ದಾರೆ. “ಸಿನಿಮಾ ಬಿಟ್ಟು ನನಗೆ ಬೇರೆ ಯಾವುದರ ಬಗ್ಗೆ ಯೋಚನೆ ಇಲ್ಲ’ ಎನ್ನುತ್ತಾರೆ. ಚಿತ್ರದ ಹಾಡಿಗಾಗಿ ಸತತ 15 ದಿನಗಳ ಕಾಲ ಅಭ್ಯಾಸ ಮಾಡಿರುವ ಶ್ರೇಯಸ್, ಡಾನ್ಸ್‌ಗೂ ಮಹತ್ವನ್ನು ನೀಡಿದ್ದಾರೆ. ದಿನವೂ ಕಲಿಕೆಯಲ್ಲಿ ತೊಡಗಿರುವ ಶ್ರೇಯಸ್ ಚಿತ್ರಕ್ಕಾಗಿ ರಿಸ್ಕಿ ಸ್ಟಂಟ್ ಗಳನ್ನು ಮಾಡಿದ್ದಾರೆ. ಈ ವೇಳೆ ಗಾಯಗಳಾಗಿದ್ದರೂ, ಫಿಜಿಯೋ ಪಡೆದು ಶೂಟ್ ಮಾಡಿದ್ದಾರೆ. “ಸೆಟ್‌ನಲ್ಲಿ ಕೆಲ ಫೈಟಿಂಗ್ ಸೀನ್‌ಗಳನ್ನು ಮಾಡುವಾಗ ನೋವಾದಾಗ, ಅಲ್ಲೇ ಫಿಜಿಯೋ ಮಾಡಿಸಿ ಫೈಟ್ ಸೀನ್ ಮಾಡಿದ್ದೂ ಉಂಟು’ ಎಂಬುದು ಶ್ರೇಯಸ್ ಮಾತು.
ಇದನ್ನೂ ಓದಿ:ಇಂದು ಭಾರತ-ಪಾಕ್ ಚುಟುಕು ಕದನ: ಹೇಗಿದೆ ಮೆಲ್ಬರ್ನ್ ಹವಾಮಾನ? ಮಳೆ ಸಾಧ್ಯತೆ ಎಷ್ಟಿದೆ?
“ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅರ್ಧದಷ್ಟು ಮಂದಿ ಮೂಲತಃ ಬೆಂಗಳೂರಿನವರಾಗಿರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡವರು. ಇಂತಹದ್ದೇ ಓರ್ವ ಹಳ್ಳಿ ಹುಡುಗ ಪೇಟೆಗೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಆಗ ಅವನಿಗೆ ಎದುರಾಗುವ ಸಮಸ್ಯೆಗಳು ಏನು? ಆತ ಹೇಗೆ ಕಷ್ಟಗಳನ್ನು ಮೆಟ್ಟಿನಿಲ್ಲುತ್ತಾನೆ ಎಂಬ ಅಂಶದೊಂದಿಗೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಗೆಳೆತನದ ಮಹತ್ವ ತೋರಿಸಲಾಗಿದೆ. ಗೆಳೆತನವೇ ಹೈಲೈಟ್’ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.