‘ಕಬ್ಜ’ಗೆ ಎಂಟ್ರಿ ನೀಡಿದ ಆರ್‌ಆರ್‌ಆರ್ ಬೆಡಗಿ
Team Udayavani, Mar 8, 2022, 9:43 AM IST
ಪ್ಯಾನ್ ಇಂಡಿಯಾ ಸಿನಿಮಾವಾಗಿ ಆರಂಭದಿಂದಲೂ ಸಖತ್ ಸೌಂಡ್ ಮಾಡಿಕೊಂಡೇ ಬರುತ್ತಿರುವ ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ “ಕಬ್ಜ’ ಸಿನಿಮಾದ ನಾಯಕಿ ಯಾರು ಎಂಬ ಕುತೂಹಲ ಆರಂಭದಿಂದಲೇ ಇತ್ತು. ಈ ನಡುವೆಯೇ ಅನೇಕ ನಟಿಯರ ಹೆಸರುಗಳು ಓಡಾಡುತ್ತಲೇ ಇತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಜೊತೆಗೆ ಚಂದ್ರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಾಯಕಿಯನ್ನೇ ಕರೆತಂದಿದ್ದಾರೆ.
ನಟಿ ಶ್ರೀಯಾ ಶರಣ್ ಈಗ “ಕಬ್ಜ’ ತಂಡವನ್ನು ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಧುಮತಿ ಎಂಬ ಪಾತ್ರ ಮಾಡುತ್ತಿದ್ದು. ಅವರ ಫಸ್ಟ್‌ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರೆಟ್ರೋ ಶೈಲಿ ಪ್ಯಾನ್ ಇಂಡಿಯಾದಲ್ಲಿ ರಾಣಿಯಾಗಿ ಶ್ರೀಯಾ ಕಾಣಿಸಿಕೊಳ್ಳುತ್ತಿದ್ದಾರೆ.
ಕಬ್ಜ ಸಿನಿಮಾದಲ್ಲಿ ಎರಡು ಪ್ರಮುಖ ನಾಯಕಿಯ ಪಾತ್ರವಿದ್ದು, ಆ ಪೈಕಿ ಒಬ್ಬರನ್ನು ಈಗ ರಿವೀಲ್ ಮಾಡಿದ್ದಾರೆ ಆರ್.ಚಂದ್ರು. ರಾಜಮೌಳಿಯವರ “ಆರ್‌ಆರ್‌ಆರ್’ ಹಾಗೂ ಅಜಯ್ ದೇವಗನ್ ಜತೆ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಶ್ರೀಯಾ ಸದ್ಯ ಬಹು ಬೇಡಿಕೆಯ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿದ್ದು, “ಕಬ್ಜ’ ಸಿನಿಮಾದ ಕಥೆ ಕೇಳಿ ಖುಷಿಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
“ಕೆಜಿಎಫ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸಿನಿಮಾವಾಗಿ “ಕಬ್ಜ’ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ. ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ “ಕಬ್ಜ’ ಚಿತ್ರಕ್ಕೆ ಬೇಡಿ ಬಂದಿದ್ದು, ಈ ಚಿತ್ರದಲ್ಲಿ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ.
Unveiling the first look of our 1’st queen..Welcoming Shirya Saran aboard.. happy to have you on set @shriya1109 ?✨#Kabzaa#Indianrealstarupendra#KichchaSudeepa#Rchandru#ShriyaSaran#Panindiamoviekabzaa pic.twitter.com/vP2z6eW81i
— R.Chandru (@rchandru_movies) March 7, 2022
ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಎಂದ ಮೇಲೆ ಸಾಕಷ್ಟು ಸಮಯ ತೆಗೆದುಳ್ಳೋದು ಸಹಜ. ಅದಕ್ಕೆ ಸಾಕ್ಷಿಯಾಗಿ “ಆರ್‌ಆರ್‌ಆರ್’ ನಾಲ್ಕು ವರ್ಷ,”ಕೆಜಿಎಫ್’ ಮೂರು ವರ್ಷ ತೆಗೆದುಕೊಂಡಿದೆ. ಹಾಗೆಯೇ “ಕಬ್ಜ’ ಕೂಡಾ ಸತತ ಎರಡು ವರ್ಷಗಳಿಂದ ಶೂಟಿಂಗ್ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ‘ಕಬ್ಜ’ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ. ಉಪೇಂದ್ರ ಹಾಗೂ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ಸೇರಿದಂತೆ ಬಹುತೇಕ “ಕೆಜಿಎಫ್’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ.ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.