ಶ್ರುತಿ ಹರಿಹರನ್ ಇನ್ನೊಂದು ಕಿರುಚಿತ್ರ ನಿರ್ಮಾಣ
Team Udayavani, Jul 18, 2017, 10:43 AM IST
ನಾಯಕಿಯಾಗಿ ಬಿಝಿಯಾಗಿರುವ ಶ್ರುತಿ ಹರಿಹರನ್ ಈಗಾಗಲೇ “ಲಾಸ್ಟ್ ಕನ್ನಡಿಗ’ ಎಂಬ ಕಿರುಚಿತ್ರ ನಿರ್ಮಿಸಿರುವ ಸುದ್ದಿಯನ್ನು ನೀವು ಓದಿರುತ್ತೀರಿ. ತಮ್ಮ “ಕಲಾತ್ಮಿಕ’ ಎಂಬ ಬ್ಯಾನರ್ನಡಿ ಶ್ರುತಿ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಈಗಾಗಲೇ ಅನೇಕ ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಮುಂದಿನ ತಿಂಗಳು “ಲಾಸ್ಟ್ ಕನ್ನಡಿಗ’ ಬಿಡುಗಡೆಯಾಗಲಿದೆ. ಈ ನಡುವೆಯೇ ಶ್ರುತಿ ಹರಿಹರನ್ ಮತ್ತೂಂದು ಕಿರುಚಿತ್ರ ನಿರ್ಮಿಸಿದ್ದಾರೆ. ಅದು “ರೀಟಾ’.
ಇದು ಕೂಡಾ ಸಂಪೂರ್ಣ ಹೊಸಬರ ತಂಡ. ರಚನ್ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಶ್ರೇಯಾ ಅಂಚನ್, ರೂಪಾ ನಟರಾಜ್, ಅಭಿನವ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. “ಮ್ಯಾರಿಟಲ್ ರೇಪ್’ ಕಾನ್ಸೆಪ್ಟ್ನಡಿ ಈ ಕಿರುಚಿತ್ರ ತಯಾರಾಗಿದ್ದು, ಇಂತಹ ಸಮಸ್ಯೆ ಕಾನೂನು ಮುಂದೆ ಬಂದರೆ ಕಾನೂನು ಏನು ಹೇಳುತ್ತದೆ. ನಮ್ಮ ಭಾರತದ ಕಾನೂನು ಯಾವ ರೀತಿ ಇದೆ ಎಂಬ ಅಂಶದೊಂದಿಗೆ ಈ ಕಿರು ಚಿತ್ರ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಕೂಡಾ ಮುಗಿದಿದೆ.
“ಈ ಕಾನ್ಸೆಪ್ಟ್ ತುಂಬಾ ಇಷ್ಟವಾಯಿತು. ಈ ಅಂಶ ಬಂದಾಗ ಎದುರಾಗುವ ಕಾನೂನು ತೊಡಕು ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಒಂದು ಹೊಸ ಪ್ರಯತ್ನ’ ಎಂಬುದು ಶ್ರುತಿ ಹರಿಹರನ್ ಮಾತು. ಶ್ರುತಿ ಹರಿಹರನ್ “ಟೇಸ್ಲಾ’ ಎಂಬ ಮತ್ತೂಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದು ನಾಯಕಿ ಪ್ರಧಾನ ಚಿತ್ರ. ವಿನೋದ್ ಎನ್ನುವವರು ಆ ಸಿನಿಮಾದ ನಿರ್ದೇಶಕರು.
ಐದು ವಿಭಿನ್ನ ಗೆಟಪ್ಗ್ಳು ಆ ಸಿನಿಮಾದಲ್ಲಿ ಬರುತ್ತವೆಯಂತೆ. “ಹೊಸ ಬಗೆಯ ಚಿತ್ರ. ಈ ಚಿತ್ರವನ್ನು ನನ್ನದೇ ಕಲಾತ್ಮಿಕ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅದರ ಫಂಡಿಂಗ್ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ನನಗೆ ಆ ತರಹದ ವಿಭಿನ್ನ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳೋದೆಂದರೆ ತುಂಬಾ ಇಷ್ಟ’ ಎನ್ನುತ್ತಾರೆ ಶ್ರುತಿ. ಸದ್ಯ “ತಾರಕ್’ ಚಿತ್ರೀಕರಣ ಮುಗಿಸಿರುವ ಶ್ರುತಿ ಡಬ್ಬಿಂಗ್ನಲ್ಲಿ ಬಿಝಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.